ನವದೆಹಲಿ: ತಪ್ಪು ಮಾಡಿದ್ರೂ ರಾಜಕೀಯ ಹಿಟ್‌ಮ್ಯಾನ್ ಪಾರಾಗಬಹುದು ಅಂತ ಭಾವಿಸಿದ್ದಾನೆ. ಕೊಠಡಿಯ ಸಿಸಿಟಿವಿಯನ್ನು (CCTV) ಪರಿಶೀಲಿಸಿದರೆ ಸತ್ಯಾಂಶ ಪ್ರಕಟವಾಗಲಿದೆ ಎಂದು ಆಪ್ (AAP) ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ (Swati Maliwal) ಕಿಡಿಕಾರಿದ್ದಾರೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಆಪ್ತ ಬಿಭವ್ ಕುಮಾರ್ ವಿರುದ್ಧ ಸ್ವಾತಿ ಮಲಿವಾಲ್ ದೂರು ನೀಡಿದ್ದು ಎಫ್‌ಐಆರ್ (FIR) ದಾಖಲಾಗಿದೆ. ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ನನ್ನ ಎದೆ, ಹೊಟ್ಟೆ, ಸೊಂಟಕ್ಕೆ ಒದ್ದು, ಕೆನ್ನೆಗೆ ಹೊಡೆದಿದ್ದಾನೆ – ಕೇಜ್ರಿವಾಲ್ ಆಪ್ತನ ವಿರುದ್ಧ ಮಲಿವಾಲ್ ದೂರು
हर बार की तरह इस बार भी इस राजनीतिक हिटमैन ने ख़ुद को बचाने की कोशिशें शुरू कर दी हैं।
अपने लोगों से ट्वीट्स करवाके, आधि बिना संदर्भ की वीडियो चलाके इसे लगता है ये इस अपराध को अंजाम देके ख़ुद को बचा लेगा। कोई किसी को पीटते हुए वीडियो बनाता है भला? घर के अंदर की और कमरे की CCTV…
— Swati Maliwal (@SwatiJaiHind) May 17, 2024
ಪೋಸ್ಟ್‌ನಲ್ಲಿ ಏನಿದೆ?
ಪ್ರತಿ ಬಾರಿಯಂತೆ ಈ ಬಾರಿಯೂ ಈ ರಾಜಕೀಯ ಹಿಟ್‌ಮ್ಯಾನ್ ತನ್ನನ್ನು ಉಳಿಸಿಕೊಳ್ಳುವ ಪ್ರಯತ್ನಗಳನ್ನು ಪ್ರಾರಂಭಿಸಿದ್ದಾನೆ. ತನ್ನ ಜನರ ಮೂಲಕ ಸರಿಯಾದ ವಿವರ ಇಲ್ಲದ ವೀಡಿಯೋವನ್ನು ಟ್ವೀಟ್ ಮಾಡಿ ತಪ್ಪು ಮಾಡಿಯೂ ತಾನು ಪಾರಾಗಬಹುದು ಎಂದು ಭಾವಿಸಿದ್ದಾನೆ.
ಮನೆಯಲ್ಲಿ ಥಳಿಸುವ ವಿಡಿಯೋವನ್ನು ಯಾರಾದರೂ ಮಾಡುತ್ತಾರಾ? ಕೊಠಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗಲೇ ಸತ್ಯಾಂಶ ಎಲ್ಲರಿಗೂ ಬಹಿರಂಗವಾಗುವುದು. ನೀವು ಯಾವ ಮಟ್ಟಕ್ಕೆ ಇಳಿಯುತ್ತಿದ್ದೀರಿ. ದೇವರು ಎಲ್ಲವನ್ನೂ ನೋಡುತ್ತಿದ್ದಾನೆ. ಮುಂದೊಂದು ದಿನ ಪ್ರತಿಯೊಬ್ಬರ ಸತ್ಯವೂ ಜಗತ್ತಿನ ಮುಂದೆ ಅನಾವರಣವಾಗಲಿದೆ.