Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಈದ್ ಉಲ್ ಫಿತರ್ ಅನ್ನು ಬಸವ ಜಯಂತಿಯಂತೆ ಆಚರಿಸಿದ್ದರೆ ಮತ್ತಷ್ಟು ಹೃದಯ ಸ್ಪರ್ಶಿಯಾಗುತ್ತಿತ್ತು: ಸಿಎಂಗೆ ಸಾಹಿತಿಗಳು, ಚಿಂತಕರಿಂದ ಪತ್ರ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಈದ್ ಉಲ್ ಫಿತರ್ ಅನ್ನು ಬಸವ ಜಯಂತಿಯಂತೆ ಆಚರಿಸಿದ್ದರೆ ಮತ್ತಷ್ಟು ಹೃದಯ ಸ್ಪರ್ಶಿಯಾಗುತ್ತಿತ್ತು: ಸಿಎಂಗೆ ಸಾಹಿತಿಗಳು, ಚಿಂತಕರಿಂದ ಪತ್ರ

Bengaluru City

ಈದ್ ಉಲ್ ಫಿತರ್ ಅನ್ನು ಬಸವ ಜಯಂತಿಯಂತೆ ಆಚರಿಸಿದ್ದರೆ ಮತ್ತಷ್ಟು ಹೃದಯ ಸ್ಪರ್ಶಿಯಾಗುತ್ತಿತ್ತು: ಸಿಎಂಗೆ ಸಾಹಿತಿಗಳು, ಚಿಂತಕರಿಂದ ಪತ್ರ

Public TV
Last updated: June 24, 2022 1:19 pm
Public TV
Share
8 Min Read
letter to cm by thinkers and litterates
SHARE

ಬೆಂಗಳೂರು: ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಬಂದಿದೆ. ಸಾರ್ವಜನಿಕ ಶಾಂತಿಯ ತೋಟವನ್ನು ಮರುಸ್ಥಾಪನೆ ಮಾಡಬೇಕಿದೆ ಎಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಸಾಹಿತಿಗಳು, ಚಿಂತಕರು ಸಿನಿ ಕ್ಷೇತ್ರದವರು ಹಾಗೂ ಎಡಪಂಥೀಯರು ಪತ್ರ ಬರೆದಿದ್ದಾರೆ.

ಸಾಹಿತಿ ವೈದೇಹಿ, ಚಲನ ಚಿತ್ರ ನಿರ್ದೇಶಕ ಬಿ.ಸುರೇಶ್, ಗಿರೀಶ್ ಕಾಸರವಳ್ಳಿ, ಗಾಯಕಿ ಎಂಡಿ ಪಲ್ಲವಿ, ವಸುಂಧರ ಭೂಪತಿ, ನಾಗೇಶ್ ಹೆಗ್ಡೆ ಸೇರಿದಂತೆ ವಿವಿಧ ಕ್ಷೇತ್ರಗಳ 75 ಮಂದಿ ಪತ್ರ ಬರೆದಿದ್ದಾರೆ.

BASAVARJ BOMMAI

ಪತ್ರದಲ್ಲೇನಿದೆ?
ಕರ್ನಾಟಕದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಬಗ್ಗೆ ಕಾಳಜಿ ಹಾಗೂ ನಾಡನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ ತುರ್ತಾಗಿ ಮರುಸ್ಥಾಪಿಸುವುದರ ವಿಷಯದ ಬಗ್ಗೆ ಬರೆಯಲಾಗಿದೆ.

ಕಳೆದ ಒಂದು ತಿಂಗಳಿಂದ ತಮ್ಮನ್ನು ಭೇಟಿ ಮಾಡಿ ಈ ಕೆಳಕಂಡ ಪತ್ರವನ್ನು ಸಲ್ಲಿಸಲು ತಮ್ಮ ಕಚೇರಿಯ ಮೂಲಕ ಪ್ರಯತ್ನಿಸಿದ್ದೇವೆ. ನಮ್ಮ ಪ್ರಯತ್ನಗಳು ವಿಫಲವಾಗಿರುವುದರಿಂದ, ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಕೂಡಿರುವ ಈ ಪತ್ರವನ್ನು ಬಹಿರಂಗ ಪತ್ರವನ್ನಾಗಿ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ. ನಮ್ಮ ಕಾಳಜಿಯನ್ನೂ ಸಲಹೆಗಳನ್ನೂ ತಮ್ಮ ಗಮನಕ್ಕೆ ತರುವುದು ನಾಗರಿಕರಾಗಿ ನಮ್ಮ ಕರ್ತವ್ಯವೆಂದು ಭಾವಿಸಿದ್ದೇವೆ. ತಾವು ಹಾಗೂ ತಮ್ಮ ಸರ್ಕಾರವು ಈ ಪತ್ರವನ್ನು ಗಂಭೀರವಾಗಿ ಪರಿಗಣಿಸುವಿರೆಂದು ನಂಬಿದ್ದೇವೆ.

ನಾವು ಕರ್ನಾಟಕದಲ್ಲಿ ನೆಲೆಸಿರುವ ವಿವಿಧ ಕ್ಷೇತ್ರ ಮತ್ತು ವೃತ್ತಿಗಳಿಗೆ ಸೇರಿದ ಸಾರ್ವಜನಿಕ ಕಳಕಳಿಯುಳ್ಳ ನಾಗರಿಕರಾಗಿದ್ದೇವೆ. ಶಾಂತಿ, ಸಹಬಾಳ್ವೆ, ವೈವಿದ್ಯತೆ, ಬಹುತ್ವಕ್ಕೆ ಹೆಸರಾಗಿದ್ದ ಈ ನಾಡಿನಲ್ಲಿ ಇವುಗಳನ್ನೆಲ್ಲ ನಾಶಗೊಳಿಸುವಂತಹ ಇತ್ತೀಚಿನ ಬೆಳವಣಿಗೆಗಳನ್ನು ನೋಡಿ ಲಕ್ಷಾಂತರ ನಾಗರಿಕರಂತೆ ನಾವೂ ಸಹ ತೀವ್ರವಾಗಿ ವ್ಯಾಕುಲಗೊಂಡಿದ್ದೇವೆ. ಇಂತಹ ತಪ್ಪು ನಡೆಗಳನ್ನು ಸರಿಪಡಿಸಲು ಈಗಲೂ ಅವಕಾಶವಿದ್ದು ಅದಕ್ಕೆ ಅಗತ್ಯವಾದ ಸಲಹೆಗಳನ್ನು ಸರ್ಕಾರಕ್ಕೆ ನೀಡುವುದು ನಾಗರಿಕರಾದ ನಮ್ಮ ಕರ್ತವ್ಯವೆಂದು ಭಾವಿಸಿ ಈ ಪತ್ರವನ್ನು ತಮಗೆ ಸಲ್ಲಿಸುತ್ತಿದ್ದೇವೆ. ಇದನ್ನೂ ಓದಿ: ಗಡಿಯಲ್ಲಿರುವಾಗಲೇ ಸೈನಿಕನಾದವನು ಚಿಂತೆಗೆ ಬೀಳಬೇಕು- ಅಗ್ನಿಪಥ್ ವಿರುದ್ಧ ನಲಪಾಡ್ ಕಿಡಿ

vaidehi

ಕೋಮು ಸೌಹಾರ್ದತೆಯ ವಿಷಯದಲ್ಲಿ ನಮ್ಮ ರಾಜ್ಯಕ್ಕೆ ಭವ್ಯ ಪರಂಪರೆಯಿದೆ. 1956 ರಲ್ಲಿ ಕರ್ನಾಟಕ ಏಕೀಕರಣವಾಯಿತು. ಆದರೆ ಕರ್ನಾಟಕದ ಮತೀಯ ಸೌಹಾರ್ದತೆಯ ಇತಿಹಾಸ ಇದಕ್ಕಿಂತಲೂ ಹಳೆಯದು. ಹನ್ನೆರಡನೆಯ ಶತಮಾನದಲ್ಲಿಯೇ ಕವಿ-ದಾರ್ಶನಿಕ ಬಸವಣ್ಣನವರ ಪ್ರಯತ್ನಗಳಿಂದಾಗಿ ಸಾಮಾಜಿಕ ಹಾಗೂ ಧಾರ್ಮಿಕ ಸುಧಾರಣೆಯಲ್ಲಿ ನಮ್ಮ ಕನ್ನಡ ನಾಡು ಸೌಹಾರ್ದತೆಯ ಇತಿಹಾಸವನ್ನೇ ನಿರ್ಮಿಸಿದೆ. ಸಮ್ಮಿಶ್ರ ಸಂಪ್ರದಾಯಗಳಿಗೆ, ಹಿಂದು ಮುಸ್ಲಿಮರನ್ನು ಒಳಗೊಂಡಂತೆ ಜನಸಮುದಾಯಗಳ ನಡುವೆ ಶಾಂತಿಯುತ ಸಹಬಾಳ್ವೆಗೆ ನಮ್ಮ ನಾಡಿನ ಇತಿಹಾಸ ಸಾಕ್ಷಿಯಾಗಿದೆ. ಈ ಭವ್ಯ ಪರಂಪರೆಯ ಹಿನ್ನೆಲೆಯಲ್ಲೇ ನಮ್ಮ ರಾಷ್ಟ್ರಕವಿ ಕುವೆಂಪುರವರು 100 ವರ್ಷಗಳಷ್ಟು ಹಿಂದೆಯೇ ಈ ನಾಡನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಬಣ್ಣಿಸಿದ್ದಾರೆ.

ಕರ್ನಾಟಕದ ಈ ಮುಕ್ತ ಮನಸ್ಸಿನ ಹಲನಡಾವಳಿಯ, ಸಂಸ್ಕೃತಿಯೇ ಈ ಕಾಲಘಟ್ಟದಲ್ಲಿ ಸೃಜನಶೀಲ ಮತ್ತು ಹೊಸತನ್ನರಸುವ ವ್ಯಕ್ತಿಗಳನ್ನು ರಾಷ್ಟ್ರದ ಎಲ್ಲೆಡೆಯಿಂದ ಸೂಜಿಗಲ್ಲಿನಂತೆ ಆಕರ್ಷಿಸಿದೆ. ಭಾರತದ ವಿವಿಧ ಪ್ರಾಂತ್ಯಗಳಿಗೆ ಸೇರಿದ ವಿಭಿನ್ನ ಜನಸಮುದಾಯಗಳ ಜನರು ಕರ್ನಾಟಕಕ್ಕೆ ಅಪಾರ ಸಂಖ್ಯೆಯಲ್ಲಿ ವಲಸೆ ಬಂದು ಇಲ್ಲಿ ನೆಲೆಸಿ ನಮ್ಮ ರಾಜ್ಯದ ಸಮೃದ್ಧ ವೈವಿಧ್ಯಮಯ ಸಂಸ್ಕೃತಿಯನ್ನು ಮೆಚ್ಚಿ ತಮ್ಮ ಬದುಕಿನಲ್ಲೂ ಅವುಗಳನ್ನು ಅಳವಡಿಸಿಕೊಂಡಿದ್ದಾರೆ. ತನ್ಮೂಲಕ ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆರೋಗ್ಯ ರಕ್ಷಣೆ, ಉದ್ಯಮಶೀಲತೆ, ಸಾಹಿತ್ಯ, ಕಲೆ, ಸಾಮಾಜಿಕ, ಸಾಂಸ್ಕೃತಿಕ ಮತ್ತಿತರ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಚೈತನ್ಯಶೀಲ ರಾಜ್ಯವಾಗಿ ರೂಪಿಸಿದ್ದಾರೆ.

ಇಂತಹ ಉಜ್ವಲ ಹಿನ್ನೆಲೆಯ ನಾಡಿನಲ್ಲಿ ಇತ್ತೀಚೆಗೆ ಮುಸ್ಲಿಂ, ಕ್ರೈಸ್ತ ಮತ್ತು ದಲಿತ ಸಮುದಾಯಗಳ ಮೇಲೆ ನಾನಾ ರೀತಿಯಲ್ಲಿ ಹಲ್ಲೆಗಳು ನಡೆಯುತ್ತಿವೆ. ಸರ್ವರನ್ನೂ ಒಳಗೊಳ್ಳುವ, ಒಪ್ಪಿ ಅಪ್ಪಿಕೊಳ್ಳುವ ಗುಣಲಕ್ಷಣದ ಕರ್ನಾಟಕ ರಾಜ್ಯದ ಬಗ್ಗೆ ಹೆಮ್ಮೆ, ಅಭಿಮಾನ ಹೊಂದಿರುವ ಜನರಲ್ಲಿ ಈ ಘಟನೆಗಳು ಆಘಾತ ಮೂಡಿಸಿವೆ. ಸಂಕುಚಿತ ಮತೀಯವಾದಿಗಳು ಹಾಗೂ ದ್ವೇಷಪೂರಿತ ಕೆಲ ವ್ಯಕ್ತಿಗಳು ಮತ್ತು ಗುಂಪುಗಳು ಧರ್ಮ ಮತ್ತು ಜಾತಿಯ ಆಧಾರದಲ್ಲಿ ಅಲ್ಪಸಂಖ್ಯಾತರನ್ನು ಪ್ರತ್ಯೇಕಿಸಿ ದೂರವಿಡುವ ಹಾಗೂ ಅವರನ್ನು ದಮನಗೊಳಿಸುವ ಕೃತ್ಯಗಳಲ್ಲಿ ತೊಡಗಿರುವುದು ಆತಂಕದ ವಿಷಯವಾಗಿದೆ.

nagesh hegde

ಭಾರತ ಸಂವಿಧಾನದ ಮೌಲ್ಯ ಮತ್ತು ಆಶಯಗಳನ್ನು ಅಕ್ಷರಶಃ ಎತ್ತಿ ಹಿಡಿಯುತ್ತೇವೆಂದು ಪ್ರಮಾಣವಚನ ಸ್ವೀಕರಿಸಿರುವ ಚುನಾಯಿತ ಪ್ರತಿನಿಧಿಗಳನ್ನು ಒಳಗೊಂಡಂತೆ ಜವಾಬ್ದಾರಿ ಹುದ್ದೆಗಳಲ್ಲಿರುವ ಹಲವರು ಈ ವಚನವನ್ನು ಬಹಿರಂಗವಾಗಿ ಉಲ್ಲಂಘಿಸಿ ಅಲ್ಪಸಂಖ್ಯಾತ ಸಮುದಾಯದವರನ್ನು ಭೀತರನ್ನಾಗಿಸುವುದು ಇದಕ್ಕಿಂತಲೂ ಕಳವಳದ ಹಾಗೂ ಹತಾಶೆಯ ಸಂಗತಿಯಾಗಿದೆ. ಇದಲ್ಲದೆ ಅಲ್ಪಸಂಖ್ಯಾತ ಸಮುದಾಯಗಳ ಮೇಲಿನ ಈ ಕೇರುಕೃತ್ಯಗಳನ್ನು ಸಮರ್ಥಿಸಿಕೊಳ್ಳುತ್ತಾ ಹಿಂಸೆ ದುರಾಕ್ರಮಣ ಕೃತ್ಯಗಳಿಗೆ ಉತ್ತೇಜನ ನೀಡುತ್ತಿರುವುದಂತೂ ಇನ್ನೂ ನೋವಿನ ಸಂಗತಿಯಾಗಿದೆ. ಇನ್ನೂ ಮುಂದುವರಿದು ಈ ಸಮುದಾಯಗಳ ಮೇಲೆ ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರ ಹಾಕಿ ಅವರನ್ನು ದ್ವಿತೀಯ ದರ್ಜೆ ನಾಗರಿಕರಂತೆ ಪರಿಗಣಿಸಿ ಅವರ ಸಾಂವಿಧಾನಿಕ ಹಕ್ಕುಗಳನ್ನು ಅನುಭವಿಸದಂತೆ ಹತ್ತಿಕ್ಕುತ್ತಿರುವುದು ಹೀನಾಯ ಕೃತ್ಯವಾಗಿದೆ.

ಈ ಹಿನ್ನೆಲೆಯಲ್ಲಿ, ಭಾರತದ ಸಂವಿಧಾನದ ಅನುಚ್ಚೇದ 51A(e) ಯಲ್ಲಿ ‘ಭಾರತದ ಎಲ್ಲ ಜನರ ನಡುವೆ ಧಾರ್ಮಿಕ, ಭಾಷೆ, ಪ್ರಾದೇಶಿಕ ಹಾಗೂ ವರ್ಗಿಯ ವೈವಿಧ್ಯತೆಗಳನ್ನು ಮೀರಿ ಪರಸ್ಪರ ಸೌಹಾರ್ದತೆ ಮತ್ತು ಬಂಧುತ್ವವನ್ನು ಉತ್ತೇಜಿಸುವುದು’ ಪ್ರತಿಯೊಬ್ಬ ನಾಗರಿಕರ ಮೂಲಭೂತ ಕರ್ತವ್ಯ ಎಂದು ಹೇಳಿವೆ. ಅನುಚ್ಛೇದ 5A(1)ವು ‘ಸಮ್ಮಿಶ್ರ ಸಂಸ್ಕೃತಿಯನ್ನೊಳಗೊಂಡ ದೇಶದ ಭವ್ಯ ಪರಂಪರೆಗೆ ಪ್ರಾಮುಖ್ಯತೆ ನೀಡಿ ಅದನ್ನು ಉಳಿಸಬೇಕು’ ಎಂದು ಪ್ರತಿಯೊಬ್ಬ ನಾಗರಿಕರನ್ನು ಒತ್ತಾಯಿಸುತ್ತದೆ. ಆದರೆ ನಮ್ಮ ಚುನಾಯಿತ ಜನಪ್ರತಿನಿಧಿಗಳು ಇದನ್ನು ಮರೆತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ರಾಜ್ಯವು ಅಭಿವೃದ್ಧಿ ಹೊಂದಿ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಅಂದರೆ ‘ಎಲ್ಲರ ಜೊತೆ, ಎಲ್ಲರ ವಿಶ್ವಾನದೊಂದಿಗೆ, ಎಲ್ಲರ ಅಭಿವೃದ್ಧಿ’ಯನ್ನು ಸಾಧಿಸಬೇಕಾದರೆ ಶಾಂತಿ, ಸೌಹಾರ್ದತೆ ಮತ್ತು ನ್ಯಾಯದಾನಗಳು ಅತ್ಯಗತ್ಯ ಮೂಲ ಅಂಶಗಳಾಗಿವೆ. ಸರ್ವ ಜನರ ಸುಸ್ಥಿರ ಮತ್ತು ಉತ್ತಮ ಭವಿಷ್ಯದ ನೀಲ ನಕ್ಷೆಯೆಂಬಂತಿರುವ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ 16 ನೆಯ ಅಂಶವೂ ಸಹ ಇದನ್ನೇ ಹೇಳುತ್ತದೆ. ಏನೆಂದರೆ, ‘ಜಾಗತಿಕ ಸುಸ್ಥಿರ ಅಭಿವೃದ್ಧಿಯ ಯಾವುದೇ ಉದ್ದೇಶವನ್ನು ಈಡೇರಿಸುವಲ್ಲಿ ಮೊದಲ ಹೆಜ್ಜೆಯೆಂದರೆ, ಸಾಂಸ್ಥಿಕ ನಿರ್ಬಂಧಗಳ ಹೇರಿಕೆಯಿಂದ ನ್ಯಾಯವಂಚಿತರಾಗಿ ಅಥವಾ ನೇರ ದಂಗೆ ಹಿಂಸೆಗಳಿಂದಾಗಿ ತಮ್ಮ ಮೂಲಭೂತ ಸ್ವಾತಂತ್ರ‍್ಯಕ್ಕೆ ಅಪಾಯವನ್ನು ಎದುರಿಸುತ್ತಿರುವ ವ್ಯಕ್ತಿಗಳ ಜೀವ ರಕ್ಷಣೆ ಹಾಗೂ ಮಾನವ ಹಕ್ಕುಗಳನ್ನು ಸಂರಕ್ಷಿಸುವುದಾಗಿದೆ’.

md pallavi

ಇತ್ತೀಚಿಗೆ ಕೆಲವು ವಿಭಜಕ ಕೃತ್ಯಗಳಿಂದ ನಿರ್ದಿಷ್ಟ ಸಮುದಾಯಗಳನ್ನು ಅನ್ಯಗೊಳಿಸಿ ಆ ಜನರನ್ನು ಮೂಲಭೂತ ಹಕ್ಕುಗಳಿಂದ ವಂಚಿತರನ್ನಾಗಿಸುವ ಪ್ರವೃತ್ತಿ ಕಂಡು ಬರುತ್ತಿದೆ. ಇದು ರಾಜ್ಯದ ಪ್ರಗತಿಯನ್ನು ಕುಂಠಿತಗೊಳಿಸುವುದಷ್ಟೇ ಅಲ್ಲದೆ ನಮ್ಮ ರಾಜ್ಯದ ಕೀರ್ತಿಯನ್ನು ಸಹ ಕುಂದಿಸುವ ಜೊತೆಗೆ ಹೂಡಿಕೆದಾರರು ಮತ್ತು ಹೊಸತನ್ನರಸುವ ಉದ್ಯಮಿಗಳ ನಂಬಿಕೆ ಮತ್ತು ವಿಶ್ವಾಸವನ್ನು ಹುಸಿಗೊಳಿಸುತ್ತದೆ. ನಾಗರಿಕರಲ್ಲಿ ಅಪನಂಬಿಕೆ ಮಾತು ಅಸುರಕ್ಷಿತ ಭಾವನೆ ಮೂಡಿಸಿ ಭಯದ ವಾತಾವರಣವನ್ನು ಸೃಷ್ಟಿಸುತ್ತದೆ. ಇದು ಸಮಾಜದ ಎಲ್ಲ ವರ್ಗಗಳಿಗೂ ಹಾನಿ ಉಂಟು ಮಾಡುವುದಲ್ಲದೆ ನಮ್ಮ ದೇಶದ ಸಮಗ್ರತೆಗೆ ಕೂಡ ಧಕ್ಕೆ ತರುತ್ತದೆ. ಇಂತಹ ‘ದಿಗಿಲು ಹುಟ್ಟಿಸುವ ಭಾರತ’ ಮತ್ತು ‘ಕಳಂಕಿತ ಭಾರತ’ದ ವಾತಾವರಣದಲ್ಲಿ ‘ಭಾರತದಲ್ಲಿ ತಯಾರಿಸು’ (Make in India) ಎನ್ನುವ ಘೋಷ ವಾಕ್ಯವನ್ನು ಸಾಕಾರಗೊಳಿಸುವುದು ಸಾಧ್ಯವಿಲ್ಲದ ಮಾತು.

ಇತ್ತೀಚಿಗೆ ನಡೆದ ‘ಬಸವ ಜಯಂತಿ – 2022’ ಸಂದರ್ಭದಲ್ಲಿ ಬಸವಣ್ಣನವರ ಕನಸಿನ ಸಮಾನತೆಯ ಸೌಹಾರ್ದಯುತ ಸಮಾಜವನ್ನು ಕಟ್ಟುವುದು ನಮ್ಮ ಗುರಿ ಎಂದು ಸರ್ಕಾರದ ಜಾಹಿರಾತಿನಲ್ಲಿ ಪ್ರಕಟಿಸಲಾಗಿದೆ. ಸಾಮಾಜಿಕ ಸೌಹಾರ್ದತೆ, ಬ್ರಾತೃತ್ವ, ಏಕತೆ ಮತ್ತು ಅಂತಃಕರಣಕ್ಕೆ ಬಸವಣ್ಣನವರು ಒತ್ತು ನೀಡಿದ್ದರು ಎನ್ನುವ ನಮ್ಮ ಪ್ರಧಾನ ಮಂತ್ರಿಯವರ ಮಾತುಗಳನ್ನು ಸಹ ಇದರ ಜೊತೆ ಉದ್ಧರಿಸಲಾಗಿದೆ. ಈ ಸಂದರ್ಭದಲ್ಲಿ ಸರ್ಕಾರವು ಪವಿತ್ರ ರಂಜಾನ್ ಈದ್ ಉಲ್ ಫಿತರ್ ಹಬ್ಬವನ್ನು ಬಸವ ಜಯಂತಿಯಂತೆಯೇ ಆಚರಿಸಿ ಸತತವಾಗಿ ಕೋಮು ದ್ವೇಷಿಗಳ ದಾಳಿಗೆ ತುತ್ತಾಗುತ್ತಿರುವ ಮುಸ್ಲಿಂ ನಾಗರಿಕರನ್ನು ಉದ್ದೇಶಿಸಿ ಅವರ ರಕ್ಷಣೆ ಮತ್ತು ಸುರಕ್ಷತೆ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರೆ ಅದು ಮತ್ತಷ್ಟು ಹೃದಯ ಸ್ಪರ್ಶಿಯಾಗುತ್ತಿತ್ತು.

ಶಾಂತಿ ಸೌಹಾರ್ದತೆ ಮತ್ತು ನ್ಯಾಯದಾನ ನೀಡುವ ಹೊಣೆಗಾರಿಕೆಯನ್ನು ಕರ್ನಾಟಕ ಸರ್ಕಾರವು ನಿರ್ವಹಿಸುತ್ತದೆ ಎನ್ನುವ ನಂಬಿಕೆಯಿಂದ ನಾವು ಮುಖ್ಯಮಂತ್ರಿಗಳಲ್ಲಿ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳುವ ಮೂಲಕ ಎಲ್ಲ ನಾಗರಿಕರ ಸೌಖ್ಯ ಮತ್ತು ವಿಶ್ವಾಸವನ್ನು ಪುನರ್ ಪ್ರತಿಷ್ಠಾಪಿಸಬೇಕೆಂದು ಮನವಿ ಮಾಡಿ ಕೊಳ್ಳುತ್ತೇವೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ ದ್ರೌಪದಿ ಮುರ್ಮು

girish kasaravalli

1. ರಾಜ್ಯ ಪೊಲೀಸ್ ಪಡೆಯು ತನ್ನ ಸಾಂವಿಧಾನಿಕ ಕರ್ತವ್ಯಕ್ಕೆ ಬದ್ಧವಾಗಿ ಕಾನೂನು ಪಾಲನೆಯನ್ನು ಎತ್ತಿ ಹಿಡಿದು ಸಮಾಜದ ದುರ್ಬಲ ವರ್ಗದ ನಾಗರಿಕರ ರಕ್ಷಣೆ ಮಾಡುವಂತೆ ಸೂಕ್ತ ನಿರ್ದೇಶನ ನೀಡಬೇಕು, ಮತೀಯವಾದಿ ಮತ್ತು ಜಾತಿವಾದಿ ಅಪರಾಧಗಳಿಗೆ ತುತ್ತಾಗುವ ನಾಗರಿಕರಿಗೆ ಪೂರ್ಣ ನ್ಯಾಯ ದೊರಕುವಂತೆಯೂ, ಇಂತಹ ಅಪರಾಧಗಳನ್ನು ಎಸಗುವವರ ವಿರುದ್ಧ ಸಾಕ್ಷಿದಾರರು ಧೈರ್ಯದಿಂದ ಮುಂದೆ ಬಂದು ಮುಕ್ತವಾಗಿ ತಮ್ಮ ಸಾಕ್ಷ್ಯವನ್ನು ನೀಡುವಂತೆಯೂ, ಅವರಿಗೆಲ್ಲಾ ಪೂರ್ಣ ರಕ್ಷಣೆ ಒದಗಿಸಿ ಅವರಲ್ಲಿ ವಿಶ್ವಾಸ ತುಂಬಿಸಬೇಕು.

2. ಕೋಮುವಾದಿ ಗಲಭೆಗಳಿಂದಾಗಿ ಹಿಂಸೆ, ಸಾವು ಹಾಗೂ ಬದುಕು ನಷ್ಟವಾದಾಗ, ಸ್ಥಳೀಯ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಜವಾಬ್ದಾರರಾದ ಅಧಿಕಾರಿಗಳ ವಿರುದ್ಧ, ವಿಶೇಷವಾಗಿ ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತ ಹಾಗೂ ಪೋಲಿಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.

3. ನಿರ್ದಿಷ್ಟ ಕೋಮಿನ ಜನರನ್ನು ನಿಂದಿಸಿ ಅಮಾನವೀಕರಣಗೊಳಿಸುವುದರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು. ದೈಹಿಕ ಹಿಂಸೆಗೆ ಪ್ರಚೋದನೆ ನೀಡುವಂತಹ ಪ್ರವೃತ್ತಿಗೆ ತಡೆಯೊಡ್ಡಿ ಅಲ್ಪಸಂಖ್ಯಾತರ ವಿರುದ್ಧ ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡಿ ಸಮಾಜದ ಸ್ವಾಸ್ಥ್ಯ ಹಾಳುಗೆಡುವುತ್ತಿರುವ ವ್ಯಕ್ತಿಗಳ ವಿರುದ್ಧ ಪ್ರಬಲ ಕಾನೂನು ಕ್ರಮ ಜರುಗಿಸಬೇಕು.

b suresh

4. ಸಾಮಾಜಿಕ ಜಾಲತಾಣಗಳು ಹಾಗೂ ಇನ್ನಿತರ ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಸಹ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಸುಳ್ಳು ಸುದ್ದಿಗಳು ಮತ್ತು ಗಾಳಿ ಸಮಾಚಾರಗಳನ್ನು ಹಬ್ಬಿಸುವ ಕೃತ್ಯ ನಡೆಯುತ್ತಿದೆ. ಇದರಿಂದ ಈ ಸಮುದಾಯಗಳನ್ನು ಅನ್ಯವಾಗಿಸುವ ಮತ್ತು ಅವರನ್ನು ಹಿಂಸೆಗೆ ಒಳಪಡಿಸುವ ಅಪಾಯ ಹೆಚ್ಚಾಗುತ್ತಿದೆ. ಇಂತಹ ಅಪರಾಧಗಳ ವಿರುದ್ಧ ಸರ್ಕಾರ ಬಹಿರಂಗವಾಗಿ ದನಿಯೆತ್ತಿ ಮಾತನಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.

5. ನೀತಿಯುತ ಪತ್ರಿಕೋದ್ಯಮದ ತತ್ವಬದ್ಧ ಮೌಲ್ಯಗಳನ್ನು ಉಲ್ಲಂಘಿಸಿ ಸುಳ್ಳು ಮಾಹಿತಿಯ ಸುದ್ದಿ ಬಿತ್ತರಿಸುತ್ತಾ ಸಮಾಜದಲ್ಲಿ ಅಸಹಿಷ್ಣುತೆ, ದ್ವೇಷ, ಮತ್ತು ಹಿಂಸೆಯನ್ನು ಪ್ರಚೋದಿಸುತ್ತಿರುವ ಮಾಧ್ಯಮಗಳಲ್ಲಿನ ಹಲವರಿಗೆ ಅಂತಹ ಕರ್ತವ್ಯಲೋಪಗಳನ್ನು ನಿಗ್ರಹಿಸುವಂತೆ ಒತ್ತಾಯಿಸಬೇಕು. ರಾಜ್ಯದಲ್ಲಿನ ಸೌಹಾರ್ದಯುತ ವಾತಾವರಣವನ್ನು ನಿರ್ಭೀತರಾಗಿ ಹಾಳುಗೆಡವುತ್ತಿರುವುದು ಒಪ್ಪಿತವಲ್ಲವೆಂಬುದನ್ನು ಮನದಟ್ಟು ಮಾಡಬೇಕು.

bommai 1

ಕರ್ನಾಟಕ ಸರ್ಕಾರ ಈ ಸಕ್ರಿಯ ಕ್ರಮಗಳನ್ನು ಕೈಗೊಂಡರೆ ಹಿಂಸೆಯಲ್ಲಿ ತೊಡಗಿರುವ ಹಾಗೂ ಹಿಂಸೆಗೆ ಪ್ರಚೋದನೆ ನೀಡುತ್ತಿರುವರಿಗೆ ಹಾಗೂ ನಾಗರಿಕರಲ್ಲಿ ಭಯ ಮತ್ತು ಅಭದ್ರತೆಯ ವಾತಾವರಣ ಮೂಡಿಸುತ್ತಿರುವವರಿಗೆ ಇಂತಹ ಕಾನೂನು ಬಾಹಿರ ಹಾಗೂ ಒಪ್ಪಿತವಲ್ಲದ ವರ್ತನೆಗಳನ್ನು ಹಾಗೂ ದ್ವೇಷಪೂರಿತ ಅಪರಾಧಗಳನ್ನು ಸರ್ಕಾರ ಸಹಿಸುವುದಿಲ್ಲ ಎನ್ನುವ ಸ್ಪಷ್ಟ ಸಂದೇಶ ಸಾರಿದಂತಾಗುವುದು. ರಾಜ್ಯವು ಇಂತಹ ಸಂಕ್ರಮಣ ಸ್ಥಿತಿಯಲ್ಲಿರುವಾಗ ಮತೀಯ ಸೌಹಾರ್ದತೆಯನ್ನು ಮರುಪ್ರತಿಷ್ಠಾಪಿಸುವುದು ಪ್ರಾಮುಖ್ಯವಾದ ಮತ್ತು ಅತ್ಯಂತ ತುರ್ತಿನ ಕಾರ್ಯವೆಂದು ನಾವು ಪರಿಭಾವಿಸಿದ್ದೇವೆ. ಈ ನಿಟ್ಟಿನಲ್ಲಿ ತಮ್ಮ ನೇತೃತ್ವದ ಸರ್ಕಾರವು ಮುನ್ನಡಿ ಇಡಬೇಕೆಂದು ಬಯಸುತ್ತೇವೆ. ಈ ಸಂದರ್ಭದಲ್ಲಿ ರಾಜ್ಯವು ಪ್ರಗತಿಯೆಡೆಗೆ ಸಾಗುವ ಬದಲಾಗಿ ಸರ್ಕಾರದ ನಿಷ್ಕ್ರಿಯತೆಯಿಂದಾಗಿ ತಳಮಟ್ಟಕ್ಕಿಳಿಯಿತು ಎನ್ನುವ ಅಪಖ್ಯಾತಿಗೆ ತಾವು ಒಳಗಾಗಬಾರದು ಎನ್ನುವ ಆಶಯ ನಮ್ಮದು.

ಈ ನಿಟ್ಟಿನಲ್ಲಿ ಸರ್ಕಾರದ ಪ್ರಬಲ, ಸ್ಪಷ್ಟ, ಅಧಿಕೃತ ಆದೇಶ ಕ್ರಮಗಳನ್ನು ನಾವು ನಿಮ್ಮಿಂದ ನಿರೀಕ್ಷಿಸುತ್ತಿದ್ದೇವೆ ಎಂದು ಪತ್ರದಲ್ಲಿ ಬರೆಯಲಾಗಿದೆ.

Live Tv

TAGGED:AdviceBasava JayantiBasavaraj BommailetterliteratureThinkersಚಿಂತಕರುಪತ್ರಬಸವ ಜಯಂತಿಬಸವರಾಜ ಬೊಮ್ಮಾಯಿಸಲಹೆಸಾಹಿತಿಗಳು
Share This Article
Facebook Whatsapp Whatsapp Telegram

Cinema news

Bharti Singh Haarsh Limbachiyaa
ಹಾಸ್ಯನಟಿ ಭಾರ್ತಿ ಸಿಂಗ್‌, ಹರ್ಷ್‌ ಲಿಂಬಾಚಿಯಾ ದಂಪತಿಗೆ 2ನೇ ಮಗು ಜನನ
Bollywood Cinema Latest Top Stories
Koragajja Kannada Film 1
ಕೊರಗಜ್ಜ ಚಿತ್ರಕ್ಕಿದೆ ಮೆಸ್ಸಿ ಹಾಡು ಕ್ರಿಯೇಟ್ ಮಾಡಿದ ತಂಡದ ಲಿಂಕ್
Cinema Latest TV Shows
Ranya Rao 1
ಕಾಫಿಪೋಸಾ ಆದೇಶ ಪ್ರಶ್ನಿಸಿದ್ದ ರನ್ಯಾಗೆ ಮತ್ತೆ ಶಾಕ್ – ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru City Cinema Court Districts Karnataka Latest Top Stories
Vijay Deverakonda
ವಿಜಯ್ ದೇವರಕೊಂಡ ನಟನೆಯ ಹೊಸ ಚಿತ್ರದ ಅಪ್‌ಡೇಟ್‌
Cinema Latest South cinema

You Might Also Like

JCB
Bengaluru City

ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ – 200 ಮನೆಗಳು ನೆಲಸಮ

Public TV
By Public TV
16 minutes ago
Rajya Sabha
Latest

ಸಂಸತ್ತಿನ ಮೇಲ್ಮನೆಯಲ್ಲಿ ಮಧ್ಯರಾತ್ರಿ ಜಿ ರಾಮ್‌ ಜಿ ಮಸೂದೆ ಅಂಗೀಕಾರ; ವಿಪಕ್ಷಗಳ ಸಭಾತ್ಯಾಗ

Public TV
By Public TV
27 minutes ago
Davanagere Cyber Crime
Crime

ದಾವಣಗೆರೆ | ಬಹುಕೋಟಿ ಸೈಬರ್‌ ವಂಚನೆ ಕೇಸ್‌ ಸಿಐಡಿಗೆ ಹಸ್ತಾಂತರ

Public TV
By Public TV
32 minutes ago
Assam Elephants Killed
Latest

ರಾಜಧಾನಿ ಎಕ್ಸ್‌ಪ್ರೆಸ್‌ ಡಿಕ್ಕಿ ಹೊಡೆದು 8 ಆನೆಗಳ ದಾರುಣ ಸಾವು – ಹಳಿ ತಪ್ಪಿದ ಬೋಗಿಗಳು

Public TV
By Public TV
45 minutes ago
belthangady police registered an FIR against Girish Mattannavar Mahesh Shetty Thimarodi Sameer
Dakshina Kannada

ಬುರುಡೆ ಗ್ಯಾಂಗ್‌ನಲ್ಲಿ ಬಿರುಕು – ಸಮೀರ್‌, ತಿಮರೋಡಿ, ಮಟ್ಟಣ್ಣನವರ್‌ ವಿರುದ್ಧ ಚಿನ್ನಯ್ಯ ದೂರು

Public TV
By Public TV
1 hour ago
Pralhad Joshi 1
Latest

ದ್ವೇಷ ಭಾಷಣ ಮಸೂದೆ ಜನರ ಬಾಯಿ ಮುಚ್ಚಿಸೋ ಆದೇಶ: ಪ್ರಹ್ಲಾದ್‌ ಜೋಶಿ ಕಿಡಿ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?