ಅಶೋಕ್ ಕೇಳಿದ್ರೆ ಹೆಬ್ಬಾಳ್ಕರ್ ರಾಜೀನಾಮೆ ಕೊಡಿಸೋಣ – ಡಿಕೆಶಿ ವ್ಯಂಗ್ಯ

Public TV
1 Min Read
DK Shivakumar 3 1

ಬೆಂಗಳೂರು: ಸಚಿವರಾದ ತಿಮ್ಮಾಪುರ್, ಲಕ್ಷ್ಮಿ ಹೆಬ್ಬಾಳ್ಕರ್ ರಾಜೀನಾಮೆ ಕೇಳಿದ್ದ ವಿಪಕ್ಷ ನಾಯಕ ಆರ್.ಅಶೋಕ್ (R Ashok) ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಲೇವಡಿ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರು ಸಚಿವರ ರಾಜೀನಾಮೆಗೆ ವಿಪಕ್ಷ ನಾಯಕರ ಆರ್.ಅಶೋಕ್ ಒತ್ತಾಯ ವಿಚಾರವಾಗಿ ಪಾಪ ಅಶೋಕ್‌ಗೆ ರಾಜೀನಾಮೆ ಕೊಡಿಸೋಣ. ಅಶೋಕ್ ಕೇಳೋದು ದೊಡ್ಡದಾ? ನಾವು ರಾಜೀನಾಮೆ ಕೊಡಿಸೋದು ದೊಡ್ಡದಾ? ಕೊಡೋಣ ಎಂದು ತಿರುಗೇಟು ಕೊಟ್ಟಿದ್ದಾರೆ.ಇದನ್ನೂ ಓದಿ:ಸಿಎಂ ಏನು ತಪ್ಪು ಮಾಡಿಲ್ಲ, ಕಾನೂನಿಗೆ ಗೌರವ ಕೊಟ್ಟು ವಿಚಾರಣೆಗೆ ಹಾಜರಾಗಿದ್ದಾರೆ: ಡಿಕೆಶಿ

ಸಚಿವ ತಿಮ್ಮಾಪುರ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಬೇಕಾದರೂ ರಾಜ್ಯಪಾಲರಿಗೆ ಪತ್ರ ಬರೆದು ತನಿಖೆ ಮಾಡಿ ಎಂದು ದೂರು ಕೊಡಬಹುದು. ಹಿಂದೆಯೂ ನೂರಾರು ದೂರುಗಳು ಬಂದಿತ್ತು. ಈಗ ಸ್ವಲ್ಪ ವಿಶೇಷವಾಗಿ ಹೊರಟಿದ್ದಾರೆ. ಇದೆಲ್ಲ ಬರೀ ರಾಜಕೀಯದ ಬಣ್ಣ ಅಷ್ಟೆ ಎಂದು ಕಿಡಿಕಾರಿದರು.

ಬೆಳಗಾವಿಯಲ್ಲಿ ಎಸ್‌ಡಿಎ ಆತ್ಮಹತ್ಯೆ ಕೇಸ್‌ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Heabbalkar) ಪಿಎ ಹೆಸರು ಬರೆದಿಟ್ಟಿರುವ ವಿಚಾರವಾಗಿ ಮಾತನಾಡಿ, ಯಾರೇ ಮಾಡಿದರೂ ಪೊಲೀಸ್ ಇದ್ದಾರೆ, ಎಸ್ಪಿ ಇದ್ದಾರೆ, ಪೊಲೀಸ್ ಇಲಾಖೆ ಇದೆ. ಕಾನೂನು ಏನಿದೆ ಅದರ ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.ಇದನ್ನೂ ಓದಿ: ‘ಜೈ ಹನುಮಾನ್’ ಸಿನಿಮಾದಲ್ಲಿ ರಾಮನಾಗಿ ರಾಣಾ ದಗ್ಗುಬಾಟಿ?

Share This Article