‘ಲೈಫ್ ಟುಡೇ’ ಮುಹೂರ್ತದ ಸಂಭ್ರಮ- ಚಿತ್ರತಂಡಕ್ಕೆ ಧ್ರುವ ಸರ್ಜಾ ಸಾಥ್

Public TV
2 Min Read
LIFE TODAY 2

ರುವುದೆಲ್ಲವ ಬಿಟ್ಟು ಕಥೆ ಹೇಳಿ ಗೆದ್ದಿದ್ದ ಕಾಂತ ಕನ್ನಲ್ಲಿ ಈಗ ಮತ್ತೊಂದು ಫ್ರೆಶ್ ಕಂಟೆಂಟ್ ಮೂಲಕ ಪ್ರೇಕ್ಷಕ ಎದುರು ಬರಲು ತಯಾರಿ ನಡೆಸುತ್ತಿದ್ದಾರೆ. ಅದರ ಮೊದಲ ಭಾಗವೆಂಬಂತೆ ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿಂದು ‘ಲೈಫ್ ಟುಡೇʼ (Life Today) ಮುಹೂರ್ತ ನೆರವೇರಿದೆ. ನಿರ್ದೇಶಕ ಮಹೇಂದರ್ ಕ್ಲ್ಯಾಪ್ ಮಾಡಿ ಶುಭ ಹಾರೈಸಿದ್ರೆ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಟೈಟಲ್ ಹಾಗೂ ಫಸ್ಟ್ ಲುಕ್ ರಿವೀಲ್ ಮಾಡಿ ಚಿತ್ರತಂಡಕ್ಕೆ ಬೆಸ್ಟ್ ವಿಶಸ್ ತಿಳಿಸಿದರು.

LIFE TODAY 1
ಬಳಿಕ ಮಾಧ್ಯಮದವರೊಂದಿಗೆ ಧ್ರುವ ಸರ್ಜಾ (Dhruva Sarja) ಮಾತನಾಡಿ, ಟೈಟಲ್ ಸಿನಿಮಾ ನೋಡಬೇಕು ಎಂಬ ನಿರೀಕ್ಷೆ ಹುಟ್ಟಿಸುತ್ತದೆ. ನಿರ್ದೇಶಕರು ಅತ್ತಿಯವರ ಇರುವುದೆಲ್ಲವನ್ನು ಬಿಟ್ಟು ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಆ ಚಿತ್ರ ಚೆನ್ನಾಗಿತ್ತು. ಈಗ ಲೈಫ್ ಟುಡೇ ಮಾಡ್ತಿದ್ದಾರೆ. ಸಿನಿಮಾದಲ್ಲಿ ಹೊಸಬರು ಇದ್ದಾರೆ. ಹಳೆಬರು ಇದ್ದಾರೆ. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದರು. ಇದನ್ನೂ ಓದಿ:ಮಗು ಬಗ್ಗೆ ಸುಳಿವು ಕೊಟ್ಟ ದೀಪಿಕಾ ಪಡುಕೋಣೆ

LIFE TODAY

ನಿರ್ದೇಶಕ ಕಾಂತ ಕನ್ನಲ್ಲಿ ಮಾತನಾಡಿ, ಇರುವುದೆಲ್ಲವ ಬಿಟ್ಟು ಸಿನಿಮಾಗೆ ನೀವು ತೋರಿಸಿದ ಪ್ರೀತಿ, ಪ್ರೋತ್ಸಾಹ ಹಾಗೂ ಸಹಕಾರವನ್ನು ಎಂದು ಮರೆಯಲಾಗುವುದಿಲ್ಲ. ಆ ಸಹಕಾರವೇ ನನ್ನ ಇನ್ನೊಂದು ಸಿನಿಮಾ ಮಾಡಲು ವೇದಿಕೆ ಸೃಷ್ಟಿಸಿದೆ. ʻಲೈಫ್ ಟುಡೇ’ ಸಿನಿಮಾಗೆ ಬೆಂಬಲ ಕೊಡಲು ಆಗಮಿಸಿರುವ ಧ್ರುವ, ಶ್ರೀಧರ್, ಮಹೇಂದರ್ ಧನ್ಯವಾದ ಎಂದು ತಿಳಿಸಿದರು.

LIFE TODAY

ನಾಯಕ ಕಿರಣ್ ಆನಂದ್ ಮಾತನಾಡಿ, ನನ್ನ ಮೊದಲ ಸಿನಿಮಾ ಕನ್ನಲ್ಲಿ ಸರ್ ಜೊತೆ ಕೆಲಸ ಮಾಡಲು ಎಕ್ಸೈಟ್ ಆಗಿದ್ದಾರೆ. ನಮ್ಮ ಡಿಒಪಿ ನನ್ನ ಅಣ್ಣನ ತರ ಶ್ರೀಧರ್ ಸರ್ ನಮ್ಮ ಸಿನಿಮಾಗೆ ಮ್ಯೂಸಿಕ್ ಮಾಡ್ತಾ ಇರೋದು ನಮಗೆ ಅದೃಷ್ಟ. ನಾಯಕಿ ಲೇಖಾ ಅವರು ಅವರಿಂದ ಕಲಿಯುವುದು ತುಂಬಾ ಇದೆ. ನಿರ್ಮಾಪಕರು ನನಗೆ ಅಣ್ಣನಿಗಿಂತ ಹೆಚ್ಚು ಎಂದರು.

ನಿರ್ದೇಶಕ ಮಹೇಂದರ್ ಮಾತನಾಡಿ, ‘ಲೈಫ್ ಟುಡೇ’ (Life Today) ಚಿತ್ರದ ಟೈಟಲ್ ನ್ನು ಧ್ರುವ ಸರ್ಜಾ ಪ್ರೇಕ್ಷಕರಿಗೆ ಅರ್ಪಿಸಿದ್ದಾರೆ. ಯುವ ತಂಡ ಈ ಚಿತ್ರದಲ್ಲಿ ಕೆಲಸ ಮಾಡುತ್ತಿದೆ. ತೆರೆಹಿಂದೆ ಇರುವವರೆಲ್ಲ ನನ್ನ ಅಚ್ಚುಮೆಚ್ಚಿನ ತಂಡ. ಶಿಷ್ಯಂದಿರೇ ಅನ್ನಬಹುದು. ಕಲೆ ಎನ್ನುವುದು ಎಲ್ಲರನ್ನೂ ಕೈಬೀಸಿ ಕರೆಯುತ್ತದೆ.ಎಲ್ಲರನ್ನೂ ಅಪ್ಪಿಕೊಳ್ಳುತ್ತದೆ. ಇದು ಸತ್ಯವಾದ ಮಾತು. ಬಹಳಷ್ಟು ಹೊಸಬರು ಇದ್ದೀರಾ? ನಿಮ್ಮನ್ನು ಕಲೆ ಕೈಬೀಸಿ ಕರೆದಿದೆ. ಅದು ನಿಮ್ಮನ್ನೇ ಅಪ್ಪಿಕೊಳ್ಳಲಿ ಎಂದು ಹಾರೈಸಿದರು. ಇದನ್ನೂ ಓದಿ:ಮಗು ಬಗ್ಗೆ ಸುಳಿವು ಕೊಟ್ಟ ದೀಪಿಕಾ ಪಡುಕೋಣೆ

ನಿರ್ದೇಶಕ ಶಶಾಂಕ್ ಮಾತನಾಡಿ, ʻಲೈಫ್ ಟುಡೇ’ ಟೈಟಲ್ ತುಂಬಾ ಟ್ರೆಂಡಿಯಾಗಿದೆ. ಸಿನಿಮಾಗೆ ಒಳ್ಳೆದಾಗಲಿ. ಇಂತಹ ಹೊಸಬರ ತಂಡಕ್ಕೆ ಧ್ರುವ ಸರ್ಜಾ ಪ್ರೋತ್ಸಾಹ ಕೊಟ್ಟಿದ್ದಾರೆ. ʻಲೈಫ್ ಟುಡೇ’ ಸಿನಿಮಾದಿಂದ ಎಲ್ಲರ ಲೈಫ್ ನಲ್ಲಿಯೂ ಗೋಲ್ಡನ್ ಡೇಸ್ ಬರಲಿದೆ ಎಂದು ಹಾರೈಸುತ್ತೇನೆ ಎಂದರು.

‘ಲೈಫ್ ಟುಡೇ’ (Love Today) ಲವ್ ಫ್ಯಾಮಿಲಿ ಕಥಾಹಂದರ ಹೊಂದಿದ್ದು, ಈ ಚಿತ್ರದ ಮೂಲಕ ಕಿರಣ್ ಆನಂದ್ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದು, ಲೇಖಾ ಚಂದ್ರ ನಾಯಕಿಯಾಗಿ ನಟಿಸುತ್ತಿದ್ದಾರೆ. ಜನವರಿ ತಿಂಗಳಾಂತ್ಯಕ್ಕೆ ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ಸಿಗಲಿದ್ದು, ಬೆಂಗಳೂರು ಹಾಗೂ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ‘ಲೈಫ್ ಟುಡೇ’ ಸಿನಿಮಾಗೆ ಶ್ರೀಧರ್ ವಿ ಸಂಭ್ರಮ ಸಂಗೀತ ನಿರ್ದೇಶನವಿದ್ದು, ಸತೀಶ್ ಕುಮಾರ್ ಕ್ಯಾಮೆರಾ ಹಿಡಿಯಲಿದ್ದಾರೆ. ಮೇಘನಾ ಪ್ರೊಡಕ್ಷನ್ ಮೇಘನಾ ಪ್ರದೀಪ್ ‘ಲೈಫ್ ಟುಡೇ’ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

Share This Article