ಜಿನೀವಾ: ಜೀವನವು ಖಟಾ-ಖಟ್ (ಸುಲಭವಾದ ಕೆಲಸ) ಅಲ್ಲ. ಅದಕ್ಕೆ ಕಠಿಣ ಪರಿಶ್ರಮ ಮತ್ತು ಶ್ರದ್ಧೆಯ ಅಗತ್ಯವಿದೆ ಎಂದು ಹೇಳುವ ಮೂಲಕ ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ (Rahul Gandhi) ಟಾಂಗ್ ನೀಡಿದ್ದಾರೆ.
ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರ ಕೈಗೊಂಡಿರುವ ಮೂಲಸೌಕರ್ಯ ಅಭಿವೃದ್ಧಿ ವಿಚಾರದ ಬಗ್ಗೆ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
Advertisement
ನೀವು ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲಗಳನ್ನು ನಿರ್ಮಿಸುವವರೆಗೆ ಆ ನೀತಿಗಳನ್ನು ಜಾರಿಗೆ ತರುವವರೆಗೆ ಅದು ಕಠಿಣ ಕೆಲಸ ಎಂದು ಹೇಳಿದರು.
Advertisement
#WATCH | Interacting with the Indian community in Geneva, EAM Dr S Jaishankar says, “…Until you build infrastructure & human resources, have those policies in place, it is hard work. Life is not ‘khata-khat’, life is hard work and diligence…”
(Video source: Ministry of… pic.twitter.com/Bdcv76dNgJ
— ANI (@ANI) September 13, 2024
Advertisement
ಒಂದು ದೇಶವು ತನ್ನ ಉತ್ಪಾದನಾ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸದೇ ದೊಡ್ಡ ಶಕ್ತಿಯಾಗಲು ಸಾಧ್ಯವಿಲ್ಲ. ಹಿಂದಿನ ಸರ್ಕಾರ ಉತ್ಪಾದನಾ ವಲಯವನ್ನು ನಿರ್ಲಕ್ಷಿಸಿದ ಕಾರಣ ನಾವು ಚೀನಾ (China) ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಬೇಕಾಗಿದೆ ಎಂದು ಹೇಳುವ ಮೂಲಕ ರಾಹುಲ್ ಗಾಂಧಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: ನಾನಿನ್ನೂ ವೆಬ್‌ಸೀರಿಸ್ ನೋಡಿಲ್ಲ, ಮಾಡುವವರು ಸರ್ಕಾರವನ್ನು ಒಳ್ಳೆಯ ರೀತಿಯಲ್ಲಿ ತೋರಿಸಲ್ಲ: ಎಸ್.ಜೈಶಂಕರ್
Advertisement
ಲೋಕಸಭಾ ಚುನಾವಣೆಯ ಪ್ರಚಾರ ಭಾಷಣದಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗಳಿಗೆ ಹಣ ವರ್ಗಾವಣೆ ಮಾಡುವ ವಿಚಾರ ಪ್ರಸ್ತಾಪಿಸುವ ವೇಳೆ ಪದೇ ಪದೇ ಖಟಾ-ಖಟ್ (khata-khat) ಪದವನ್ನು ಉಲ್ಲೇಖಿಸುತ್ತಿದ್ದರು.
ಟೆಕ್ಸಾಸ್ ವಿಶ್ವವಿದ್ಯಾಲಯದ ನಡೆದ ಸಂವಾದಲ್ಲಿ ಮಾತನಾಡಿದ ರಾಹುಲ್, ಭಾರತದಂತೆ ಪಶ್ಚಿಮದಲ್ಲಿ ಉದ್ಯೋಗದ ಸಮಸ್ಯೆ ಇದೆ. ಆದರೆ ಚೀನಾ ಮತ್ತು ವಿಯೆಟ್ನಾಂನಂತಹ ಅನೇಕ ದೇಶಗಳು ಅಂತಹ ಸವಾಲನ್ನು ಎದುರಿಸುವುದಿಲ್ಲ ಏಕೆಂದರೆ ಅವು ಉತ್ಪಾದನಾ ವಲಯದ ದೇಶಗಳು ಎಂದು ಹೇಳಿಕೆ ನೀಡಿದ್ದರು.