– 5 ವರ್ಷವೂ ಸಿದ್ದರಾಮಯ್ಯ ಸಿಎಂ ಜಪ ಬೆನ್ನಲ್ಲೇ ಡಿಕೆ ಫಿಲಾಸಫಿ
ಬೆಂಗಳೂರು: ಐದು ವರ್ಷವೂ ಸಿದ್ದರಾಮಯ್ಯ ಸಿಎಂ ಜಪ ಬೆನ್ನಲ್ಲೇ ಡಿಕೆಶಿ ಫಿಲಾಸಫಿ. ನನಗೆ ಅಧಿಕಾರ ಸಿಗುತ್ತೋ.. ಇಲ್ವೋ ಗೊತ್ತಿಲ್ಲ. ಅದರ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ ಎಂದು ಆಪ್ತ ಬಳಗಕ್ಕೆ ಮತ್ತೊಮ್ಮೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಸಂದೇಶ ರವಾನಿಸಿದ್ದಾರೆ.
Advertisement
ಕೆಪಿಸಿಸಿ ಕಚೇಯಲ್ಲಿ ಇಂದಿರಾ ಗಾಂಧಿ (Indira Gandhi) ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೆಹರು ಅವರ ಬಳಿ ಎಷ್ಟೆಲ್ಲಾ ಆಸ್ತಿ ಇತ್ತು. ಈಗ ಸೋನಿಯಾ ಗಾಂಧಿ, ಈಗ ರಾಹುಲ್ ಗಾಂಧಿ ಬಳಿ ಏನೂ ಇಲ್ಲ. ಎಲ್ಲವನ್ನೂ ತ್ಯಾಗ ಮಾಡಿದ್ದಾರೆ. ಬಿಜೆಪಿ ಅವರು ಒಂದು ಸೈಟನ್ನೂ ತ್ಯಾಗ ಮಾಡಿಲ್ಲ. ನಾನು ನನ್ನ ಕಾರ್ಯಕರ್ತರಿಗೆ ಹೇಳ್ತಾ ಇದ್ದೀನಿ. ನನಗೆ ಅಧಿಕಾರ ಸಿಗುತ್ತೋ.. ಇಲ್ವೋ. ಅದರ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ. ನಾವೆಲ್ಲ ಒಟ್ಟಿಗೆ ಸೇರಿ ಕೆಲಸ ಮಾಡೋಣ. ಇಂಡಿಯಾ ಅಂದ್ರೆ ಅದು ಇಂದಿರಾ. ಇಂಡಿಯಾ ಹೆಸರು ಬದಲಿಸಲು ಬಿಜೆಪಿ ಹೊರಟಿದೆ. ನಾವು ಬದುಕಿನ ಜೊತೆ ಇರುತ್ತೇವೆ ಎಂದರು.
Advertisement
Advertisement
ಇಡೀ ದೇಶ, ಪ್ರಪಂಚ ಬಲಿಷ್ಠ ನಾಯಕಿಯನ್ನ ನೆನಪು ಮಾಡಿಕೊಳ್ಳೋ ಪವಿತ್ರ ದಿನ. ಸರ್ದಾರ್ ವಲ್ಲಭಭಾಯಿ ಪಟೇಲ್ (Sardar Vallabhbhai Patel) ಜನ್ಮದಿನ ಆಚರಣೆ ಮಾಡೋ ದಿನ. ದೇಶ ಇಬ್ಬರು ಮಹಾನ್ ಶಕ್ತಿಗಳನ್ನ ನೆನಪು ಮಾಡಿಕೊಳ್ತಿದ್ದೇವೆ. ನಾನು ಯೂತ್ ಕಾಂಗ್ರೆಸ್ ನಲ್ಲಿ ಇದ್ದೆ. ರೈಲಿನಲ್ಲಿ ದೆಹಲಿಗೆ ಯೂತ್ ಕಾಂಗ್ರೆಸ್ ಸಮಾವೇಶಕ್ಕೆ ಹೋಗ್ತಿದ್ವಿ. ಬೆಂಗಳೂರು ಬಿಟ್ಟು ಹೋಗುವಾಗ ಅರ್ಧಕ್ಕೆ ರೈಲು ನಿಂತಿತ್ತು. ಇಂದಿರಾ ಗಾಂಧಿ ಕೊಲೆ ಆಗಿದೆ ಅಂತ ರೈಲು ನಿಲ್ಲಿಸಿದರು. ಆಗ ದೊಡ್ಡ ಗಲಾಟೆ ಆಯ್ತು. ಈ ವೇಳೆ ನನ್ನನ್ನು ಅರೆಸ್ಟ್ ಮಾಡಿ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಇಟ್ಟಿದ್ರು ಅಂತ ಹಳೆಯ ನೆನಪುಗಳನ್ನು ಡಿಕೆಶಿ ಮೆಲುಕು ಹಾಕಿಕೊಂಡರು.
Advertisement
ಇಂದಿರಾಗಾಂಧಿ ಅವಧಿಯಲ್ಲಿ ಅನೇಕ ಕಾರ್ಯಕ್ರಮ ಕೊಟ್ಟಿದ್ರು. ಜನಾರ್ದನ ಪೂಜಾರಿ (Janardhan Poojary) ಅವರು ಮಂತ್ರಿ ಆಗಿ 10 ಸಾವಿರ ಯಾವುದೇ ಗ್ಯಾರಂಟಿ ಇಲ್ಲದೆ ಜನರಿಗೆ ಕೊಡೋ ಕಾರ್ಯಕ್ರಮ ಜಾರಿ ಮಾಡಿದ್ರು. ಪೂಜಾರಿ ಮೇಳ ಅಂತ ಅವರು ಕರೆಯುತ್ತಿದ್ದರು. ನಾನು ಅನೇಕರಿಗೆ ಸಾಲ ಕೊಡಿಸಿದೆ. ಆ ಸಾಲ ಮೇಳದ ಹೆಸರಲ್ಲಿ ಜಿಲ್ಲಾ ಪಂಚಾಯತ್ ಗೆದ್ದೆ. ಅಂದಿನಿಂದ ಇಂದಿನವರೆಗೂ ಗೆಲ್ಲುತ್ತಾ ಇದ್ದೀನಿ. ಬ್ಯಾಂಕ್ ಗಳ ರಾಷ್ಟ್ರೀಕರಣ ಮಾಡಿದ್ದು ಇಂದಿರಾಗಾಂಧಿ ಎಂದು ಹೇಳಿದರು. ಇದನ್ನೂ ಓದಿ: ಹೈಕಮಾಂಡ್ ಸಚಿವ ಸ್ಥಾನ ಬಿಟ್ಕೊಡಿ ಅಂದ್ರೆ ಬಿಟ್ಟು ಕೊಡ್ತೀನಿ: ಪರಮೇಶ್ವರ್
ಉಳುವವನೇ ಭೂಮಿಯ ಒಡೆಯ ಕಾರ್ಯಕ್ರಮ ಮಾಡಿದ್ದು ಇಂದಿರಾ ಗಾಂಧಿ. ದೇಶದಲ್ಲಿ ದೊಡ್ಡ ಕ್ರಾಂತಿ ಮಾಡಿದ್ರು. ರಾಜೀವ್ ಗಾಂಧಿ (Rajeev Gandhi) ಕಾಲದಲ್ಲಿ ದೊಡ್ಡ ಕಾರ್ಯಕ್ರಮ ಆಗಿದೆ. ಕಾಂಗ್ರೆಸ್ ಬಂದಾಗ ದೊಡ್ಡ ದೊಡ್ಡ ಕಾರ್ಯಕ್ರಮ ಆಗಿವೆ. ನಮ್ಮ ಸರ್ಕಾರ ಬಂದ ಮೇಲೆ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿದ್ವಿ. 1 ಕೋಟಿ 10 ಲಕ್ಷ ಮಹಿಳೆಯರಿಗೆ ಹಣ ಹೋಗಿದೆ. ಬಸ್ ನಲ್ಲಿ ಫ್ರೀ ಓಡಾಡೋಕೆ ಶಕ್ತಿ ಯೋಜನೆ ಜಾರಿ ಮಾಡಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಇಂತಹ ಕಾರ್ಯಕ್ರಮ. ಬಿಜೆಪಿ ಅವರು ಅಧಿಕಾರಕ್ಕೆ ಬಂದರೆ ಭಾವನೆ ಅಷ್ಟೆ ಎಂದು ಹೇಳಿದರು.
ಕಾಂಗ್ರೆಸ್ ಸಮಾಜದ ಎಲ್ಲಾ ಜನರನ್ನ ಹೊಂದಿಸುತ್ತದೆ. ಕಾಂಗ್ರೆಸ್ (Congress) ಸಮಾಜವನ್ನ ಹೊಂದಿಸುತ್ತದೆ. ಬಿಜೆಪಿ ಅವರು ಕತ್ತರಿಸುತ್ತಾರೆ. ಈಗ ಇಂಡಿಯಾ ಹೆಸರು ಬದಲಾವಣೆ ಮಾಡೋಕೆ ಮುಂದಾಗಿದ್ದಾರೆ. ಅದು ಹೇಗೆ ಆಗುತ್ತದೆ. ಐಎಎಸ್, ಐಪಿಎಸ್ ಎಲ್ಲಾ ಚೇಂಜ್ ಮಾಡ್ತೀನಿ ಅಂತಿದ್ದಾರೆ. ನಾವು ಇಂಡಿಯಾ ಅಂತ ಹೆಸರು ಇಟ್ಟಿರೋದಕ್ಕೆ ಭಾರತ ಅಂತ ಬದಲಾವಣೆ ಮಾಡ್ತಿದ್ದಾರೆ. ಮೇಕ್ ಇನ್ ಇಂಡಿಯಾ ಅಂತ ಹೇಳಿ ಹುಲಿ ಇಟ್ಟಿದ್ದಾರೆ. ನಾವು ಸಿಎಂ ಮನೆ ಮುಂದೆ ಹುಲಿ ನಿಲ್ಲಿಸಿದ್ದೇವೆ. ಬಿಜೆಪಿ ಅವರು ಭಾವನೆ ಕೆರಳಿಸೋ ಕೆಲಸ ಮಾಡುತ್ತಾರೆ. ನಾವು ಜನರ ಹೊಟ್ಟೆ ತುಂಬಿಸೋ ಕೆಲಸ ಮಾಡ್ತೀವಿ. ನಾವು ಗೃಹಜ್ಯೋತಿ, ಶಕ್ತಿ ಯೋಜನೆ ಕೊಟ್ಟಿದ್ದೇವೆ ಎಂದು ತಿಳಿಸಿದರು.
ನಾವು ಜಾತಿ ನೋಡಿ ಯೋಜನೆ ಜಾರಿ ಮಾಡಿಲ್ಲ. ಈ ಯೋಜನೆ ಬಿಜೆಪಿ ಅವರು ತೆಗೆದುಕೊಂಡಿಲ್ಲವಾ?. ನಮಗಿಂತ ಬಿಜೆಪಿ ಅವರೇ ಗ್ಯಾರಂಟಿ ಯೋಜನೆ ಜಾಸ್ತಿ ತೆಗೆದುಕೊಂಡಿದ್ದಾರೆ. ಗ್ಯಾರಂಟಿ ಯೋಜನೆ ಬಿಜೆಪಿ ಅವರೇ ಜಾಸ್ತಿ ತೆಗೆದುಕೊಳ್ತಿದ್ದಾರೆ. ಮಂಗಳೂರಿನಲ್ಲಿ ಬಿಜೆಪಿ ಅವರೇ ಹೆಚ್ಚು ಅರ್ಜಿ ಹಾಕಿದ್ದಾರೆ ಅಂತ ನಮ್ಮ ನಾಯಕರು ಹೇಳಿದ್ರು. ನಮಗೂ ಮತ್ತು ಇಂದಿರಾಹುಲ್ ಗಾಂಧಿ ಕುಟುಂಬಕ್ಕೆ ಇರೋದು ಭಕ್ತ ಮತ್ತು ದೇವರ ನಡುವಿನ ಸಂಬಂಧವಾಗಿದೆ. ತಮ್ಮ ಆಸ್ತಿಯನ್ನು ಜನರಿಗೆ ದಾನ ಮಾಡಿದರು. ಬಿಜೆಪಿ ಅವರು, ಜೆಡಿಎಸ್ ಅವರು 60*40 ಸೈಟ್ ಕೂಡಾ ಯಾರಿಗೂ ಕೊಟ್ಟಿಲ್ಲ. ಬ್ಲಾಕ್ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ್ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಇದು ಕಾಂಗ್ರೆಸ್ ನ ಶಕ್ತಿ ಎಂದರು.
Web Stories