ಭೋಪಾಲ್: ಸಿಡಿಲು ಬಡಿದು ಬುಧವಾರ ಒಂದೇ ದಿನ ಹಲವೆಡೆ 11 ಮಂದಿ ದಾರುಣ ಸಾವಿಗೀಡಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ರಾಜ್ಯದಲ್ಲಿ ಮುಂಗಾರಿನ ಅಬ್ಬರ ಜೋರಾಗಿದೆ. ಪ್ರಕೃತಿ ವಿಕೋಪದಿಂದಾಗಿ ಮಧ್ಯಪ್ರದೇಶದಲ್ಲಿ ಮೃತಪಟ್ಟವರ ಸಂಖ್ಯೆ ಈವರೆಗೆ 45ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಲಂಚ್ ಬಾಕ್ಸ್ ಎಂದು ತೆರೆದಾಗ ಸ್ಫೋಟ- ಇಬ್ಬರು ವಲಸೆ ಕಾರ್ಮಿಕರು ಸಾವು
Advertisement
Advertisement
ಶಿಯೋಪುರದ ಅಜ್ನೋಯಿ ಅರಣ್ಯದಲ್ಲಿ ವಿಹಾರಕ್ಕೆ (ಪಿಕ್ನಿಕ್) ತೆರಳಿದ್ದ ಆರು ಸ್ನೇಹಿತರಿಗೆ ಸಿಡಿಲು ಬಡಿದಿದೆ. ಇವರಲ್ಲಿ 20ರ ಹರೆಯದ ರಾಮಭಾರತ್ ಆದಿವಾಸಿ, ದಿಲೀಪ್ ಆದಿವಾಸಿ ಮತ್ತು ಮುಖೇಶ್ ಆದಿವಾಸಿ ಸ್ಥಳದಲ್ಲೇ ಮೃತಪಟ್ಟರೆ, ದಯಾರಾಮ್ ಆದಿವಾಸಿ, ಸತೀಶ್ ಆದಿವಾಸಿ ಮತ್ತು ಸೋಮದೇವ್ ಆದಿವಾಸಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
ಭಿಂದ್‌ನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ಸುಕಂದ್ ಗ್ರಾಮದಲ್ಲಿ ರಾಮ್‌ಕಾಲಿ (70) ಮತ್ತು ಜ್ಞಾನೋದೇವಿ (40) ಎಂದು ಗುರುತಿಸಲಾದ ಇಬ್ಬರು ಮಹಿಳೆಯರು ಮನೆಗೆ ಹಿಂದಿರುಗುವಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಮತ್ತೊಂದು ಉಪತಳಿ ಪತ್ತೆ- ರೋಗನಿರೋಧಕ ಶಕ್ತಿ ಮೀರಿಸಿ ವೈರಸ್ ಹರಡುತ್ತಾ ಈ ತಳಿ – WHO ಹೇಳಿದ್ದೇನು?
Advertisement
ಛತ್ತರ್‌ಪುರ, ಮಹಾರಾಜ್‌ಗಂಜ್ ಗ್ರಾಮದಲ್ಲಿ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತಾಯಿ ಮತ್ತು ಅವರ ಮಗ ಸಿಡಿಲು ಬಡಿತಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಮರವಾನ್ ಗ್ರಾಮದಲ್ಲಿ ರಾಧಾ ಅಹಿರ್ವಾರ್ (50) ಎಂಬ ಮತ್ತೊಬ್ಬ ರೈತ ಇದೇ ರೀತಿ ಮೃತಪಟ್ಟಿದ್ದಾರೆ.
ಶಿವಪುರಿಯ 35 ವರ್ಷದ ವ್ಯಕ್ತಿ ಮತ್ತು ಗ್ವಾಲಿಯರ್‌ನಲ್ಲಿ 30 ಮತ್ತು 40 ರ ಹರೆಯದ ವಯಸ್ಕರು ಸಹ ಸಿಡಿಲು ಬಡಿತಕ್ಕೆ ಸಿಕ್ಕಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮೈದಾ, ರವೆ ಸೇರಿದಂತೆ ಹಿಟ್ಟಿನ ರಫ್ತಿಗೆ ನಿಷೇಧ ಹೇರಿದ ಭಾರತ
ಭಾರತೀಯ ಹವಾಮಾನ ಇಲಾಖೆ (IMD) ಮಧ್ಯಪ್ರದೇಶದ ಎಂಟು ಜಿಲ್ಲೆಗಳಲ್ಲಿ ಮಿಂಚು ಮತ್ತು ಗುಡುಗು ಸಹಿತ ಭಾರೀ ಮಳೆಯಾಗುವ ಬಗ್ಗೆ ಎಚ್ಚರಿಕೆ ನೀಡಿದೆ.