ಮೈಸೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಯವರು ಅರಮನ ನಗರಿ ಮಂದಿಗೆ ಸಂತಸದ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಅದೇನಂದರೆ ವಿಜಯದಶಮಿ ಬಳಿಕ 10 ದಿನಗಳ ಕಾಲ ದೀಪಾಲಂಕಾರ ವಿಸ್ತರಣೆ ಮಾಡಲು ಸಿಎಂ ಅವಕಾಶ ನೀಡಿದ್ದಾರೆ.
Advertisement
ಇಂದು ಸುತ್ತೂರು ಮಠ (Suttur Mutt) ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ದಸರಾ ನಂತರವೂ ಮೈಸೂರು ಜಗಮಗಿಸಲು ಅವಕಾಶ ನೀಡಿದ್ದಾರೆ. ಈಗಾಗಲೇ ಮೈಸೂರಿನಲ್ಲಿ ವಿದ್ಯುತ್ ದೀಪಾಲಂಕಾರ ಜನರ ಗಮನ ಸೆಳೆದಿದೆ. ಹೀಗಾಗಿ ದಸರಾ ನಂತರವೂ 10 ದಿನ ದಸರಾ ದೀಪಾಲಂಕಾರ ಕಣ್ತುಂಬಿಕೊಳ್ಳುವ ಅವಕಾಶ ಕೊಡುವುದಾಗಿ ತಿಳಿಸಿದರು.
Advertisement
Advertisement
ಕಳೆದ ಎರಡು ವರ್ಷದಲ್ಲಿ ಕೋವಿಡ್ (Corona Virus) ಹಿನ್ನಲೆ ದಸರಾಗೆ ಬರುವವರ ಸಂಖ್ಯೆ ಕಡಿಮೆಯಾಗಿತ್ತು. ಈ ಬಾರಿ ಬಹಳಷ್ಟು ಅರ್ಥಪೂರ್ಣ ಹಾಗೂ ವೈಭವಪೂರ್ಣವಾದ ದಸಾರಾಗೆ ಹೆಚ್ಚಿನ ಜನ ಆಕರ್ಷಣೆಯಾಗಿದ್ದಾರೆ. ಲಕ್ಷಾಂತರ ಜನ ಇಡೀ ರಾಜ್ಯದಿಂದ ವಿದೇಶದಿಂದ ಬಂದಿದ್ದಾರೆ. ಮತ್ತೊಮ್ಮೆ ಪಾರಂಪರಿಕವಾದ ವೈಭವ ನೋಡೋಕೆ ಸಿಗ್ತಾ ಇದೆ ಎಂದರು. ಇದನ್ನೂ ಓದಿ: ಜಂಬೂ ಸವಾರಿ ಭದ್ರತೆಗೆ ವಿಶೇಷ ಆದ್ಯತೆ- 5000 ಪೊಲೀಸರ ನಿಯೋಜನೆ
Advertisement
ಆ ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ ಸಕಲ ಕನ್ನಡಿನಾಡಿನ ಜನತೆಗೆ ಒಳ್ಳೆಯದು ಮಾಡಲಿ. ಸುಖ ಶಾಂತಿ ನೆಲಸಲಿ, ರೈತರ ಮಳೆ ಬೆಳೆ ಎಲ್ಲಾ ಚೆನ್ನಾಗಿ ಆಗ್ಲಿ ಅಂತಾ ಪ್ರಾರ್ಥಿಸಿದ್ದೇನೆ. ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಬಹಳ ಯಶಸ್ವಿ ಕಾರ್ಯಕ್ರಮಗಳಾಗಿವೆ. ಇವತ್ತು ಕೂಡ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಹೇಳಿದರು.
ಪ್ರವಾಸಿಗರು ಬಹಳಷ್ಟು ಜನ ಬರ್ತಾ ಇರೋದ್ರಿಂದ ಮುಂಚಿನ ದಸರಾ (Mysuru Dasara 2022) ಕಾಣಿಸ್ತಿದೆ. ಇಲ್ಲಿ ಟೂರಿಸಂ ಸರ್ಕಿಟ್ ಮಾಡಬೇಕಿದೆ ಅದಕ್ಕೆ ಕ್ರಮಗಳನ್ನ ತೆಗೆದುಕೊಂಡಿದ್ದೇವೆ. ಮೈಸೂರು ಸರ್ಕಿಟ್ ಅಂದ್ರೆ ಮೈಸೂರು ಹಳೇಬೀಡು ಬೇಲೂರು ಸೋಮನಾಥಪುರ ಸುತ್ತಲೂ ಇರೋದನ್ನ ವೆಬ್ ಸೈಟ್ ನಲ್ಲಿ ಬುಕ್ ಮಾಡಿ ಎಲ್ಲವನ್ನು ಮಾಡಬಹುದು. ಟೂರಿಸಂ ಉತ್ತೇಜನಕ್ಕೆ ಶೀಘ್ರದಲ್ಲಿ ಕಾರ್ಯರಂಭವಾಗುತ್ತದೆ. ಉತ್ತರದಲ್ಲಿ ಹಂಪಿ ದಕ್ಷಿಣದಲ್ಲಿ ಮೈಸೂರು ದಸರಾವನ್ನ ಟೂರಿಸ್ಟ್ ಸರ್ಕಿಟ್ ನ್ನ ಬಹಳ ಅರ್ಥಪೂರ್ಣವಾಗಿ ಮಾಡುತ್ತೇವೆ ಎಂದು ಸಿಎಂ ಭರವಸೆ ನೀಡಿದರು.
ಸರ್ಕಿಟ್ ಅನುಭವದಿಂದ ಯಾವುದೇ ಸ್ಟ್ರಚರ್ ಕೊಡಬೇಕು ಅನ್ನೋದನ್ನ ಮಾಡೋಣ. ಕೊರೊನಾ ಸಾರ್ವತ್ರಿಕವಾಗಿ ಹರಡೋದು ನಿಂತಿದೆ. ಹೀಗಾಗಿ ನಮ್ಮ-ನಮ್ಮ ಸುರಕ್ಷತೆಯಲ್ಲಿ ಮಾಡೋಣ. ದಸರಾ ವೈಭವ ಹೆಚ್ಚಿಸಿರುವ ಲೈಟಿಂಗ್ (Lighting)ನ್ನ ಇನ್ನು ಹತ್ತು ದಿನ ವಿಸ್ತರಣೆ ಮಾಡುತ್ತೇವೆ ಎಂದರು.