ಬೆಳಗಾವಿ: ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ರಾಜ್ಯಸಭೆ ಸದಸ್ಯ ಈರಣ್ಣಾ ಕಡಾಡಿ ಮೇಲೆ ಲೈಟಿಂಗ್ ಸೆಟ್ ಕಂಬವೊಂದು ಕುಸಿದ ಬಿದ್ದಿದೆ. ಅದೃಷ್ಟವಶಾತ್ ಅವಘಡದಲ್ಲಿ ಈರಣ್ಣ ಕಡಾಡಿ ಸೇರಿ ಇಪ್ಪತ್ತಕ್ಕೂ ಹೆಚ್ಚು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Advertisement
ರಾಜಾಪುರ ಗ್ರಾಮದಲ್ಲಿ ಚೂನಮ್ಮ ದೇವಿ ಜಾತ್ರೆಯ ಅಂಗವಾಗಿ ಗ್ರಾಮದಲ್ಲಿ ರಸಮಂಜರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಈರಣ್ಣಾ ಕಡಾಡಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು, ಉದ್ಘಾಟನೆಗೊಳ್ಳುತ್ತಿದ್ದಾಗಲೇ ಲೈಟಿಂಗ್ ಸೆಟ್ ಕಂಬವೊಂದು ಕುಸಿದು ಬಿದ್ದಿದೆ. ಇದನ್ನೂ ಓದಿ: ಮತದಾನದ ದಿನ ಬೂತ್ ಮುಖ್ಯದ್ವಾರದಲ್ಲಿ ಮದ್ಯ ಪರೀಕ್ಷೆ ಯಂತ್ರವನ್ನು ಅಳವಡಿಸಿ: ಇಸಿಗೆ ಪತ್ರ
Advertisement
ಈ ವೇಳೆ ವೇದಿಕೆಯ ಮೇಲೆ ಕಡಾಡಿ ಅವರು ಸೇರಿ ಇಪ್ಪತ್ತಕ್ಕೂ ಹೆಚ್ಚು ಗಣ್ಯರು ಅವಘಡದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
Advertisement
Advertisement
ಕಡಾಡಿ ಪ್ರತಿಕ್ರಿಯೆ ಏನು?
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ಚೂನಮ್ಮ ದೇವಿ ಜಾತ್ರೆಯಲ್ಲಿ ಲೈಟಿಂಗ್ ಅಳವಡಿಸಿದ್ದ ಕಂಬ ವೇದಿಕೆ ಮೇಲೆ ಉರುಳಿ ಆಕಸ್ಮಿಕ ಅವಘಡ ಸಂಭವಿಸಿತು. ಇಬ್ಬರು ಮೂವರಿಗೆ ಗಾಯ ಆಗಿದ್ದು ನಾವೆಲ್ಲರೂ ಬಚಾವ್ ಆಗಿದ್ದೇವೆ. ಇದನ್ನೂ ಓದಿ: ಜನರು ಕಡಿಮೆ ನಾಟಕವನ್ನು ಬಯಸಿದ್ದರಿಂದ ಬೈಡನ್ ಆಯ್ಕೆಯಾದರು: ಟ್ರಂಪ್ ಕಾಲೆಳೆದ ಮಸ್ಕ್
ಗ್ರಾಮದ ಜಮೀನಿನಲ್ಲಿ ಕಾರ್ಯಕ್ರಮ ಇಟ್ಟುಕೊಂಡಿದ್ದಕ್ಕೆ ಅವಘಡ ಸಂಭವಿಸಿದೆ. ಸ್ವಲ್ಪ ಆಯತಪ್ಪಿದ್ರೂ ವೇದಿಕೆ ಮೇಲಿದ್ದ ಗಣ್ಯರ ಪ್ರಾಣಹಾನಿ ಆಗುತ್ತಿತ್ತು. ವಿದ್ಯುತ್ ಅವಘಡ ಕೂಡ ಸಂಭವಿಸುವ ಸಾಧ್ಯತೆ ಇತ್ತು. ದೇವಿಯ ಆಶೀರ್ವಾದದಿಂದ ನಾವೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದೇವೆ ಎಂದರು.