ಚಿತ್ರದುರ್ಗ: ಸುಳ್ಳು ಬಿಜೆಪಿಯ (BJP) ಮನೆದೇವರು. ಅವರನ್ನು ಯಾರೂ ನಂಬಬೇಡಿ ಎಂದು ಜನರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ತಿಳಿಸಿದರು.
ಚಿತ್ರದುರ್ಗದಲ್ಲಿ (Chitradurga) ಕಾಂಗ್ರೆಸ್ (Congress) ಪಕ್ಷದಿಂದ ಆಯೋಜಿಸಿದ್ದ ಎಸ್ಸಿ ಹಾಗೂ ಎಸ್ಟಿ ಐಕ್ಯತಾ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡರು ಜನರ ಭಾವನೆಗಳ ಮೇಲೆ ದೇಶ ಕಟ್ಟಲು ಮುಂದಾಗಿದ್ದಾರೆ. ಆದರೆ ಕಾಂಗ್ರೆಸ್ ಜನರ ಬದುಕಿನ ಮೇಲೆ ದೇಶ ಕಟ್ಟಲಿದೆ. ಹೀಗಾಗಿ ರಾಜ್ಯದ ಜನರು ಯಾರು ಸಹ ಬಿಜೆಪಿಯ ಸುಳ್ಳಿನ ಕಂತೆಗೆ ಬಲಿಯಾಗಬೇಡಿ. ಬಿಜೆಪಿಗೆ ಸುಳ್ಳೇ ಬಂಡವಾಳ ಆಗಿದೆ. ಬಿಜೆಪಿ ನುಡಿದಂತೆ ನಡೆಯಲು ಆಗಿಲ್ಲ. ಚುನಾವಣೆಯ ವೇಳೆ ಕೊಟ್ಟ ಮಾತು ಈಡೇರಿಸಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕರ್ನಾಟಕ ಚುನಾವಣೆ ಮೇಲೆ ಕಣ್ಣು – ಲೋಕಸಭಾವಾರು ವೀಕ್ಷಕರನ್ನ ನೇಮಿಸಿದ ಕಾಂಗ್ರೆಸ್
ನಮ್ಮ ದೇಶಕ್ಕೆ ಸ್ವತಂತ್ರ್ಯ ಬಂದಾಗಿನಿಂದಲೂ ದಲಿತ ಶಕ್ತಿ ಕಾಂಗ್ರೆಸ್ ಶಕ್ತಿಯಾಗಿದೆ. ದಲಿತರು ಕಾಂಗ್ರೆಸ್‌ಗೆ ಆಸರೆಯಾಗಿದ್ದಾರೆ. ಒಂದು ಬೃಹತ್ ಆಲದಮರದ ಕೆಳಗೆ ನಿಂತಂತೆ ದಲಿತರೊಳಗೆ ಕಾಂಗ್ರೆಸ್ ಒಂದಾಗಿದೆ ಎಂದು ಮಾತನಾಡಿದರು.
ಎಸ್ಸಿ, ಎಸ್ಟಿಗಳ ಪಕ್ಷ ಅಂದ್ರೆ ಕಾಂಗ್ರೆಸ್. ಅಂಬೇಡ್ಕರ್ ನೇತೃತ್ವದಲ್ಲಿ ಕಾಂಗ್ರೆಸ್ ಎಲ್ಲಾ ಜನರ ರಕ್ಷಣೆಗಾಗಿ ನಿಂತಿದೆ. ಹಾಗೆಯೇ ಈ ದೇಶದಲ್ಲಿ ಮಹತ್ಮಾ ಗಾಂಧೀಜಿ, ಸುಭಾಶ್ ಚಂದ್ರ ಬೋಸ್, ಇಂದಿರಾಗಾಂಧಿ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅಲಂಕರಿಸಿದ ಸ್ಥಾನ ನಮ್ಮ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಕ್ಕಿದೆ. ಇಡೀ ದೇಶದ ಉದ್ದಗಲಕ್ಕೂ ಆಶೀರ್ವಾದ ಮಾಡಿ ಅವರಿಗೆ ಈ ಸ್ಥಾನ ಕಲ್ಪಿಸಿದ್ದಾರೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: ಕೋಲಾರದಿಂದ ಸ್ಪರ್ಧಿಸುವ ಬಗ್ಗೆ ನಾಳೆ ಅಧಿಕೃತವಾಗಿ ಘೋಷಣೆ ಮಾಡ್ತಾರಾ ಸಿದ್ದರಾಮಯ್ಯ?
ರಾಷ್ಟ್ರೀಯ ಕಾಂಗ್ರೆಸ್ ಮುಖಂಡತ್ವದಲ್ಲಿ ಸರ್ಕಾರ ರಚಿಸಲು ನಾವು ಮುಂದಾಗಿದ್ದೇವೆ. ಮಲ್ಲಿಕಾರ್ಜುನ ಖರ್ಗೆ ಅವರ ಕೈ ಬಲಪಡಿಸಲು ನಾವು ನಿಂತಿದ್ದೇವೆ. ಇಂದು ಎಲ್ಲರೂ ಪ್ರತಿಜ್ಞೆ ಮಾಡಬೇಕು. ಖರ್ಗೆ ಅವರ ನೇತೃತ್ವದಲ್ಲಿ ಸರ್ಕಾರ ರಚಿಸುತ್ತೇವೆಂದು ಪ್ರತಿಜ್ಞೆ ಮಾಡಬೇಕು ಎಂದರು.
ಈ ಸಮಾವೇಶದ ಶಕ್ತಿ ಹಾಗೂ ಜನಸಮೂಹ ನೋಡಿದ್ರೆ 136 ಸೀಟು ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ನಿರೀಕ್ಷೆ ನನಗಿದೆ. ಇಂತಹ ಐಕ್ಯತಾ ಸಮಾವೇಶದ ಜವಾಬ್ದಾರಿ ಹೊತ್ತ ನಾಯಕರಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ ಎಂದು ಅಭಿನಂದಿಸಿದರು. ಇದನ್ನೂ ಓದಿ: ಸ್ಯಾಂಟ್ರೋ, ಹುಂಡೈನಂಥ ಯಾವ್ಯಾವ ಬ್ರ್ಯಾಂಡ್‌ಗಳು ಎಲ್ಲೆಲ್ಲಿವೆಯೋ ನನಗೆ ಗೊತ್ತಿಲ್ಲ: ಅಶ್ವಥ್ ನಾರಾಯಣ್
ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ ಎನಿಸಿದೆ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸವಾಗಿದ್ದು, ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ದೇಶ ಅಧಿಕಾರಕ್ಕೆ ಬಂದಂತಾಗುತ್ತದೆ. ಆದ್ದರಿಂದ ಎಲ್ಲರೂ ಕಾಂಗ್ರೆಸ್ ಗೆಲ್ಲಿಸಬೇಕು. ರಾಜ್ಯದಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸಿದಾಗ, ಇಲ್ಲಿನ ಜನರು ತೋರಿದ ಪ್ರೀತಿ, ವಿಶ್ವಾಸ, ಜೊತೆಯಾಗಿ ಹೆಜ್ಜೆ ಹಾಕಿದ್ದು ದೇಶಕ್ಕೆ ಶಕ್ತಿ ನೀಡಿದೆ ಎಂದು ಕೊಂಡಾಡಿದರು. ಈ ವೇಳೆ ಸಮಾವೇಶದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ನಾಯಕ ಬಿ.ಕೆ.ಹರಿಪ್ರಸಾದ್, ಮಾಜಿ ಡಿಸಿಎಂ ಜಿ.ಪರಮೇಶ್ವರ್, ಮಾಜಿ ಸಚಿವರಾದ ಹೆಚ್.ಆಂಜನೇಯ, ಸತೀಶ್ ಜಾರಕಿಹೊಳಿ, ಶಿವರಾಜ್ ತಂಗಡಗಿ ಇದ್ದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k