ಬೆಂಗಳೂರು: 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಬಸವೇಶ್ವರರ (Basavanna) ವಿಷಯವನ್ನು ಪರಿಷ್ಕರಣೆ ಮಾಡುವಂತೆ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಮಹಾಂತಲಿಂಗ ಶಿವಾಚಾರ್ಯ ಶ್ರೀಗಳು ಪತ್ರ ಬರೆದಿದ್ದಾರೆ.
ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯಿಂದ ಅಸಮಾಧಾನ ವ್ಯಕ್ತಪಡಿಸಿದ್ದು, 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಬಸವೇಶ್ವರರ ವಿಷಯವನ್ನು ಪರಿಷ್ಕರಣೆ ಕುರಿತು ಪತ್ರ ಬರೆಯಲಾಗಿದೆ. ವೀರಶೈವ ಧರ್ಮದ ಗುರುಪರಂಪರೆಯ ಪಂಚಪೀಠಗಳ ಶಾಖಾಮಠಗಳ ಮಠಾಧೀಶರು ಸದಸ್ಯರಾಗಿದ್ದಾರೆ. ಈ ಎಲ್ಲಾ ಮಠಾಧೀಶರ ಒಮ್ಮತದ ಅಭಿಪ್ರಾಯವನ್ನು ಈ ಪತ್ರದಲ್ಲಿ ತಮ್ಮ ಗಮನಕ್ಕೆ ತರುತ್ತಿದ್ದೇವೆ ಎಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಸಿಎಂ, ಡಿಸಿಎಂ ಕುರ್ಚಿ ಕಿತ್ತಾಟ ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ: ಬೊಮ್ಮಾಯಿ
Advertisement
Advertisement
ಪತ್ರದಲ್ಲೇನಿದೆ?
ಈ ವರ್ಷ 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಬಸವಣ್ಣನವರ ಪರಿಚಯವನ್ನು ಪರಿಷ್ಕರಿಸಲಾಗಿದೆ. 2016ರಿಂದ ಈಗ ಮೂರನೇ ಬಾರಿ ಪರಿಷ್ಕರಿಸಿರುವುದು ಕಂಡು ಬಂದಿದೆ. ಈ ಪರಿಷ್ಕರಣೆಯಲ್ಲಿ ವಿದ್ಯಾರ್ಥಿಗಳಿಗೆ ಅನೇಕ ತಪ್ಪು ಮಾಹಿತಿಗಳನ್ನು ನೀಡಿರುವುದು ಗಮನಕ್ಕೆ ಬಂದಿದೆ. ವೀರಶೈವ ಪದ ಕೈ ಬಿಡಲಾಗಿದೆ ಇದು ಸರಿಯಲ್ಲ ಎಂದು ವಚನದ ಮೂಲಕ ವಿವರಣೆ ನೀಡಲಾಗಿದೆ. ಬಸವಣ್ಣ ಅರಿವನ್ನೇ ಗುರುವಾಗಿಸಿಕೊಂಡಿದ್ದರು ಎಂದು ಪರಿಷ್ಕರಣೆ ಮಾಡಲಾದ ಪಠ್ಯಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ತಪ್ಪುಗಳನ್ನು ಸರಿಪಡಿಸುವಂತೆ ಸಿಎಂಗೆ ಶ್ರೀಗಳು ಪತ್ರ ಬರೆದಿದ್ದಾರೆ.
Advertisement
ಈ ವರ್ಷ ಪರಿಷ್ಕೃತಗೊಂಡಿರುವ ಪುಸ್ತಕದಲ್ಲಿ ‘ವೀರಶೈವ’ ಪದವನ್ನು ತೆಗೆದು ಹಾಕಲಾಗಿದೆ. ಪರಿಷ್ಕರಣೆ ಸರಿಯಲ್ಲ ಯಾಕೆಂದರೆ 30 ಕ್ಕೂ ಹೆಚ್ಚು ಶಿವಶರಣರು 142 ವಚನಗಳಲ್ಲಿ 221 ವೀರಶೈವ ಎಂದು ಬಳಸಿದ್ದಾರೆ. ಕೇವಲ 8 ಜನ ಶಿವಶರಣರು ತಮ್ಮ 10 ವಚನಗಳಲ್ಲಿ ಕೇವಲ 12 ಕಡೆ ಮಾತ್ರ ‘ಲಿಂಗಾಯತ’ ಪದವನ್ನು ಬಳಸಿದ್ದಾರೆ. ಆದರೆ ಬಸವಣ್ಣನವರು ತಮ್ಮ ಒಂದು ವಚನದಲ್ಲಿಯೂ ‘ಲಿಂಗಾಯತ’ ಪದ ಬಳಸಿರುವುದಿಲ್ಲ. ಆದರೆ ಬಸವಣ್ಣನವರೇ ಅನೇಕ ಬಾರಿ ತಮ್ಮ ವಚನಗಳಲ್ಲಿ ‘ವೀರಶೈವ’ ಪದ ಬಳಸಿರುವುದಲ್ಲದೇ ತಮ್ಮದೊಂದು ವಚನದಲ್ಲಿ ತಾವು ನಿಜವೀರಶೈವ’ (ವಚನ ಸಂಖ್ಯೆ 1092) ಎಂದು ಹೇಳಿಕೊಂಡಿದ್ದಾರೆ. ವಾಸ್ತವ ಹೀಗಿರುವಾಗ 2016ರ ಪಠ್ಯಪುಸ್ತಕದಲ್ಲಿ ಮತ್ತು 2022ರ ಪಠ್ಯಪುಸ್ತದಲ್ಲಿರುವ ‘ವೀರಶೈವ’ ಪದವನ್ನು ತಗೆದು ಹಾಕಿರುವುದು ಸರಿಯಾದ ಕ್ರಮವಲ್ಲ. ಇತಿಹಾಸವನ್ನು ತಿರುಚಿದಂತಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ಮಾಡುವ ಅನ್ಯಾಯ ಮತ್ತು ಕಾನೂನು ಬಾಹಿರ ಕಾರ್ಯವಾಗಿದೆ. ಇದನ್ನೂ ಓದಿ: ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ – ಸಚಿವ ಜಮೀರ್
Advertisement
ಈ ವರ್ಷ ಪರಿಷ್ಕೃತಗೊಂಡಿರುವ ಪುಸ್ತಕದಲ್ಲಿ ಬಸವಣ್ಣನವರು ‘ಅರಿವನ್ನೇ ಗುರು’ವಾಗಿಸಿಕೊಂಡಿದ್ದರು. ಬಸವಣ್ಣನವರು ಇಷ್ಟಲಿಂಗದ ವಿನೂತನ ಪರಿಕಲ್ಪನೆಯನ್ನು ಜಾರಿಗೆ ತಂದರು ಎಂದು ಪ್ರಕಟಿಸಿದ್ದಾರೆ. ಇದು ಸಂಪೂರ್ಣ ತಪ್ಪು ಮಾಹಿತಿಯಾಗಿದೆ. ಬಸವಣ್ಣನವರು ತಮ್ಮ ವಚನಗಳಲ್ಲಿ ಪ್ರತಿಯೊಬ್ಬರ ಅಂತರಂಗದಲ್ಲಿರುವ ಪರಮಾತ್ಮನ ಅರಿವೇ ಗುರುವಾಗಬೇಕು. ಅರಿವು ಪ್ರತಿಯೊಬ್ಬರ ಬದುಕಿಗೆ ನಿತ್ಯ ದಾರಿದೀಪವಾಗಬೇಕೆಂದು ಪ್ರತಿಪಾಸಿದ್ದಾರೆಯೇ ಹೊರತು, ತಮಗೆ ಗುರುವಿಲ್ಲ ತಮಗೆ ತಮ್ಮ ಅರಿವೇ ಗುರು ಎಂದು ಎಲ್ಲಿಯೂ ಯಾವ ಸಂದರ್ಭದಲ್ಲಿಯೂ ಹೇಳಿಲ್ಲ. ಅವರು ಅವರಲ್ಲಿರುವ ಗುರುವಿನ ಬಗೆಗಿನ ಗೌರವವನ್ನು ತಮ್ಮ ಅನೇಕ ವಚನಗಳಲ್ಲಿ ನಿರೂಪಿಸಿದ್ದಾರೆ. ತಾವು ಗುರುವಿನಿಂದ ಇಷ್ಟಲಿಂಗವನ್ನು ಪಡೆದಿದ್ದೇನೆ ಎಂದು ಅನೇಕ ವಚನಗಳಲ್ಲಿ ಅವರೇ ಹೇಳಿಕೊಂಡಿದ್ದಾರೆ. ಇದಕ್ಕೆ ಅನೇಕ ವಚನಗಳ ಉದಾಹರಣೆಗಳಿವೆ. ಅವುಗಳಲ್ಲಿ ಗುರುವಿನ ಮತ್ತು ಗುರುಗಳಿಂದ ಇಷ್ಟಲಿಂಗ ಪಡೆದ ಉಲ್ಲೇಖಗಳಿವೆ. ಆದ್ದರಿಂದ ಬಸವಣ್ಣನವರಿಗಿಂತ ಮೊದಲೇ ಇಷ್ಟಲಿಂಗ ಪೂಜೆಯಿತ್ತು ಎನ್ನುವುದಕ್ಕೆ ಆಧಾರಗಳಿವೆ. ಆದ್ದರಿಂದ ಪಠ್ಯಪುಸ್ತಕ ಪರಿಷ್ಕರಣ ಸಮಿತಿಗೆ ನಿರ್ದೇಶನ ನೀಡಬೇಕು. ಇತಿಹಾಸಕ್ಕೆ ಹಾಗೂ ನಡೆದು ಬಂದ ಪರಂಪರೆಗೆ ಧಕ್ಕೆಯಾಗುವ ವಿಚಾರಗಳನ್ನು ವಿದ್ಯಾರ್ಥಿಗಳ ತಲೆಗೆ ತುಂಬಬಾರದು ಎಂದು ನಿರ್ದೇಶನ ನೀಡಬೇಕು. ಒಂದು ವೇಳೆ 9ನೇ ತರಗತಿಯ ಪಠ್ಯದಲ್ಲಿ ಆದ ದೋಷಗಳನ್ನು ಸರಿಪಡಿಸದಿದ್ದರೆ ನಾವು ಕಾನೂನು ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.