ಬಾಲಿವುಡ್ ಖ್ಯಾತ ನಿರ್ದೇಶಕ ರಾಜ್ ಕುಮಾರ್ ಸಂತೋಷಿ (Rajkumar Santoshi) ತಮಗೆ ಜೀವ ಬೆದರಿಕೆ ಇದೆ, ಭದ್ರತೆ ನೀಡಬೇಕು ಎಂದು ಮುಂಬೈ ಪೊಲೀಸರ ಮೊರೆ ಹೋಗಿದ್ದಾರೆ. ತಮ್ಮ ನಿರ್ದೇಶನದಲ್ಲಿ ಮೂಡಿ ಬಂದ ‘ಗಾಂಧಿ ಗೋಡ್ಸೆ: ಏಕ್ ಯುದ್ಧ’ ಸಿನಿಮಾ ರಿಲೀಸ್ ಹಿನ್ನೆಲೆಯಲ್ಲಿ ತಮಗೆ ಅನೇಕರು ಜೀವ ಬೆದರಿಕೆ ಹಾಕಿದ್ದಾರೆ. ಸಿನಿಮಾ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ಭದ್ರತೆ ನೀಡಬೇಕು ಎಂದು ಅವರು ಮುಂಬೈನ ವಿಶೇಷ ಪೊಲೀಸ್ ಆಯುಕ್ತ ದೇವೇನ್ ಭಾರ್ತಿಗೆ (Deven Bharti) ಪತ್ರ ಬರೆದಿದ್ದಾರೆ.
Advertisement
ಜನವರಿ 30ಕ್ಕೆ ಗಾಂಧೀಜಿ ಪುಣ್ಯತಿಥಿ. ಈ ಸಂದರ್ಭದಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ಸರ್ವ ಸಿದ್ಧತೆ ಮಾಡಿಕೊಂಡಿದ್ದಾರೆ. ಅಂದುಕೊಂಡಂತೆ ಆದರೆ, ಜನವರಿ 26 ರಂದು ಸಿನಿಮಾ ದೇಶದಾದ್ಯಂತ ರಿಲೀಸ್ ಆಗುತ್ತಿದೆ. ಅದಕ್ಕೂ ಮುನ್ನ ನಡೆಯುತ್ತಿರುವ ಪ್ರಚಾರ ಸಂದರ್ಭದಲ್ಲಿ ಅನೇಕರು ಅಡೆತಡೆ ಉಂಟು ಮಾಡುತ್ತಿದ್ದಾರಂತೆ. ಟ್ರೈಲರ್ ರಿಲೀಸ್ ಆಗುತ್ತಿದ್ದಂತೆಯೇ ತಮಗೆ ಒತ್ತಡ ಕೂಡ ಜಾಸ್ತಿ ಆಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಚಿತ್ರರಂಗ ನನ್ನ ಸ್ವತ್ತಲ್ಲ, ಕೆಸಿಸಿಗೆ ಎಲ್ಲರಿಗೂ ಆಹ್ವಾನವಿದೆ: ಕಿಚ್ಚ ಸುದೀಪ್
Advertisement
Advertisement
ಸೂಕ್ಷ್ಮ ವಿಚಾರಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿರುವ ಅವರು, ಗೋಡ್ಸೆ (Godse) ಗುಂಡು ಹಾರಿಸಿದ ನಂತರವೂ ಗಾಂಧೀಜಿ (Gandhiji) ಬದುಕಿದ್ದರೆ ಏನೆಲ್ಲ ಆಗುತ್ತಿತ್ತು ಎನ್ನುವುದನ್ನು ಕಥಾವಸ್ತುವಾಗಿ ಅವರು ತಗೆದುಕೊಂಡಿದ್ದಾರೆ. ಈ ಕಥಾವಸ್ತುವೆ ವಿವಾದಕ್ಕೂ ಕಾರಣವಾಗಿದೆ. ಸ್ವತಃ ಗಾಂಧೀಜಿ ಕುಟುಂಬದವರೇ ಸಿನಿಮಾಗೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಇದೊಂದು ಕಾಲ್ಪನಿಕ ಕಥೆ ಎಂದು ಚಿತ್ರತಂಡ ಹೇಳಿಕೊಂಡರೂ, ಅಡೆತಡೆ ಮಾತ್ರ ಇನ್ನೂ ನಿಂತಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ತಮಗೆ ಮಾತ್ರವಲ್ಲ, ತಮ್ಮ ಕುಟುಂಬಕ್ಕೂ ಭದ್ರತೆ ಬೇಕು ಎಂದು ಅವರು ಕೇಳಿದ್ದಾರೆ.
Advertisement
ಈ ಸಿನಿಮಾದಲ್ಲಿ ದೀಪಕ್ ಅಂತಾನಿ ಅವರು ಗಾಂಧೀಜಿ ಅವರ ಪಾತ್ರವನ್ನು ನಿರ್ವಹಿಸಿದ್ದರೆ, ಗೋಡ್ಸೆಯಾಗಿ ಚಿನ್ಮಯ್ ಮಂಡ್ಲೇಕರ್ ಪಾತ್ರ ಮಾಡಿದ್ದಾರೆ. ಗಾಂಧಿ ಮತ್ತು ಗೋಡ್ಸೆ ಅವರ ಸೈದ್ಧಾಂತಿಕ ಯುದ್ಧವೇ ಈ ಸಿನಿಮಾದಲ್ಲಿದೆ. ಗೋಡ್ಸೆ ಹಾರಿಸಿದ ಗುಂಡು ಗಾಂಧೀಜಿಯನ್ನು ಕೊಲ್ಲದೇ, ಅವರು ಬದುಕಿ ಆನಂತರ ಗೋಡ್ಸೆಯನ್ನು ಕಾಣಲು ಗಾಂಧಿ ಬಯಸುತ್ತಾರೆ. ಭೇಟಿಯಾದ ನಂತರ ಅವರಿಬ್ಬರ ನಡುವೆ ನಡೆಯುವ ಸನ್ನಿವೇಶಗಳೇ ಸಿನಿಮಾವಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k