ಭುವನೇಶ್ವರ: ಸುಪ್ರೀಂ ಕೋರ್ಟ್ (Supreme Court) ಮುಖ್ಯ ನ್ಯಾಯಾಧೀಶ ಡಿವೈ ಚಂದ್ರಚೂಡ್ (DY Chandrachud) ಅವರ ನಿವಾಸಕ್ಕೆ ಗಣೇಶ ಪೂಜೆಗೆ (Ganesh Pooja) ಭೇಟಿ ನೀಡಿದ್ದನ್ನು ಟೀಕಿಸಿದ ಪ್ರತಿಪಕ್ಷಗಳಿಗೆ ಸಚಿವ ನರೇಂದ್ರ ಮೋದಿ (Narendra Modi) ಮಂಗಳವಾರ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಒಡೆದು ಆಳುವ ನೀತಿ ಮಾಡಿದ್ದ ಬ್ರಿಟಿಷರು (British) ಗಣೇಶೋತ್ಸವದ ವಿರುದ್ಧ ಕೆರಳಿದ್ದರು. ಇಂದು ಕೂಡ ಭಾರತೀಯ ಸಮಾಜವನ್ನು ಒಡೆಯಲು ಮತ್ತು ಒಡೆಯಲು ಪ್ರಯತ್ನಿಸುತ್ತಿರುವ ಜನರು ಗಣೇಶ ಗಣಪತಿ ಪೂಜೆಯನ್ನು ಅಂಗೀಕರಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಸಂಸ್ಥೆ ವಿರುದ್ಧ ಇಲ್ಲಸಲ್ಲದ ಆರೋಪಕ್ಕೆ ಕಾನೂನು ಕ್ರಮ
ನಾನು ಗಣಪತಿ ಪೂಜೆಗೆ ಹಾಜರಾಗಿದ್ದಕ್ಕೆ ಕಾಂಗ್ರೆಸ್ (Congress) ಮತ್ತು ಅದರ ʼಪರಿಸರ ವ್ಯವಸ್ಥೆʼಗೆ ಸಮಸ್ಯೆಯಾಗಿದೆ. ಅವರು ಅಧಿಕಾರದಲ್ಲಿರುವ ಕರ್ನಾಟಕದಲ್ಲಿಅದಕ್ಕಿಂತ ದೊಡ್ಡ ಪಾಪ ಮಾಡಿದ್ದಾರೆ. ಅವರು ಗಣೇಶನ ಮೂರ್ತಿಯನ್ನು ಕಂಬಿ ಹಿಂದೆ ಹಾಕಿದ್ದಾರೆ. ಈ ಚಿತ್ರವನ್ನು ನೋಡಿ ಇಡೀ ದೇಶವೇ ತಲ್ಲಣಗೊಂಡಿದೆ. ಇಂತಹ ದ್ವೇಷ ದೇಶಕ್ಕೆ ಅಪಾಯಕಾರಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿಜೆಐ ಚಂದ್ರಚೂಡ್ ಮನೆಯಲ್ಲಿ ಗಣೇಶನಿಗೆ ಮೋದಿ ಆರತಿ – ಸಂಜಯ್ ರಾವತ್ ಆಕ್ಷೇಪ