ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ (Karnataka Assembly Election) ದಿನಾಂಕ ಘೋಷಣೆಯಾದ ಬೆನ್ನಲ್ಲೇ ಪ್ರಶ್ನೆಯೊಂದನ್ನು ಎತ್ತಿದ್ದ ನಟ ಹಾಗೂ ಪ್ರಜಾಕಿಯಾ ಪಕ್ಷದ ಸ್ಥಾಪಕ ಉಪೇಂದ್ರ (Upendra), ತಮ್ಮ ವಿರುದ್ಧದ ಟೀಕೆಗಳಿಗೆ ಖಡಕ್ಕಾಗಿ ಉತ್ತರಕೊಟ್ಟಿದ್ದಾರೆ.
ಡಿಜಿಟಲ್ ವೋಟಿಂಗ್ ಅಲ್ವಾ ?
ಮತ ಎಣಿಕೆಗೆ 2 ದಿನಾ ಬೇಕಾ ? ನನಗೆ ಗೊತ್ತಿಲ್ಲಾ, ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೇ….
ಅಬ್ಬಬ್ಬಾ ಏನು ಕಾಮೆಂಟ್ಸ್ ಗಳು ?!
ವಾರೆ ವಾಹ್ …
ವ್ಯಾಪಾರೀ ರಾಜಕೀಯ, ಭ್ರಷ್ಟಾಚಾರ, ಕುದುರೆ ವ್ಯಾಪಾರ ಇದರ ಬಗ್ಗೆ ಕಾಮೆಂಟ್ ಮಾಡಿ ನೋಡೋಣ ಅತಿ ಬುದ್ವಂತ್ರು, ದೇಶ ಪ್ರೇಮಿಗಳು, ರಾಜಕೀಯ ಪಕ್ಷಗಳ ಹಿಂ ಬಾಲಕರು….
— Upendra (@nimmaupendra) March 29, 2023
Advertisement
ಕರ್ನಾಟಕ ವಿಧಾನಸಭಾ ಚುನಾವಣೆಗೆ ಏಪ್ರಿಲ್ 13ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಆಯಾ ಜಿಲ್ಲಾ ಚುನಾವಣಾಧಿಕಾರಿಗಳು ಚುನಾವಣಾ ಅಧಿಸೂಚನೆ ಪ್ರಕಟಿಸಲಿದ್ದಾರೆ. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಏಪ್ರಿಲ್ 20 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಏಪ್ರಿಲ್ 21 ನಾಮಪತ್ರ ಪರಿಶೀಲನೆ ನಡೆಲಿದ್ದು, ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ 10ರಂದು ಕರ್ನಾಟಕದಲ್ಲಿ ಚುನಾವಣೆ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಇದನ್ನೂ ಓದಿ: ಎಲೆಕ್ಷನ್ ಡೇಟ್ ಅನೌನ್ಸ್ ಬೆನ್ನಲ್ಲೇ ಪ್ರಶ್ನೆ ಎತ್ತಿದ ನಟ ಉಪೇಂದ್ರ
Advertisement
#SupremeCourt #Election2023 #ElectionCommission @ECISVEEP pic.twitter.com/5D7jrKlhMq
— Upendra (@nimmaupendra) March 29, 2023
Advertisement
ದಿನಾಂಕ ಘೋಷಣೆಯಾಗುತ್ತಿದ್ದಂತೆ ಟ್ವೀಟ್ ಮೂಲಕ ಪ್ರಶ್ನೆಯೊಂದನ್ನು ಎತ್ತಿದ್ದ ನಟ ಉಪೇಂದ್ರ, ಕರ್ನಾಟಕದಲ್ಲಿ ಮೇ 10, ಬುಧವಾರದಂದು ಒಂದೇ ಹಂತದ ಮತದಾನ ಮತ್ತು ಮೇ 13, ಶನಿವಾರ ಫಲಿತಾಂಶ ಪ್ರಕಟ. ಮತ ಎಣಿಕೆಗೆ ಎರಡು ದಿನ ಬೇಕೆ?! ಏಕೆಂದು ಬಲ್ಲವರು ತಿಳಿಸುತ್ತೀರಾ? ಎಂದು ಪ್ರಶ್ನಿಸಿದ್ದರು.
Advertisement
ಈ ಪ್ರಶ್ನೆಗಳನ್ನು ಎತ್ತಿದ ಬಳಿಕ ನೆಟ್ಟಿಗರು ಉಪೇಂದ್ರ ಅವರನ್ನ ತರಾಟೆಗೆ ತೆಗೆದುಕೊಂಡಿದ್ದರು. ಉಪೇಂದ್ರ ಅವರೇ, ಚುನಾವಣೆ ಆದ ದಿನವೇ ಮತ ಎಣಿಕೆ ಮಾಡಲು ಹೇಗೆ ಸಾಧ್ಯ? ಹಳ್ಳಿ-ಹಳ್ಳಿಗಳಿಂದ ಮತ ಪೆಟ್ಟಿಗೆ ಸುರಕ್ಷಿತವಾಗಿ ಕೊಂಡೊಯ್ದು, ನೋಂದಾಯಿತ ಮತ ಎಣಿಕೆ ಕೇಂದ್ರಕ್ಕೆ ತಲುಪಬೇಕು. ಇದಕ್ಕೆ ಸಮಯ ಬೇಕಲ್ಲವೇ ಎಂದಿದ್ದರು. ಇನ್ನೂ ಕೆಲವರು ನಿಮ್ಮ ಸಿನಿಮಾ ಶೂಟಿಂಗ್ ಮುಗಿದ ಬಳಿಕವೇ ರಿಲೀಸ್ ಮಾಡ್ತೀರಾ? ಎಂದು ಉಪ್ಪಿ ಅವ್ರನ್ನ ತರಾಟೆಗೆ ತೆಗೆದುಕೊಂಡಿದ್ದರು.
ನೆಟ್ಟಿಗರ ಪ್ರಶ್ನೆಗೆ ಖಡಕ್ಕಾಗಿ ಉತ್ತರ ಕೊಟ್ಟಿರುವ ನಟ ಉಪೇಂದ್ರ, ಡಿಜಿಟಲ್ ವೋಟಿಂಗ್ (Digital Voting) ಅಲ್ವಾ? ಮತ ಎಣಿಕೆಗೆ 2 ದಿನಾ ಬೇಕಾ? ನನಗೆ ಗೊತ್ತಿಲ್ಲಾ, ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೆ. ಅಬ್ಬಬ್ಬಾ ಏನು ಕಾಮೆಂಟ್ಸ್ ಗಳು?! ವಾರೆ ವಾಹ್ ವ್ಯಾಪಾರಿ ರಾಜಕೀಯ, ಭ್ರಷ್ಟಾಚಾರ, ಕುದುರೆ ವ್ಯಾಪಾರ ಇದರ ಬಗ್ಗೆ ಕಾಮೆಂಟ್ ಮಾಡಿ ನೋಡೋಣ? ಅತಿ ಬುದ್ವಂತ್ರು, ದೇಶ ಪ್ರೇಮಿಗಳು, ರಾಜಕೀಯ ಪಕ್ಷಗಳ ಹಿಂ ಬಾಲಕರು’ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಚುನಾವಣಾ ಅಕ್ರಮ ತಡೆಗೆ 16 ಚೆಕ್ ಪೋಸ್ಟ್ ಸ್ಥಾಪನೆ- ಐವರು ರೌಡಿಶೀಟರ್‌ಗಳ ಗಡಿಪಾರು
ಮುಂದುವರಿದು, ಇದು ತಂತ್ರಜ್ಞಾನ ಯುಗ. ಅನಕ್ಷರಸ್ಥ ರಸ್ತೆ ವ್ಯಾಪಾರಿಗಳೂ ಫೋನ್ ಮೂಲಕ ಡಿಜಿಟಲ್ ನಲ್ಲಿ ಹಣದ ವ್ಯವಹಾರ ಮಾಡುತ್ತಾರೆ. ವ್ಯಾಪಾರಸ್ಥರು ಕೋಟ್ಯಂತರ ಹಣ ಸುರಕ್ಷಿತವಾಗಿ ಟ್ರಾನ್ಸ್ಫರ್ ಮಾಡುತ್ತಾರೆ. ಬಹು ಮುಖ್ಯ ದಾಖಲೆಗಳೊಂದಿಗೆ ವ್ಯವಹಾರ ಮಾಡುವ ದೊಡ್ಡ ದೊಡ್ಡ ಅಂತರರಾಷ್ಟ್ರೀಯ ಕಂಪನಿಗಳು ಡಿಜಿಟಲ್ ಮೂಲಕ ವ್ಯವಹರಿಸುತ್ತಾರೆ. ಪ್ರಧಾನ ಮಂತ್ರಿಗಳು ತಮ್ಮ ಬೆರಳಿಂದಲೇ ಲಕ್ಷಾಂತರ ಬ್ಯಾಂಕ್ ಖಾತೆಗೆ ಏಕಕಾಲಕ್ಕೆ ಹಣ ವರ್ಗಾಯಿಸುತ್ತಾರೆ. ಇಷ್ಟೆಲ್ಲಾ ಬದಲಾವಣೆ ಆದರೂ ಚುನಾವಣೆಯಲ್ಲಿ ಮತದಾರರು ಅವರಿರುವ ಜಾಗದಿಂದಲೇ ಮತದಾನ ಮಾಡುವ ತಂತ್ರಜ್ಞಾನ ಏಕೆ ಬರುತ್ತಿಲ್ಲ? ಯೋಚಿಸಿ ಇದು ಪ್ರಶ್ನೆ ಅಷ್ಟೇ. ಟೀಕೆಯೂ ಅಲ್ಲ ಎಂದು ಬರೆದುಕೊಂಡಿದ್ದಾರೆ.