– ವಯನಾಡಿನಿಂದ ದೆಹಲಿಗೆ ವಾಪಸ್ ಆದ ಪ್ರಿಯಾಂಕಾ
ನವದೆಹಲಿ: ಗಾಳಿಯ ಗುಣಮಟ್ಟ ಸೂಚ್ಯಂಕ (AQI) 35 ಹೊಂದಿರುವ, ಪರಿಶುದ್ಧ ಗಾಳಿಯಿರುವ ವಯನಾಡಿನಿಂದ ದೆಹಲಿಗೆ ಪ್ರವೇಶಿಸುತ್ತಿದ್ದಂತೆ ಗ್ಯಾಸ್ ಚೇಂಬರ್ ಒಳಗೆ ಪ್ರವೇಶಿಸಿದಂತಾಯಿತು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Priyanka Gandhi) ಹೇಳಿದ್ದಾರೆ.
ವಯನಾಡು (Wayanad) ಲೋಕಸಭಾ ಉಪಚುನಾವಣೆಯ ಬಳಿಕ ದೆಹಲಿಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ ಅಲ್ಲಿನ ವಾಯುಮಾಲಿನ್ಯದ (Air Pollution) ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ದೆಹಲಿಯಲ್ಲಿ (New Delhi) ಕಲುಷಿತ ಗಾಳಿ ಚಾದರದಂತೆ ನಗರವನ್ನು ಹೊದ್ದುಕೊಂಡಿದೆ. ಮೇಲಿನಿಂದ ನೋಡಿದರೆ ಭಯಾನಕ ಎನಿಸುತ್ತದೆ. ದೆಹಲಿಯ ವಾಯುಗುಣಮಟ್ಟವು ವರ್ಷದಿಂದ ವರ್ಷಕ್ಕೆ ಇಳಿಕೆ ಕಾಣುತ್ತಿದೆ. ನಾವೆಲ್ಲರೂ ಒಟ್ಟಾಗಿ ಈ ಬಗ್ಗೆ ಕೆಲಸ ಮಾಡಬೇಕಿದೆ ಎಂದಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳ – ಪ್ರಾಥಮಿಕ ಶಾಲೆಗಳಲ್ಲಿ ಆನ್‌ಲೈನ್ ಕ್ಲಾಸ್
Coming back to Delhi from Wayanad where the air is beautiful and the AQI is 35, was like entering a gas chamber. The blanket of smog is even more shocking when seen from the air.
Delhi’s pollution gets worse every year. We really should put our heads together and find a solution… pic.twitter.com/dYMtjaVIGB
— Priyanka Gandhi Vadra (@priyankagandhi) November 14, 2024
ಈ ಕೆಲಸದಲ್ಲಿ ಪಕ್ಷಗಳ ಭೇದ ಬೇಡ. ಶುದ್ಧಗಾಳಿಗಾಗಿ ನಾವೆಲ್ಲಾ ಪಕ್ಷಾತೀತವಾಗಿ ಕೆಲಸ ಮಾಡಬೇಕಿದೆ. ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿರುವುದರಿಂದ ಇಲ್ಲಿನ ಜನರಿಗೆ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಅಲ್ಲದೇ ದೆಹಲಿಯಲ್ಲಿ ಮಕ್ಕಳಿಗೆ, ಹಿರಿಯರಿಗೆ ಹಾಗೂ ಶ್ವಾಸಕೋಶದ ಸಮಸ್ಯೆ ಇರುವವರಿಗೆ ಈ ಗಾಳಿಯನ್ನು ಉಸಿರಾಡಲು ಸಾಧ್ಯವೇ ಇಲ್ಲದಂತಾಗಿದೆ. ಇದಕ್ಕೆ ನಾವೆಲ್ಲರೂ ಏನಾದರೂ ಮಾಡಬೇಕಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: 50 ಶಾಸಕರಿಗೆ 2,500 ಕೋಟಿ ಬೇಕು, ಯಾರ ಬಳಿ ಇದೆ ಅಷ್ಟೊಂದು ಹಣ? – ಬೊಮ್ಮಾಯಿ
ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪ್ರಿಯಾಂಕ ಗಾಂಧಿ 12 ದಿನ ವಯನಾಡಿನಲ್ಲಿ ಮತಪ್ರಚಾರ ನಡೆಸಿದ್ದರು. ಮತದಾನ ಮುಗಿದ ಬಳಿಕ ಈಗ ದೆಹಲಿಗೆ ವಾಪಸ್ ಆಗಿದ್ದಾರೆ. ಇದನ್ನೂ ಓದಿ: ನ.24ಕ್ಕೆ ಕೆ-ಸೆಟ್, ರಾಯಚೂರು ವಿವಿ ಪರೀಕ್ಷೆ- ಕೆಇಎ