ಬೆಂಗಳೂರು: ಜನಸಾಮಾನ್ಯನಿಗೆ ಪದಾರ್ಥಗಳ ಬೆಲೆ ಏರಿಕೆ ಜೊತೆ ಜಿಎಸ್‍ಟಿ ಏಟು ಬಿತ್ತು ಅನ್ನೋವಾಗಲೇ ಇದೀಗ ಮತ್ತೊಂದು ಬರೆ ಬಿದ್ದಿದೆ. ಕೋವಿಡ್ ಬಳಿಕ ಜನರ ಜೀವನ ಮೂರಾಬಟ್ಟೆಯಾಗಿದೆ. ಪ್ರತಿನಿತ್ಯ ಒಂದಲ್ಲ ಒಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನ ಸಾಮಾನ್ಯನಿಗೆ ಬೆಂಗಳೂರಿನ ಜೀವನ ಮತ್ತಷ್ಟು ಕಾಸ್ಟ್ಲಿ ಅನಿಸಲಿದೆ.
ಹೌದು. ಕೋವಿಡ್‍ನಿಂದ ಬಳಲಿದ ಜನಸಾಮಾನ್ಯರಿಗೆ ಈಗ ಮನೆ ಬಾಡಿಗೆ ಏರಿಕೆ ಮತ್ತೊಂದು ಶಾಕ್ ನೀಡಿದೆ. ಕಳೆದ ಎರಡು ವರ್ಷಗಳಿಂದ ಮನೆ ಬಾಡಿಗೆಯೇ ಅಜಗಜಾಂತರವಾಗಿದೆ. 1 ಬಿಹೆಚ್‍ಕೆ, 2 ಬಿಹೆಚ್‍ಕೆ ಬಾಡಿಗೆ ಮನೆ ಸೇರಿದಂತೆ ಲೀಸ್ ಅಮೌಂಟ್‍ನಲ್ಲೂ ಭರ್ಜರಿ ಏರಿಕೆಯಾಗಿದೆ. ವರ್ಷಕ್ಕೆ 500 ರೂಪಾಯಿ ಏರಿಕೆ ಮಾಡುತ್ತಿದ್ದ ಮನೆ ಮಾಲೀಕರು, ಇದೀಗ ಬರೋಬ್ಬರಿ ಶೇಕಡಾ 80 ರಷ್ಟು ಬಾಡಿಗೆ ಏರಿಕೆ ಮಾಡಿದ್ದಾರೆ.
ಮನೆ ನಿರ್ಮಾಣ, ಹಸ್ತಾಂತರ ವಿಳಂಬ, ಕೂಲಿಗಾರರು ಬರದೇ ಇರುವುದು ಬಾಡಿಗೆ ಹೆಚ್ಚಳಕ್ಕೆ ಕಾರಣವಂತೆ. ಜೊತೆಗೆ ಈಗಾಗಲೇ ಅನೇಕ ಆಗತ್ಯ ವಸ್ತುಗಳ ಸಂಖ್ಯೆ ಸೇರಿದಂತೆ ಕೋವಿಡ್ ದಿನಗಳಲ್ಲಿ ಆದ ಹೊಡೆತದಿಂದ ಸುಧಾರಣೆ ಕಾಣಬೇಕಾದರೆ ಇದು ಅಗತ್ಯ ಅನ್ನೋದು ಮಾಲೀಕರ ವಾದ. ಇದನ್ನೂ ಓದಿ: ಇನ್ಮುಂದೆ ಶಾಲೆಗಳ ಮುಂದೆ ಮಾರುವಂತಿಲ್ಲ ಐಸ್‌ಕ್ರೀಮ್, ಚಾಟ್ ಫುಡ್ – ಇಲ್ಲಿದೆ ವಿವರ
ಒಟ್ಟಾರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟ ಮಧ್ಯಮ ವರ್ಗದ ಜನಕ್ಕೆ ಮತ್ತೊಂದು ಏರಿಕೆ ಬಿಸಿ ತುಪ್ಪವಾಗಿ ಪರಿಣಮಿಸಿರುವುದಂತು ಸುಳ್ಳಲ್ಲ. ಇದರ ಜೊತೆಗೆ ದಿನಸಿ ಪದಾರ್ಥಗಳ ಮೇಲೆ ಜಿಎಸ್‍ಟಿ ಕಟ್ಟೋದಾ..? ಅಥವಾ ಮನೆ ಬಾಡಿಗೆ ಕಟ್ಟೋದಾ ಅನ್ನೋದು ಬಾಡಿಗೆದಾರರ ಪ್ರಶ್ನೆಯಾಗಿದೆ.