ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ‘ಪಠಾಣ್’ ಸಿನಿಮಾಗೆ ಮತ್ತೊಂದು ಸಂಕಟ ಎದುರಾಗಿದೆ. ಈ ಸಿನಿಮಾದ ಅಶ್ಲೀಲ ಕಂಟೆಂಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಕ್ಕಳ ಹಿತದೃಷ್ಟಿಯಿಂದ ಅವುಗಳನ್ನು ಸೋಷಿಯಲ್ ಮೀಡಿಯಾದಿಂದ ತೆಗೆದು ಹಾಕುವಂತೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯು ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದೆ.
Advertisement
ಕಲ್ಯಾಣ ಸಮಿತಿಯು ಡಿಜಿಪಿಗೆ ಬರೆದ ಪತ್ರದಲ್ಲಿ, ಪಠಾಣ್ ಸಿನಿಮಾದ ಬೇಷರಂ ರಂಗ್ ಗೀತೆಯಲ್ಲಿ ಅಶ್ಲೀಲ ಅನಿಸುವಂತಹ ಕಂಟೆಂಟ್ ಇದೆ. ಇದು ಬಾಲಾಪರಾಧಿ ಕಾಯಿದೆ ಪ್ರಕಾರ ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹಾಗಾಗಿ ಕೂಡಲೇ ಅವುಗಳನ್ನು ಸಾಮಾಜಿಕ ಮಾಧ್ಯಮದಿಂದ ತೆಗೆಸಬೇಕು’ ಎಂದು ಬರೆಯಲಾಗಿದೆ. ಆ ಪತ್ರಕ್ಕೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಶ್ರೀವಾಸ್ತವ ಮತ್ತು ಹಲವರು ಸಹಿ ಮಾಡಿದ್ದಾರೆ.
Advertisement
Advertisement
ಈಗಾಗಲೇ ಸೆನ್ಸಾರ್ ಮಂಡಳಿ ಕೂಡ ಕೆಲ ದೃಶ್ಯಗಳನ್ನು ತೋರಿಸಲು ಸಾಧ್ಯವೇ ಇಲ್ಲ ಎಂದು, ಅವುಗಳನ್ನು ಸಿನಿಮಾದಿಂದ ತಗೆದು ಹಾಕಬೇಕು ಎಂದು ನಿರ್ದೇಶನ ನೀಡಿದೆ. ಇನ್ನೂ ಹಲವರು ಈ ಚಿತ್ರಕ್ಕೆ ಪಠಾಣ್ ಎಂದು ಹೆಸರಿಡಲು ಬಿಡುವುದಿಲ್ಲ ಎಂದು ಪ್ರತಿಭಟಿಸುತ್ತಿದ್ದಾರೆ. ಬೇಷರಂ ರಂಗ್ ಕೂಡ ಹಿಂದೂ ಭಾವನೆಗಳಿಗೆ ಧಕ್ಕೆ ಮಾಡುತ್ತಿದೆ. ಹಾಗಾಗಿ ಈ ಹಾಡನ್ನೂ ಬಿಡುವುದಿಲ್ಲ ಎಂದು ಕೆಲವರು ಹೇಳಿದ್ದಾರೆ. ಚಿತ್ರಕ್ಕೆ ಒಂದರ ಮೇಲೊಂದು ಸಂಕಟ ಎದುರಾಗುತ್ತಲೇ ಇವೆ.
Advertisement
ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ಚಿತ್ರದ ಟ್ರೈಲರ್ ರಿಲೀಸ್ ಆಗಬೇಕಿತ್ತು. ಸೆನ್ಸಾರ್ ಹಲವು ಸೂಚನೆಗಳನ್ನು ನೀಡಿದ್ದರಿಂದ ಆ ಕಾರ್ಯದಲ್ಲಿ ಚಿತ್ರತಂಡ ತೊಡಗಿದೆ. ಅಲ್ಲದೇ, ಶೀರ್ಷಿಕೆ ಸೇರಿದಂತೆ ಹಲವು ವಿಚಾರಗಳನ್ನು ಸಿನಿಮಾದಿಂದ ಕೈ ಬಿಡುವಂತೆ ನಿರಂತರ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಚಿತ್ರತಂಡಕ್ಕೆ ಬಿಡುಗಡೆಗಿಂತ ಇಂತಹ ವಿಷಯಗಳೇ ತಲೆಬಿಸಿ ಮಾಡಿವೆ.