ಪೊಲೀಸ್ ಠಾಣೆಯಲ್ಲೊಂದು ಗ್ರಂಥಾಲಯ, ಇಷ್ಟವಾದ್ರೆ ಪುಸ್ತಕ ನೀಡಿ: ಅಣ್ಣಾಮಲೈ

Public TV
1 Min Read
Annamalai Library

ಬೆಂಗಳೂರು: ಪೊಲೀಸ್ ಇಲಾಖೆಯ ಸಿಂಗಂ ಎಂದು ಖ್ಯಾತಿಯಾಗಿರುವ ಬೆಂಗಳೂರು ದಕ್ಷಿಣ ವಿಭಾಗದ 17 ಪೊಲೀಸ್ ಠಾಣೆಗಳಲ್ಲಿ ಪುಟ್ಟ ಗ್ರಂಥಾಲಯವನ್ನು ಸ್ಥಾಪಸಿದ್ದಾರೆ. ನಮ್ಮ ಈ ಯೋಚನೆ ಮೆಚ್ಚುಗೆ ಆದಲ್ಲಿ ಪುಸ್ತಕಗಳನ್ನು ನೀಡಿ ಎಂದು ಡಿಸಿಪಿ ಅಣ್ಣಾಮಲೈ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಅಣ್ಣಾಮಲೈ ಬಗ್ಗೆ ಗೊತ್ತಿರದ ಸಂಗತಿ ಇಲ್ಲಿದೆ

ಆರಂಭದಲ್ಲಿ 17 ಠಾಣೆಗಳಲ್ಲಿ ತಲಾ 20 ಪುಸ್ತಕಗಳ್ನು ಒಳಗೊಂಡ ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ. ಬಿಡುವಿನ ಸಮಯದಲ್ಲಿ ಠಾಣೆಯಲ್ಲಿಯ ಪೊಲೀಸರು ಪುಸ್ತಕಗಳನ್ನು ಓದುವ ಮೂಲಕ ತಮ್ಮ ಬುದ್ಧಿವಂತಿಕೆ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿದೆ. ಈ ರೀತಿಯ ಭಿನ್ನ ಪುಸ್ತಕಗಳ ಜ್ಞಾನರ್ಜನೆಯಿಂದ ಎಲ್ಲ ಕೆಲಸಗಳಲ್ಲಿ ನಮ್ಮ ಅಧಿಕಾರಿಗಳು ಸದೃಢರಾಗಲಿ ಎಂಬ ಉದ್ದೇಶದಿಂದ ಗ್ರಂಥಾಲಯ ಸ್ಥಾಪಿಸಲಾಗಿದೆ ಎಂದು ಅಣ್ಣಾಮಲೈ ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: 5 ವರ್ಷದಲ್ಲಿ ನಾನು ತೆಗೆದುಕೊಂಡಿದ್ದು 21 ರಜೆ ಮಾತ್ರ: ಅಣ್ಣಾಮಲೈ

ಒಂಭತ್ತು ವರ್ಷಗಳ ರಾಜ್ಯದಲ್ಲಿ ಸೇವೆ ಸಲ್ಲಿಸಿರುವ ಡಿಸಿಪಿ ಅಣ್ಣಾಮಲೈ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಿದ್ದಾರೆ. ರಾಜೀನಾಮೆ ಅಂಗೀಕಾರವಾಗುವರೆಗೂ ಅಧಿಕಾರದಲ್ಲಿ ಅಣ್ಣಾಮಲೈ ಮುಂದುವರಿಯಲಿದ್ದಾರೆ. ಇದನ್ನೂ ಓದಿ: ನಾನು ನನ್ನ ಖಾಕಿಯಲ್ಲಿ ಪ್ರತಿ ಕ್ಷಣವನ್ನು ಜೀವಿಸಿದ್ದೇನೆ: ಅಭಿಮಾನಿಗಳಿಗೆ ಅಣ್ಣಾಮಲೈ ಭಾವನಾತ್ಮಕ ಪತ್ರ

Share This Article
Leave a Comment

Leave a Reply

Your email address will not be published. Required fields are marked *