– ಸಿದ್ದರಾಮಯ್ಯ ನಮ್ಮನ್ನ ತೋರಿಸಿ ಸಿಎಂ ಕುರ್ಚಿ ಭದ್ರ ಮಾಡಿಕೊಳ್ತಿದ್ದಾರೆ ಎಂದ ಮಾಜಿ ಡಿಸಿಎಂ
ಮಂಡ್ಯ: ಸಚಿವ ಜಮೀರ್ ಅವರಿಗೆ ಬಿಜೆಪಿ – ಜೆಡಿಎಸ್ ಶಾಸಕರು (BJP – JDS MLAs) ಸಂಪರ್ಕದಲ್ಲಿದ್ದರೆ ಕರೆದುಕೊಂಡು ಹೋಗಲಿ ನೋಡೋಣ ಅಂತ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ (Ashwath Narayan) ಸವಾಲು ಹಾಕಿದ್ದಾರೆ.
ಬಿಜೆಪಿ-ಜೆಡಿಎಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಸಚಿವ ಜಮೀರ್ (Zameer Ahmed Khan) ಹೇಳಿಕೆಗೆ ಮಂಡ್ಯದಲ್ಲಿ ಪ್ರತಿಕ್ರಿಯಿಸಿದ ಅವರು, ಜಮೀರ್ ನಿನ್ನ ಸಂಪರ್ಕದಲ್ಲಿದ್ದರೆ ಏನ್ ಬೇಕಾದ್ರು ಮಾಡಪ್ಪ.. ನಿನಗೆ ಅಡ್ಡ ಬಂದವರು ಯಾರಪ್ಪ..? ತಾಕತ್ತಿದ್ದರೇ ಮಾಡಿ ತೋರಿಸಪ್ಪ.. ಅಂತ ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳದಿಂದ UP ರಸ್ತೆ ಸಾರಿಗೆ ಸಂಸ್ಥೆಗೆ ಬಂಫರ್ – 45 ದಿನಗಳಲ್ಲಿ ವರ್ಷದ ಆದಾಯ
Advertisement
Advertisement
ಗಾಜಿನ ಮನೆಯಲ್ಲಿದ್ದವರೆಲ್ಲ ನಮಗೆ ಸವಾಲು ಹಾಕ್ತಾರೆ. ಜಮೀರ್ ಅವರ ಸಂಪರ್ಕದಲ್ಲಿ ಬಿಜೆಪಿ-ಜೆಡಿಎಸ್ ಶಾಸಕರು ಇದ್ದರೆ ಅದೇನು ಮಾಡ್ತಾರೋ ಮಾಡಿ ತೋರಿಸಲಿ ಎಂದಿದ್ದಾರೆ. ಇದನ್ನೂ ಓದಿ: ಪ್ರಪಂಚದಾದ್ಯಂತ ಜನ ಭಾರತಕ್ಕೆ ಬರಲು ಇಚ್ಛಿಸುತ್ತಾರೆ, ತಿಳಿದುಕೊಳ್ಳಲು ಬಯಸುತ್ತಾರೆ – ಮೋದಿ
Advertisement
ನಾವು ಸರ್ಕಾರ ಮಾಡ್ತೀವಿ ಅಂತ ಎಲ್ಲೂ ಹೇಳಿಲ್ಲ. 65 ಜನ ಇದ್ದವರು ಸರ್ಕಾರ ಮಾಡಲು ಆಗುತ್ತಾ? ನಗು ನಗುತ್ತಾ ಮಾತನಾಡೋದು ನನ್ನ ಅಭ್ಯಾಸ. ನಾನು ಯಾರ ಮೇಲೂ ದ್ವೇಷ ಮಾಡಲ್ಲ ಕಾಂಗ್ರೆಸ್ ರೀತಿ ಕೀಳುಮಟ್ಟದ ರಾಜಕಾರಣ ಮಾಡಲ್ಲ. ಕಾಂಗ್ರೆಸ್‌ನವರು ನಮ್ಮ ಸಂಪರ್ಕದಲ್ಲಿದ್ದಾರೆ ಅಂತ ನಾವು ಯಾವತ್ತಾದ್ರೂ ಹೇಳಿದ್ದೀವಾ? ಇಲ್ಲಿಂದ ಯಾರು ಹೋಗುವವರು ಇದ್ದಾರೆ ಅವರನ್ನ ಕರ್ಕೊಂಡು ಹೋಗಲಿ ಎಂದು ಹೇಳಿದ್ದಾರೆ.ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ, ಅದೃಷ್ಟ ಒಲಿದು ಬಂದಾಗ ಡಿಕೆಶಿ ಸಿಎಂ ಆಗ್ತಾರೆ: ಜಿಟಿಡಿ
Advertisement
ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳ ನಡೆಯುತ್ತಿದೆ, ನಮ್ಮನ್ನ ತೋರಿಸಿ ಜಗಳವನ್ನ ಸರಿಪಡಿಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಅವರು ಸಹ ನಮ್ಮನ್ನ ತೋರಿಸಿ ಸಿಎಂ ಸ್ಥಾನ ಭದ್ರ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಬ್ಲ್ಯಾಕ್‌ಮೇಲ್ ತಂತ್ರ ಮಾಡ್ತಿದ್ದಾರೆ ಎಂದು ದೂರಿದರಲ್ಲದೇ, ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತಂದೇ ತರ್ತೀವಿ ಎಂದು ಶಪಥ ಮಾಡಿದ್ದಾರೆ.