ಲಕ್ನೋ: 2006 ರ ಉಮೇಶ್ ಪಾಲ್ (Umesh Pal) ಅಪಹರಣ ಪ್ರಕರಣದಲ್ಲಿ ಪ್ರಯಾಗ್‌ರಾಜ್‌ನ ನ್ಯಾಯಾಲಯವು ಅಪರಾಧಿಗಳೆಂದು ಘೋಷಿಸಿ ಗ್ಯಾಂಗ್‌ಸ್ಟರ್ ಸಮಾಜವಾದಿ ಪಕ್ಷದ ಮಾಜಿ ಸಂಸದ ಮತ್ತು ಪಾತಕಿ ಅತೀಕ್ ಅಹ್ಮದ್ (Atiq Ahmed) ಮತ್ತು ಇತರ ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಈ ಪ್ರಕರಣದಲ್ಲಿ ಅತೀಕ್ ಅಹ್ಮದ್ ಸಹೋದರ ಖಾಲಿದ್ ಅಜೀಂ ಅಲಿಯಾಸ್ ಅಶ್ರಫ್ ಸೇರಿದಂತೆ ಏಳು ಮಂದಿಯನ್ನು ಖುಲಾಸೆಗೊಳಿಸಲಾಗಿದೆ. ಇದನ್ನೂ ಓದಿ: ಕರೆಂಟ್ ಕಟ್ ಮಾಡಿದ್ದಕ್ಕೆ ಡಿಸಿಎಂ ಮನೆಗೆ ಬಾಂಬ್ ಬೆದರಿಕೆ ಹಾಕಿದ ಭೂಪ
Advertisement
Advertisement
ಕೊಲೆ ಮತ್ತು ಅಪಹರಣ ಸೇರಿದಂತೆ 100 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಮಾಜಿ ಸಂಸದ ಮತ್ತು ಶಾಸಕ ಅಹ್ಮದ್ ಅವರನ್ನು ಸೋಮವಾರ ಉತ್ತರ ಪ್ರದೇಶ ಪೊಲೀಸರು ಗುಜರಾತ್ ಜೈಲಿನಿಂದ ಪ್ರಯಾಗ್‌ರಾಜ್‌ಗೆ ಕರೆತಂದರು.
Advertisement
ಬಹುಜನ ಸಮಾಜ ಪಕ್ಷದ ಶಾಸಕ ರಾಜು ಪಾಲ್ ಅವರ (2005) ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಹತ್ಯೆಯ ಒಂದು ತಿಂಗಳ ನಂತರ ಅಹ್ಮದ್ ಅವರಿಗೆ ಶಿಕ್ಷೆಯಾಗಿದೆ. ಇದನ್ನೂ ಓದಿ: ಧನ್ಯವಾದ, ಮನೆ ಖಾಲಿ ಮಾಡುವೆ – ಲೋಕಸಭೆಯ ವಸತಿ ಸಮಿತಿ ಪತ್ರಕ್ಕೆ ರಾಗಾ ಉತ್ತರ
Advertisement
ಈ ವರ್ಷ ಫೆಬ್ರವರಿ 24 ರಂದು ಪ್ರಯಾಗರಾಜ್‌ನಲ್ಲಿ ಹ್ಯುಂಡೈ ಕ್ರೆಟಾ ಎಸ್‌ಯುವಿಯ ಹಿಂಬದಿಯಿಂದ ಹೊರಬರುತ್ತಿದ್ದಾಗ ಉಮೇಶ್ ಪಾಲ್ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಅವರ ಜೊತೆಗಿದ್ದ ಇಬ್ಬರು ಪೊಲೀಸ್ ಅಂಗರಕ್ಷಕರೂ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದರು.