ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣ ಮುರುಡೇಶ್ವರದ ಅರಬ್ಬಿ ಸಮುದ್ರದಲ್ಲಿ ಮುಳುಗುತ್ತಿದ್ದ ಪ್ರವಾಸಿಗನೊಬ್ಬನನ್ನು ಕಡಲತೀರದ ಲೈಫ್ ಗಾರ್ಡ್‌ಗಳು ರಕ್ಷಣೆ ಮಾಡಿರುವ ಘಟನೆ ನಡೆದಿದೆ.
ಎಸ್. ಅನಿಲ್ ಕುಮಾರ್‌ನನ್ನು ಲೈಫ್ ಗಾರ್ಡ್‌ಗಳು ರಕ್ಷಣೆ ಮಾಡಿದ್ದಾರೆ. ಅನಿಲ್ ಕುಮಾರ್ ಮೂಲತಃ ಮೈಸೂರಿನವನಾಗಿದ್ದು, ತನ್ನ ಸ್ನೇಹಿತರ ಜೊತೆಯಲ್ಲಿ ಮುರುಡೇಶ್ವರ ಪ್ರವಾಸಕ್ಕೆ ಆಗಮಿಸಿದ್ದನು. ಈ ಸಂದರ್ಭದಲ್ಲಿ ಸಮುದ್ರದ ನೀರಿಗೆ ಇಳಿದಾಗ ಈ ಘಟನೆ ನಡೆದಿದೆ.
ಅನಿಲ್ ಕುಮಾರ್ ಮತ್ತು ಸ್ನೇಹಿತರು ಮುರುಡೇಶ್ವರ ಕಡಲತೀರದಲ್ಲಿ ಮೋಜುಮಸ್ತಿಯಲ್ಲಿ ತೊಡಗಿದ್ದರು. ಆಗ ಸಮುದ್ರದ ರಭಸದ ಅಲೆಗೆ ಅನಿಲ್ ಕುಮಾರ್ ಕೊಚ್ಚಿ ಹೋಗುತ್ತಿದ್ದನು. ಇದನ್ನ ನೋಡಿದ ಕರ್ತವ್ಯ ನಿರತ ಲೈಫ್ ಗಾರ್ಡ್‌ಗಳು ಹಗ್ಗ ಕಟ್ಟಿ ರಕ್ಷಣೆ ಮಾಡಿದ್ದಾರೆ.
ಅನಿಲ್ ಕುಮಾರ್ ತೀರಾ ಅಸ್ವಸ್ಥನಾಗಿದ್ದು, ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.