ಮಾಸ್ಕೋ: ಭಾರತೀಯರು ಪ್ರತಿಭಾನ್ವಿತರಾಗಿದ್ದು, ಅಭಿವೃದ್ಧಿ ವಿಷಯದಲ್ಲಿ ಭಾರತವು ಉತ್ತಮ ಫಲಿತಾಂಶ ಸಾಧಿಸುತ್ತದೆ ಎಂದು ರಷ್ಯಾದ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಹೊಗಳಿದರು.
ರಷ್ಯಾದ ಏಕತಾ ದಿನದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಭಾರತ ಹಾಗೂ ಇಲ್ಲಿನ ನಿವಾಸಿಗಳ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು. ಅಭಿವೃದ್ಧಿ ವಿಷಯದಲ್ಲಿ ಭಾರತವು ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸುವುದರಲ್ಲಿ ಸಂದೇಹವಿಲ್ಲ. ಭಾರತವು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು.
Advertisement
Advertisement
ನಾವು ಭಾರತವನ್ನು (India) ನೋಡೋಣ. ಆಂತರಿಕ ಅಭಿವೃದ್ಧಿ ಸಾಧಿಸಲು ಭಾರತದ ಜನರು ಪ್ರತಿಭಾವಂತರಿದ್ದಾರೆ. ಭಾರತ ಖಂಡಿತವಾಗಿಯೂ ಅತ್ಯುತ್ತಮ ಫಲಿತಾಂಶವನ್ನು ಸಾಧಿಸುತ್ತದೆ. ಅಲ್ಲಿನ ಶತಕೋಟಿ ಜನರಿಂದ ಇದು ಸಂಭಾವ್ಯವಿದೆ ಎಂದು ತಿಳಿಸಿದರು. ಇದನ್ನೂ ಓದಿ: ತುಮಕೂರಿನಲ್ಲಿ ಬಾಣಂತಿ, ನವಜಾತ ಶಿಶುಗಳ ಮರಣ ಪ್ರಕರಣ – ಸಚಿವ ಸುಧಾಕರ್ ರಾಜೀನಾಮೆಗೆ ಹೆಚ್‌ಡಿಕೆ ಆಗ್ರಹ
Advertisement
Advertisement
ಈ ವೇಳೆ ಪುಟಿನ್ ಆಫ್ರಿಕಾದಲ್ಲಿಯ ವಸಾಹತುಶಾಹಿ ಹಾಗೂ ರಷ್ಯಾದಲ್ಲಿರುವ ವಿಶಿಷ್ಟ ನಾಗರಿಕತೆ ಹಾಗೂ ಸಂಸ್ಕೃತಿಯ ಬಗ್ಗೆ ಮಾತನಾಡಿದರು. ರಷ್ಯಾವು ಬಹುರಾಷ್ಟ್ರೀಯ ದೇಶವಾಗಿದೆ. ಇದು ವಿವಿಧ ನಾಗರಿಕತೆ ಮತ್ತು ಸಂಸ್ಕೃತಿಯನ್ನು ಹೊಂದಿರುವ ದೇಶವಾಗಿದೆ. ಆದರೂ ರಷ್ಯಾ ಯುರೋಪಿಯನ್ ಸಂಸ್ಕೃತಿಯ ಮತ್ತು ಧರ್ಮದ ಭಾಗವಾಗಿದ್ದು. ಈ ಮೂಲಕ ಯೂರೋಪ್‍ನೊಂದಿಗೆ ಸಂಪರ್ಕ ಹೊಂದಿದೆ ಎಂದು ಹೇಳಿದರು. ಇದನ್ನೂ ಓದಿ: ಸ್ವತಂತ್ರ ಭಾರತದ ಮೊದಲ ಮತದಾರ ಶ್ಯಾಮ್ ಸರಣ್ ನೇಗಿ ನಿಧನ