ಕೊಲ್ಕತ್ತಾ: ಸಿಡಿಲು ಬಡಿದು (Lightning strikes) 14 ಜನ ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದಲ್ಲಿ (West Bengal) ಗುರುವಾರ ನಡೆದಿದೆ.
ಐದು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಈ ವೇಳೆ ಸಿಡಿಲು ಬಡಿದು 14 ಮಂದಿ ಸಾವನ್ನಪ್ಪಿದ್ದಾರೆ. ಪುರ್ಬಾ ಬರ್ಧಮಾನ್ ಜಿಲ್ಲೆಯಲ್ಲಿ ನಾಲ್ವರು, ಮುರ್ಷಿದಾಬಾದ್ ಹಾಗೂ ಉತ್ತರ 24 ಪರಗಣದಲ್ಲಿ ತಲಾ ಇಬ್ಬರು, ಪಶ್ಚಿಮ ಮಿಡ್ನಾಪುರ ಹಾಗೂ ಹೌರಾದಲ್ಲಿ ತಲಾ ಮೂರು ಜನ ಸಾವಿಗೀಡಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಇಲಾಖೆಯ (Disaster Management Department) ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ಮನೆ ಮುಂದಿನ ರಸ್ತೆಯಲ್ಲೇ 10 ಲಕ್ಷ ನಗದು ಹಣ ಪತ್ತೆ..!
Advertisement
Advertisement
ಮೃತಪಟ್ಟವರು ಹೆಚ್ಚಿನ ಜನ ರೈತರಾಗಿದ್ದು, ಜಮೀನಿನಲ್ಲಿ ಕೆಲಸಕ್ಕೆ ತೆರಳಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
Advertisement
Advertisement
ರಾಜ್ಯದೆಡೆಗೆ 79 ಕಿ.ಮೀ ವೇಗದಲ್ಲಿ ಬೀಸಿದ ಗಾಳಿಯಿಂದ ಮಳೆ ಸಂಭವಿಸಿದೆ. ಅಲ್ಲದೆ ಗಾಳಿಯ ಈ ವೇಗ ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯದ್ದಾಗಿತ್ತು ಎಂದು ಪ್ರಾದೇಶಿಕ ಹವಾಮಾನ ಕೇಂದ್ರದ (Meteorological Centre) ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನಕ್ಸಲರ ಶಿಬಿರದಲ್ಲಿ ಕಾಂಡೋಮ್, ಗರ್ಭ ನಿರೋಧಕ ಮಾತ್ರೆ ಪತ್ತೆ