ಬೆಳಗಾವಿ: ಓರ್ವ ಸ್ವಾಮೀಜಿ ಸೇರಿ ಸಿಎಂ ಸಿದ್ದರಾಮಯ್ಯ (Siddaramaiah) ಸಂಪುಟದ ಮೂವರು ಸಚಿವರಿಗೆ (Ministers) ಅನಾಮಿಕನೋರ್ವ ಜೀವ ಬೆದರಿಕೆ ಪತ್ರ (Life Threat Letter) ಬರೆದಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಶ್ರೀ ಸೇರಿ ಮೂವರು ಸಚಿವರಿಗೆ ಅನಾಮಧೇಯ ವ್ಯಕ್ತಿಯೋರ್ವ ಜೀವ ಬೆದರಿಕೆ ಪತ್ರ ಬರೆದಿದ್ದು, ಸಚಿವ ಸತೀಶ್ ಜಾರಕಿಹೊಳಿ, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ ಹೆಸರನ್ನು ಉಲ್ಲೇಖಿಸಿ ಜೀವ ಬೆದರಿಕೆ ಹಾಕಿದ್ದಾನೆ. ಇಷ್ಟು ಮಾತ್ರವಲ್ಲದೇ ಹಲವು ಪ್ರಗತಿಪರ ವಿಚಾರವಾದಿಗಳಿಗೂ ಈ ಪತ್ರದ ಮೂಲಕ ಬೆದರಿಕೆ ಹಾಕಲಾಗಿದೆ. ಇದನ್ನೂ ಓದಿ: ಡಿಸಿಎಂ ತಗೊಂಡು ಏನ್ ಮಾಡ್ಬೇಕು, ಆದ್ರೆ ಲಿಂಗಾಯತರು ಸಿಎಂ ಆಗ್ಬೇಕು: ಶಾಮನೂರು ಕಿಡಿ
ಬೆಳಗಾವಿ (Belagavi) ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲೂರು ನಿಷ್ಕಲಮಂಟಪ ಆಶ್ರಮಕ್ಕೆ ಸೆಪ್ಟೆಂಬರ್ 20ರಂದು ಈ ಜೀವ ಬೆದರಿಕೆ ಪತ್ರ ಬಂದಿದೆ. ಕಳೆದ ತಿಂಗಳಷ್ಟೇ ಶ್ರೀಗಳಿಗೆ ಜೀವ ಬೆದರಿಕೆ ಪತ್ರ ಬಂದಿತ್ತು. ಈಗ ಮತ್ತೆ ನಿಷ್ಕಲಮಂಟಪಕ್ಕೆ ಇನ್ನೊಂದು ಜೀವ ಬೆದರಿಕೆ ಪತ್ರವನ್ನು ಕಳುಹಿಸಲಾಗಿದೆ. ಇದನ್ನೂ ಓದಿ: ಹಿಂದುತ್ವದ ಮೇಲೆ ಆತನಿಗೆ ಒಲವಿತ್ತು, ಪತ್ರದಲ್ಲಿ ಮನವಿ ಮಾಡಿರಬಹುದು – ಆರೋಪಿ ಶಿವಾಜಿರಾವ್ ಜಾಧವ್ ಸಹೋದರ
ಪತ್ರದಲ್ಲಿ ಏನಿದೆ?
ನಿಜಗುಣಾನಂದ ನಾನು ಬರೆದಿರುವ ಪತ್ರ ಪ್ರೇಮ ಪತ್ರ ಅಂತಾದರೂ ತಿಳಿ ಅಥವಾ ಸಾವಿನ ಪತ್ರವಂತಾದರೂ ತಿಳಿ. ನಾನು ನಿನ್ನ ಜೊತೆ ತಮಾಷೆ ಮಾಡುತ್ತಿಲ್ಲ. ನೀನು ಆಯೋಜಿಸುವ ಪಾಪದ ಕಾರ್ಯಕ್ರಮದಲ್ಲೇ ನಿನ್ನ ಕಣ್ಣೆದುರಿಗೆ ನಿನ್ನ ಸಾವು ಬರುತ್ತದೆ. ನೀನು ಮನುಷ್ಯ ರೂಪದಲ್ಲಿರುವ ರಾಕ್ಷಸ. ಹಿಂದೂ ಧರ್ಮ ದೇವತೆಗಳನ್ನು ನಿಂದಿಸುವ ನೀನು ರಾಕ್ಷಸನೇ ಸರಿ. ನಿನ್ನ ಜೀವನದ ಕೊನೆಯ ಘಟ್ಟದಲ್ಲಿ ನೀನು ನಿಂತಿದ್ದಿಯಾ. ನಿನ್ನ ಹತ್ಯೆ ಬಿಟ್ಟರೆ ಬೇರೆ ದಾರಿಯೇ ಇಲ್ಲ. ನಿನ್ನಂಥ ದುಷ್ಟ ರಾಕ್ಷಸ ಸಂತತಿಯ ಸಂಹಾರವನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಬೆದರಿಕೆ ಹಾಕಲಾಗಿದೆ. ಇದನ್ನೂ ಓದಿ: ವ್ಯಕ್ತಿಗಳ ಬ್ರೈನ್ ವಾಷ್ ಮಾಡಿ ಆಯುಧ ಮಾಡುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ: ಕುಂ.ವೀರಭದ್ರಪ್ಪ
ಹಲವು ವಿಚಾರವಾದಿಗಳು ಹಾಗೂ ಪ್ರಗತಿಪರರ ಹೆಸರನ್ನು ಪತ್ರದಲ್ಲಿ ಉಲ್ಲೇಖಿಸಿದ್ದು, ರಾಜ್ಯದ ಮೂವರು ಸಚಿವರು, ಸಾಹಿತಿಗಳ ಹೆಸರುಗಳನ್ನು ಬೆದರಿಕೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಎಸ್‌ಜಿ ಸಿದ್ದರಾಮಯ್ಯ, ಕೆ ಮರುಳಸಿದ್ದಪ್ಪ, ಬರಗೂರು ರಾಮಚಂದ್ರಪ್ಪ, ಭಾಸ್ಕರ್ ಪ್ರಸಾದ್, ಪ್ರೊ.ಭಗವಾನ್, ಪ್ರೊ.ಮಹೇಶ್‌ಚಂದ್ರ, ಬಿಟಿ ಲಲಿತಾ ನಾಯಕ್, ನಟ ಚೇತನ್, ನಟ ಪ್ರಕಾಶರಾಜ್, ಪ್ರಿಯಾಂಕ್ ಖರ್ಗೆ, ಜಾರಕಿಹೊಳಿ, ದಿನೇಶ್ ಗುಂಡೂರಾವ್, ದ್ವಾರಕಾನಾಥ, ದೇವನೂರು ಮಹದೇಪ್ಪ, ಬಿಎಲ್ ವೇಣು, ನೀವು ನಿಮ್ಮ ತಂದೆ ತಾಯಿಗಳಿಗೆ ಹುಟ್ಟಿದ್ದರೆ ಕೇಳುವ ಪ್ರಶ್ನೆಗೆ ಉತ್ತರ ಕೊಡಿ ಎಂದು ಅನಾಮಧೇಯ ಸವಾಲೆಸೆದಿದ್ದಾನೆ. ಇದನ್ನೂ ಓದಿ: ರಾಯಚೂರಿನಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ – ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು
ಮತಾಂಧ ಮುಸ್ಲಿಮರು, ಪಾಕಿಸ್ತಾನಿಗಳು, ಭಯೋತ್ಪಾದಕರು ಮಾಡುತ್ತಿರುವುದು ತಪ್ಪು ಎಂದು ಹೇಳುವ ತಾಕತ್ತು ನಿಮ್ಮಲ್ಲಿದೆಯೇ? ದೇಶದ ಒಳಗೆ ಇದ್ದುಕೊಂಡು ಪಾಕ್ ನಾಯಿಗಳು ಮಾಡುತ್ತಿರುವುದು ತಪ್ಪು ಎಂದು ಹೇಳುವ ಧೈರ್ಯ ನಿಮ್ಮಲ್ಲಿದೆಯೇ? ಧೈರ್ಯವಿದ್ದರೆ ಹೇಳಿ. ಇಲ್ಲವಾದರೆ ನಿಮ್ಮ ಕೊನೆಯ ದಿನಗಳನ್ನು ಎಣಿಸಿ. ನಿಜಗುಣಾನಂದ ನಿನ್ನ ಕೊನೆಯ ದಿನಗಳನ್ನು ಎಣಿಸು ಎಂದು ಪತ್ರದ ಮೂಲಕ ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: ಸಂಸದ ಮುನಿಸ್ವಾಮಿ, ಶಾಸಕ ಎಸ್‌ಎನ್ ನಾರಾಯಣಸ್ವಾಮಿ ಜಟಾಪಟಿ ಪ್ರಕರಣ – ಎಫ್‌ಐಆರ್ ದಾಖಲು
Web Stories