‘ಲೈಗರ್’ (Liger) ಬ್ಯೂಟಿ ಅನನ್ಯಾ ಪಾಂಡೆ (Ananya Panday) ಅವರು ಸದ್ಯ ಫಾರಿನ್‌ಗೆ ಹಾರಿದ್ದಾರೆ. ವಿದೇಶದ ಪ್ರಯಾಣವನ್ನು ಎಂಜಾಯ್ ಮಾಡ್ತಿದ್ದಾರೆ. ಸದ್ಯ ಅವರು ಬಿಕಿನಿ ಧರಿಸಿ ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಅನನ್ಯಾ ಪಾಂಡೆ ತಮ್ಮ ನಯಾ ಬಿಕಿನಿ ಫೋಟೋ ಶೇರ್ ಮಾಡ್ತಿದ್ದಂತೆ ಆದಿತ್ಯ ಕಪೂರ್ ಎಲ್ಲಿ ಎಂದು ಕಾಮೆಂಟ್ ಮಾಡುವ ಮೂಲಕ ಕಾಲೆಳೆದಿದ್ದಾರೆ. ಇದನ್ನೂ ಓದಿ:ಡೈರೆಕ್ಟರ್ ಕ್ಯಾಪ್ ತೊಟ್ಟ ‘ಚುಟು ಚುಟು’ ಕೊರಿಯೋಗ್ರಾಫರ್ ಭೂಷಣ್ ಮಾಸ್ಟರ್
ವಿಜಯ್ ದೇವರಕೊಂಡ ಜೊತೆಗಿನ ‘ಲೈಗರ್’ ಸಿನಿಮಾ ಸೋಲುಂಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಸಿನಿಮಾ ಮಕಾಡೆ ಮಲಗಿದೆ. ಸಿನಿಮಾದ ನಂತರ ನಟಿ ಆದಿತ್ಯ ರಾಯ್ ಕಪೂರ್ ಜೊತೆಗಿನ ಡೇಟಿಂಗ್ ವಿಚಾರವಾಗಿ ಭಾರೀ ಸುದ್ದಿಯಲ್ಲಿದ್ದಾರೆ. ಸದ್ಯ ವಿದೇಶದಲ್ಲಿ ಬೀಡು ಬಿಟ್ಟಿರುವ ಅನನ್ಯಾ ಪಾಂಡೆ, ಹಸಿ ಬಿಸಿ ಫೋಟೋಗಳು ಸಖತ್ ಸದ್ದು ಮಾಡುತ್ತಿದೆ.
ರೆಸ್ಟೋರೆಂಟ್‌ವೊಂದರಲ್ಲಿ ಅನನ್ಯಾ ಪಾಂಡೆ ಅವರು ಎಂಜಾಯ್ ಮಾಡುತ್ತಿದ್ದು, ನಟಿಯ ಬಿಕಿನಿ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ. ಅನನ್ಯಾ ಅವರ ಬಿಕಿನಿ (Bikini) ಫೋಟೋವನ್ನ ಆದಿತ್ಯಾ ಕಪೂರ್ (Adithya Kapur) ಕ್ಲಿಕ್ಕಿಸಿದ್ದಾರೆ ಎಂದು ನೆಟ್ಟಿಗರು ಊಹಿಸಿದ್ದಾರೆ. ಹಾಗಾಗಿ ಬಾಯ್‌ಫ್ರೆಂಡ್ ಆದಿ ಎಲ್ಲಿ ಎಂದು ಕಾಮೆಂಟ್ ಮಾಡುವ ಮೂಲಕ ನಟಿಯ ಕಾಲೆಳೆದಿದ್ದಾರೆ.
ಸಾಕಷ್ಟು ವರ್ಷಗಳಿಂದ ಆಶಿಕಿ 2 ಹೀರೋ ಆದಿತ್ಯ- ಅನನ್ಯಾ ಪಾಂಡೆ ಇಬ್ಬರು ಪರಿಚಿತರು. ಹಾಗಾಗಿ ಡೇಟಿಂಗ್ ಸುದ್ದಿಗೆ ಈ ಜೋಡಿಯ ನಯಾ ಪುಷ್ಟಿ ನೀಡುತ್ತಿದೆ. ಇಬ್ಬರೂ ಅವರು ಪ್ರತ್ಯೇಕವಾಗಿ ವಿಮಾನ ಏರಿ ವಿದೇಶಕ್ಕೆ ತೆರಳಿದ್ದಾರೆ. ಆದರೆ ಅವರಿಬ್ಬರೂ ಹೋಗಿರುವುದು ಒಂದೇ ಲೊಕೇಷನ್‌ಗೆ. ಸ್ಪೇನ್‌ನಲ್ಲಿ ಸಂಗೀತ ಕರ‍್ಯಕ್ರಮವೊಂದಕ್ಕೆ ಈ ಜೋಡಿ ಇತ್ತೀಚಿಗೆ ಹಾಜರಿ ಹಾಕಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿಗಳನ್ನು ಅಪ್‌ಲೋಡ್ ಮಾಡಿಕೊಂಡಿದ್ದರು. ಇಬ್ಬರ ಸ್ಟೋರಿಯಲ್ಲೂ ಸಾಮ್ಯತೆ ಇರುವುದರಿಂದ ಒಟ್ಟಿಗೆ ಇರೋದು ಅಭಿಮಾನಿಗಳಿಗೆ ಎಲ್ಲವೂ ಸ್ಪಷ್ಟವಾಗಿತ್ತು. ಇಷ್ಟೇ ಅಲ್ಲ, ಅವರಿಬ್ಬರ ನಡುವಿನ ಆಪ್ತತೆಗೆ ಸಾಕ್ಷಿ ಒದಗಿಸುವಂತಹ ಇನ್ನೊಂದು ಫೋಟೋ ಕೂಡ ವೈರಲ್ ಆಗಿದೆ. ಅನನ್ಯಾರನ್ನ ಹಿಂಬದಿಯಿಂದ ಆದಿತ್ಯ ತಬ್ಬಿಕೊಂಡಿದ್ದರು. ಇದಾದ ಬಳಿಕ ಪರ‍್ಚುಗಲ್‌ನಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು. ಸದ್ಯದ ಬಾಲಿವುಡ್ ಹೊಸ ಜೋಡಿ ಅಂದರೆ, ಅನನ್ಯಾ- ಆದಿತ್ಯ ಕಪೂರ್ ಕಪಲ್.