ಹಿರಿಯ ನಟಿ ಲೀಲಾವತಿ ಅವರು ತಮ್ಮ ಸ್ವಂತ ಜಮೀನು ಮಾರಿ, ಬೆಂಗಳೂರು ಗ್ರಾಮಾಂತರದ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ಪ್ರಾಥಮಿಕ ಆಸ್ಪತ್ರೆಗೆ ನಿರ್ಮಿಸಲು ಮುಂದಾಗಿದ್ದಾರೆ. ಲೀಲಾವತಿ ಅವರ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಹಿರಿಯ ನಟಿಯ ಈ ಸಮಾಜಮುಖಿ ಕೆಲಸಕ್ಕೆ ಕರುನಾಡೇ ಭೇಷ್ ಎಂದಿದೆ. ಇದನ್ನೂ ಓದಿ : ಇಡೀ ಥಿಯೇಟರ್ ನಲ್ಲಿ ಒಬ್ಬರೇ ಕೂತು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ವೀಕ್ಷಿಸಿದ ಡೈಮಂಡ್ ರವಿ
Advertisement
ಈ ಮೊದಲು ಇದೇ ಗ್ರಾಮದಲ್ಲಿಯೇ ಲೀಲಾವತಿ ಮತ್ತು ಪುತ್ರ ವಿನೋದ್ ಆರೋಗ್ಯ ಕೇಂದ್ರವನ್ನು ನಿರ್ಮಾಣ ಮಾಡಿದ್ದರು. ಒಬ್ಬರು ವೈದ್ಯರನ್ನು ಕೊಡಿ ಎಂದು ಸರಕಾರಕ್ಕೆ ಹಲವು ಮನವಿಗಳನ್ನೂ ಸಲ್ಲಿಸಿದ್ದರು. ಕೊನೆಗೂ ವೈದ್ಯರಿಗೂ ತಾವೇ ಸಂಬಳ ಕೊಟ್ಟೂ, ಆರೋಗ್ಯ ಕೇಂದ್ರವನ್ನು ನೋಡಿಕೊಳ್ಳುವಂತೆ ಮಾಡಿದ್ದರು. ಇದೀಗ ತಮ್ಮ ಸ್ವಂತ ಹಣದಲ್ಲಿ ಅಲ್ಲಿಯೇ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲು ಮುಂದಾಗಿದ್ದಾರೆ. ಇದನ್ನೂ ಓದಿ : ಎರಡು ಮಕ್ಕಳ ಜತೆಗೆ ಮತ್ತೊಂದು ಮಗು ಬೇಕು ಎಂದ ಬಿಗ್ ಬಾಸ್ ಬೆಡಗಿ ಡಿಂಪಿ
Advertisement
Advertisement
ಆಸ್ಪತ್ರೆಯ ನಿರ್ಮಾಣದ ಕೆಲಸ ಈಗಾಗಲೇ ಶುರುವಾಗಿದೆ. ಮೊನ್ನೆಯಷ್ಟೇ ಭೂಮಿ ಪೂಜೆಯನ್ನು ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಕುಮಾರ್ ಮತ್ತು ನೆಲಮಂಗಲದ ಶಾಸಕ ಡಾ.ಕೆ ಶ್ರೀನಿವಾಸ ಮೂರ್ತಿ ಮಾಡಿದ್ದಾರೆ. ಸರಕಾರದ ಕಡೆಯಿಂದ ಸೌಲಭ್ಯ ಕೊಡಿಸುವುದಾಗಿಯೂ ಶಾಸಕರು ಹೇಳಿದ್ದಾರೆ. ಆದರೂ, ಲೀಲಾವತಿ ಅವರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಪ್ರಾಥಮಿಕ ಆಸ್ಪತ್ರೆಯನ್ನು ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದಾರೆ. ಇದನ್ನೂ ಓದಿ : ಗಣೇಶ್ ಮತ್ತು ಪ್ರೀತಂ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ
ಈ ಆಸ್ಪತ್ರೆಯ ನಿರ್ಮಾಣಕ್ಕಾಗಿ ಅವರು ಚೆನ್ನೈನಲ್ಲಿರುವ ತಮ್ಮ ಸ್ವಂತ ಜಮೀನನ್ನು ಮಾರಾಟ ಮಾಡಲೂ ಮುಂದಾಗಿದ್ದಾರೆ. ಲೀಲಾವತಿ ಅವರಿಗೆ ಆರೋಗ್ಯ ಸರಿವಿಲ್ಲದ ಕಾರಣ, ಅಂದು ಭೂಮಿ ಪೂಜೆ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದರು. ಆದರೂ, ಮನೆಯಿಂದಲೇ ಈ ಸಮಾಜದ ಋಣ ತೀರಿಸಲು ನಾನು ಸದಾ ಸಿದ್ಧವೆಂಬ ಸಂದೇಶ ಕಳುಹಿಸಿದ್ದರು.