ದುಬೈ: ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಸೆಕೆಂಡ್ ಇನ್ನಿಂಗ್ಸ್ ಐಪಿಎಲ್ ಆರಂಭಕ್ಕೂ ಮೊದಲು ದುಬೈ ಕ್ರಿಕೆಟ್ ಮಂಡಳಿ ಪ್ರೇಕ್ಷಕರಿಗೆ ಸಿಹಿ ಸುದ್ದಿ ನೀಡಿದೆ. ನಿಯಮಿತ ಪ್ರೇಕ್ಷಕರಿಗೆ ಸ್ಟೇಡಿಯಂ ಪ್ರವೇಶಕ್ಕೆ ಅನುಮತಿ ನೀಡಿದೆ.
Advertisement
ಕೊರೊನಾದಿಂದಾಗಿ ಐಪಿಎಲ್ ವೀಕ್ಷಣೆಗೆ ಪ್ರೇಕ್ಷಕರ ಗ್ಯಾಲರಿ ಪ್ರವೇಶ ನಿಷೇಧಿಸಲಾಗಿತ್ತು. ಆದರೆ ಇದೀಗ ಯುಎಇನಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯ ದ್ವಿತೀಯ ಚರಣದ ಪಂದ್ಯಗಳಿಗೆ ಸೀಮಿತ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಿಕೊಡಲು ಐಪಿಎಲ್ ಆಯೋಜಕ ಮಂಡಳಿ ನಿರ್ಧರಿಸಿದೆ. ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಫೀಲ್ಡಿಂಗ್ ಮಾಡಿದ ಶ್ವಾನಕ್ಕೆ ಐಸಿಸಿ ಪುರಸ್ಕಾರ..!
Advertisement
NEWS – VIVO IPL 2021 set to welcome fans back to the stadiums.
More details here – https://t.co/5mkO8oLTe3 #VIVOIPL
— IndianPremierLeague (@IPL) September 15, 2021
Advertisement
ಯುಎಇನ ದುಬೈ, ಶಾರ್ಜಾ ಮತ್ತು ಅಬುಧಾಬಿ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿದ್ದು, ಈ ಎಲ್ಲಾ ಸ್ಟೇಡಿಯಂಗಳಿಗೆ ಪ್ರೇಕ್ಷರಿಗೆ ಪ್ರವೇಶ ಕಲ್ಪಿಸಿಕೊಡುವ ನಿರೀಕ್ಷೆ ಇದೆ. ಆದರೆ ಎಷ್ಟು ಪ್ರಮಾಣದಲ್ಲಿ ಅವಕಾಶ ಎಂಬುದು ಇನ್ನೂ ಕೂಡ ಸಂಘಟಕರು ಸ್ಪಷ್ಟಪಡಿಸಿಲ್ಲ. ಆದರೆ ಸೆಪ್ಟೆಂಬರ್ 16ರಿಂದ ಆನ್‍ಲೈನ್‍ನಲ್ಲಿ ಟಿಕೆಟ್ ಮಾರಾಟ ಆರಂಭವಾಗಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಎಬಿಡಿ ಸಿಡಿಲಬ್ಬರದ ಶತಕಕ್ಕೆ ಬೆಚ್ಚಿಬಿದ್ದ ಆರ್ಸಿಬಿ ಬೌಲರ್ಸ್
Advertisement