ಮುಂಬೈ: ಅಮೆರಿಕದ ಮಾಜಿ ಅಧ್ಯಕ್ಷ್ಯ ಜೋ ಬೈಡನ್ (Joe Biden) ರೀತಿಯೇ ಪ್ರಧಾನಿ ಮೋದಿ (Narendra Modi) ಕೂಡ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ವ್ಯಂಗ್ಯವಾಡಿದ್ದಾರೆ.
ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದ ರ‍್ಯಾಲಿಯಲ್ಲಿ ಅವರು ಮಾತನಾಡಿದರು. ಈ ವೇಳೆ, ಮೋದಿಯವರಲ್ಲಿ ನೆನಪಿನ ಶಕ್ತಿ ಕಳೆದುಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಬೈಡನ್ ರೀತಿಯೇ ಅವರು ನಡೆದುಕೊಳ್ಳುತ್ತಿದ್ದಾರೆ ಎಂದರು. ಈ ವೇಳೆ ಬೈಡನ್ ಅವರು ಉಕ್ರೇನ್ ಅಧ್ಯಕ್ಷ ಝೆಲೆನ್ಸ್‌ಕಿ ಅವರನ್ನು ರಷ್ಯಾದ ಅಧ್ಯಕ್ಷ ಪುಟಿನ್ ಎಂದು ತಪ್ಪಾಗಿ ಪರಿಚಯಿಸಿದ ಘಟನೆಯನ್ನು ನೆನಪಿಸಿಕೊಂಡರು.
Advertisement
ನಾವು ಭಾಷಣದಲ್ಲಿ ಏನು ಹೇಳುತ್ತೇವೆಯೋ, ಇತ್ತೀಚೆಗೆ ಮೋದಿ ಅದನ್ನೇ ಹೇಳುತ್ತಿದ್ದಾರೆ. ನನಗೆ ಗೊತ್ತಿಲ್ಲ, ಬಹುಶಃ ಅವರು ತಮ್ಮ ನೆನಪಿನ ಶಕ್ತಿಯನ್ನು ಕಳೆದುಕೊಂಡಿರಬಹುದು. ಕಳೆದ ಒಂದು ವರ್ಷದಿಂದ ನನ್ನ ಭಾಷಣಗಳಲ್ಲಿ ಬಿಜೆಪಿಯವರು ಸಂವಿಧಾನದ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಹೇಳುತ್ತಿದ್ದೆ. ಅವರು ಅದನ್ನು ಬದಲಿಸಿ ತಮ್ಮ ಭಾಷಣಗಳಲ್ಲಿ ಕಾಂಗ್ರೆಸ್ ಸಂವಿಧಾನದ ಮೇಲೆ ದಾಳಿ ನಡೆಸುತ್ತಿದೆ ಎಂದು ಹೇಳುತ್ತಿದ್ದಾರೆ ಎಂದು ಕುಟುಕಿದ್ದಾರೆ.
Advertisement
Advertisement
ಸಂಸತ್ತಿನಲ್ಲಿ ನಾನು ಕಾಂಗ್ರೆಸ್ (Congress) ನೇತೃತ್ವದ I.N.D.I.A. ಅಧಿಕಾರಕ್ಕೆ ಬಂದರೆ ಜಾತಿ ಗಣತಿ ಮಾಡಲಾಗುವುದು ಮತ್ತು ಮೀಸಲಾತಿ ಮೇಲಿನ 50% ಮಿತಿಯನ್ನು ತೆಗೆದುಹಾಕಲಾಗುವುದು ಎಂದು ಹೇಳಿದ್ದೆ. ಆದಾಗ್ಯೂ, ಈಗ ಚುನಾವಣಾ ರ‍್ಯಾಲಿಗಳಲ್ಲಿ ನಾನು ಅದರ ವಿರುದ್ಧ ಇದ್ದೇನೆ ಎಂದು ಹೇಳುತ್ತಿದ್ದಾರೆ. ಶೀಘ್ರದಲ್ಲೇ, ನಾನು ಜಾತಿ ಗಣತಿಯನ್ನು ವಿರೋಧಿಸುತ್ತೇನೆ ಎಂದು ಅವರು ಹೇಳಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
Advertisement
288 ಅಸೆಂಬ್ಲಿ ಸ್ಥಾನಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ನ.20 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನ.23ರಂದು ಮತ ಎಣಿಕೆ ನಡೆಯಲಿದೆ.