ಉಡುಪಿ: ಜನವರಿ 22 ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ಉದ್ಘಾಟನೆ ಆಗಲಿದೆ. ಪ್ರಾಣಪ್ರತಿಷ್ಠೆ ದಿನ ಸಾರ್ವತ್ರಿಕ ರಜೆ ಘೋಷಣೆ ಮಾಡುವಂತೆ ಸಿಎಂ ಸಿದ್ದರಾಮಯ್ಯಗೆ (Siddaramaiah) ಪತ್ರ ಬರೆದು ಮನವಿ ಮಾಡಿದ್ದೇನೆ ಎಂದು ಶಾಸಕ ಯಶ್ ಪಾಲ್ ಸುವರ್ಣ (Yashpal Suvarna) ಹೇಳಿದ್ದಾರೆ.
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಹಲವಾರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಅವಕಾಶವಾಗುತ್ತದೆ. ಯುವಜನತೆಗೆ ರಾಮಜನ್ಮಭೂಮಿ ಹೋರಾಟ ಇತಿಹಾಸ ತಿಳಿಯಬೇಕಾಗಿದೆ. ಪೂಜೆ, ಭಜನಾ ಕಾರ್ಯಕ್ರಮದಲ್ಲಿ ಯುವ ಜನತೆ ಭಾಗಿಯಾಗಬೇಕು. ಮುಖ್ಯಮಂತ್ರಿ ಆಗಿ ಅವರಿಗೆ ಮನವಿ ಮಾಡಿದ್ದೇವೆ. ರಜೆ ಕೊಡ್ತಾರೋ ಬಿಡ್ತಾರೋ ಅವರಿಗೆ ಬಿಟ್ಟಿದ್ದು ಎಂದರು. ಇದನ್ನೂ ಓದಿ: Ayodhya Ram Mandir – ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಪ್ರತಿಮೆ ಆಯ್ಕೆ?
Advertisement
Advertisement
ಭಾರತ ಹಿಂದೂ ರಾಷ್ಟ್ರ, ರಾಜ್ಯದಲ್ಲಿ ಆರೂವರೆ ಕೋಟಿ ಹಿಂದೂಗಳಿದ್ದಾರೆ. ರಾಜ್ಯದ ಜನರ ಭಾವನೆಯ ಜೊತೆ ಚೆಲ್ಲಾಟ ಆಡಬಾರದು. ಮನವಿಯನ್ನು ಒಪ್ಪಿಕೊಂಡು ರಜೆ ಸಾರಿದರೆ ಉತ್ತಮ. ಇಲ್ಲದಿದ್ದರೆ ಸ್ಥಳೀಯವಾಗಿ ರಜೆಯ ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ. ಸಿದ್ದರಾಮಯ್ಯನವರಿಗೆ ಯಾವುದು ಸರಿ ಯಾವುದು ತಪ್ಪು ಎಂದು ಗೊತ್ತಿದೆ. ಸಿದ್ದರಾಮಯ್ಯ ನಿವೃತ್ತಿ ಅಂಚಿನಲ್ಲಿದ್ದಾರೆ. ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ತಿಳಿಸಿದರು.
Advertisement
ಸಮಸ್ತ ಹಿಂದೂಗಳ ಶ್ರದ್ಧಾ ಕೇಂದ್ರವಾಗಿ 500 ವರ್ಷಗಳ ಕನಸು ನನಸಾಗುವ ಸಮಸ್ತ ಭಾರತೀಯರ ಪಾಲಿಗೆ ಅತ್ಯಂತ ಪವಿತ್ರ ದಿನವಾಗಿ ಅಯೋಧ್ಯೆ ಶ್ರೀ ರಾಮ ಮಂದಿರದ ಲೋಕಾರ್ಪಣೆಯ ಭಾವನಾತ್ಮಕ ಐತಿಹಾಸಿಕ ಕ್ಷಣವನ್ನು ಮನೆ ಮನಗಳಲ್ಲಿ ಆಚರಿಸಲು ಜನವರಿ 22 ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡುವಂತೆ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ರವರಿಗೆ ನಾಡಿನ… pic.twitter.com/5q5QsBVn3N
— Yashpal Anand Suvarna (@YashpalBJP) January 1, 2024
ಸಿದ್ದರಾಮಯ್ಯನವರ ಕುಟುಂಬ ಹೆಂಡತಿ, ಮಕ್ಕಳು ಧಾರ್ಮಿಕ ಕಾರ್ಯಕ್ರಮದಲ್ಲಿ ಉಡುಪಿ ಕೃಷ್ಣಮಠ-ಮಂದಿರಗಳಿಗೆ ಹೋಗುತ್ತಾರೆ. ಸಿದ್ದರಾಮಯ್ಯ ಅಲ್ಪಸಂಖ್ಯಾತರ ಓಲೈಕೆಗಾಗಿ ಹೀಗೆ ವರ್ತಿಸುತ್ತಿದ್ದಾರೆ. ರಾಮಮಂದಿರ ನಿರ್ಮಾಣ ಆಗುತ್ತಿರುವುದು ಸಿದ್ದರಾಮಯ್ಯ ಅವರ ಮನಸ್ಸಿನಲ್ಲಿ ಬಹಳ ಖುಷಿ ಇದೆ. ಜನವರಿ 4 ಭೇಟಿಯಾಗಿ ಶಿಕ್ಷಣ ಸಚಿವರು ಸಿಎಂ ಇಬ್ಬರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.