Connect with us

Districts

ಕಂಬವೇರಿ ಕೆಲಸ ಮಾಡ್ತಿದ್ದಾಗ ವಿದ್ಯುತ್ ಪ್ರವಹಿಸಿ ಲೈನ್‍ಮ್ಯಾನ್ ಸಾವು

Published

on

ಮಡಿಕೇರಿ: ವಿದ್ಯುತ್ ಪರಿವರ್ತಕ ದುರಸ್ತಿ ಮಾಡುವಾಗ ವಿದ್ಯುತ್ ಪ್ರವಹಿಸಿದ ಪರಿಣಾಮ ಸ್ಥಳದಲ್ಲೇ ಲೈನ್‍ಮ್ಯಾನ್ ಮೃತಪಟ್ಟಿರುವ ಘಟನೆ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ನಡೆದಿದೆ.

ಸಿ. ಆರ್ ಯೋಗೇಶ್ (25) ಪ್ರಾಣ ಕಳೆದುಕೊಂಡ ಲೈನ್‍ಮ್ಯಾನ್. ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆಯರಾಗಿರುವ ಯೋಗೇಶ್ ಕಳೆದ 4 ವರ್ಷಗಳಿಂದ ಲೈನ್‍ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು.

ಯೋಗೇಶ್ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಹೊಸೂರು ಗೋಪಾಲಕೃಷ್ಣ ಅವರ ತೋಟದಲ್ಲಿ ವಿದ್ಯುತ್ ಕಂಬವೇರಿ ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿದೆ. ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಯೋಗೇಶ್ ಎಚ್ಚರ ವಹಿಸದೆ ಹಾಗೂ ಲೈನ್ ಆಫ್ ಮಾಡದಿರುವುದೇ ಇದಕ್ಕೆಲ್ಲ ಕಾರಣ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *