ಬೆಂಗಳೂರು: ಉಚಿತ ಯೋಜನೆಗಳು (Free Scheme) ರಾಜಕೀಯ ಲಾಭಕ್ಕೆ ಮಾಡೋ ಯೋಜನೆಗಳು. ಈ ಯೋಜನೆಯ ಆಯಸ್ಸು ಸ್ವಲ್ಪ ದಿನ ಮಾತ್ರ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕಾಂಗ್ರೆಸ್ (Congress) ಉಚಿತ ಯೋಜನೆಗಳ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ಉಚಿತ ಯೋಜನೆಗಳ ಬಗ್ಗೆ ಪ್ರಧಾನಿ ಮೋದಿ (Narendra Modi) ಅವರ ಹೇಳಿಕೆ ಸಮರ್ಥನೆ ಮಾಡಿಕೊಂಡ ಅವರು, ಪ್ರತಿಯೊಬ್ಬ ನಾಗರಿಕರ ಆದಾಯ ಹೆಚ್ಚಾಗಬೇಕು. ಉದ್ಯೋಗ ಸಿಗಬೇಕು. ಆರ್ಥಿಕತೆ ಹೆಚ್ಚಾಗಬೇಕು, ಕೊಳ್ಳುವ ಪವರ್ ಹೆಚ್ಚಾಗಬೇಕು. ಆಗ ದೇಶ ಅಭಿವೃದ್ಧಿ ಆಗುತ್ತದೆ ಎಂದು ಮೋದಿ ಹೇಳಿದ್ದಾರೆ. ಉಚಿತ ಯೋಜನೆಗಳು ಅಲ್ಪ ಕಾಲದ ಯೋಜನೆಗಳು. ಇವು ಸ್ವಲ್ಪ ದಿನ ಆದ ಮೇಲೆ ಲಾಭ ಕೊಡುವುದಿಲ್ಲ. ಇದನ್ನು ರಾಜಕೀಯ ಲಾಭಕ್ಕೆ ಮಾಡುತ್ತಾರೆ. ಇದನ್ನೇ ಮೋದಿ ಅವರು ಹೇಳಿದ್ದಾರೆ ಎಂದರು. ಇದನ್ನೂ ಓದಿ: ಉದಯ್ ಸ್ಟಾಲಿನ್‌ದು ಹಿಟ್ಲರ್ ಮನಸ್ಥಿತಿ: ಬೊಮ್ಮಾಯಿ ವಾಗ್ದಾಳಿ
Advertisement
Advertisement
ಇನ್ನು ಅನ್ನಭಾಗ್ಯ ಯೋಜನೆಯಡಿ 35 ಲಕ್ಷ ಫಲಾನುಭವಿಗಳಿಗೆ ಹಣ ಹಾಕದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು. ಕುಂಟು ನೆಪ ಹೇಳಿ ಅನೇಕರನ್ನು ದೂರ ಇಡುತ್ತಾರೆ ಎಂದು ನಾನು ಅವತ್ತೇ ಹೇಳಿದ್ದೆ. ಈಗ ಅದನ್ನೆ ಮಾಡಿದ್ದಾರೆ. ಕೇಂದ್ರ ಕೊಡುತ್ತಿರುವ 5 ಕೆಜಿ ಅಕ್ಕಿ ಕೂಡಾ ಕಡಿಮೆ ಮಾಡಿದ್ದಾರೆ. 3 ಕೆಜಿ ಅಕ್ಕಿ ಕೊಟ್ಟು ಉಳಿದದ್ದು ಜೋಳ, ರಾಗಿ ಕೊಡುವ ಕೆಲಸ ಮಾಡುತ್ತಿದ್ದಾರೆ. 5 ಕೆಜಿಗೆ ಕೊಡುತ್ತಿರುವ ಹಣ ಸರಿಯಾಗಿ ಕೊಡುತ್ತಿಲ್ಲ. 35 ಲಕ್ಷ ಜನರನ್ನು ಹೊರಗೆ ಇಟ್ಟಿದ್ದಾರೆ. ತಾಂತ್ರಿಕ ಕಾರಣ ಎನ್ನುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ನಿಮಗೆ ತಾಕತ್, ಧಮ್ ಇದ್ರೆ ಇಸ್ಲಾಂ ಧರ್ಮದ ಬಗ್ಗೆ ಮಾತಾಡಿ: ಆಂದೋಲ ಶ್ರೀ
Advertisement
Advertisement
ಇದೊಂದು ಕುಂಟು ನೆಪ. ನಾನು ಹೇಳುತ್ತೇನೆ, ಬರೆದಿಟ್ಟುಕೊಳ್ಳಿ. ಗೃಹಲಕ್ಷ್ಮಿಯಲ್ಲಿ (Gruhalakshmi) ಇಂತಹದ್ದೇ ದೂರು ಮುಂದೆ ಬರುತ್ತದೆ. ಹೀಗೆ ಅನೇಕ ಜನರನ್ನು ಯೋಜನೆಯಿಂದ ಹೊರಗೆ ಇಡುತ್ತಾರೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಸಂಸದ ಸ್ಥಾನದಿಂದ ಪುತ್ರ ಅನರ್ಹತೆ ಬೆನ್ನಲ್ಲೇ ಶಾಸಕ ಹೆಚ್.ಡಿ.ರೇವಣ್ಣಗೆ ಹೈಕೋರ್ಟ್ ಸಮನ್ಸ್
Web Stories