ರಾಮನ ಪಾತ್ರವನ್ನು ಯಶ್ ಮಾಡಲಿ, ಬಿಳಿ ಇಲಿ ಅಲ್ಲ: ನಟಿ ಕಂಗನಾ ರಣಾವತ್ ಕಿಡಿನುಡಿ

Public TV
2 Min Read
Yash

ಬಾಲಿವುಡ್ ನಲ್ಲಿ ರಾಮಾಯಣ (Ramayana) ಆಧಾರಿತ ಸಿನಿಮಾ ಬರಲಿದೆ ಎನ್ನುವ ಸುದ್ದಿ ಹಲವು ತಿಂಗಳಿನಿಂದ ಹರಿದಾಡುತ್ತಿದೆ. ಇದೊಂದು ಭಾರೀ ಬಜೆಟ್‍ ಸಿನಿಮಾವಾಗಿದ್ದು, ಈ ಸಿನಿಮಾದಲ್ಲಿ ಭಾರತೀಯ ಸಿನಿಮಾ ರಂಗದ ಹೆಸರಾಂತ ನಟರು ಇರಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಅಧಿಕೃತವಾಗಿ ಸಿನಿಮಾ ಕುರಿತು ಯಾವುದೇ ಮಾಹಿತಿ ನೀಡದೇ ಇದ್ದರೂ, ತಾರಾಗಣದ ಯಾದಿ ಮಾತ್ರ ಹೊರಗೆ ಬಿದ್ದಿದೆ.

ranbir kapoor 1

ಈ ಸಿನಿಮಾದಲ್ಲಿ ರಾಮನಾಗಿ ರಣಬೀರ್ ಕಪೂರ್ (Ranbir Kapoor) ಕಾಣಿಸಿಕೊಂಡರೆ, ಸೀತೆಯಾಗಿ ಆಲಿಯಾ ಭಟ್ (Alia Bhatt) ನಟಿಸಲಿದ್ದಾರೆ ಎನ್ನುವ ಸುದ್ದಿ ಇದೆ. ನಿಜ ಜೀವನದಲ್ಲೂ ಸತಿ-ಪತಿಯಾಗಿರುವ ರಣಬೀರ್ ಮತ್ತು ಆಲಿಯಾ ಭಟ್ ತೆರೆಯ ಮೇಲೂ ಅಂಥಧ್ದೇ ಪಾತ್ರ ಮಾಡಲಿದ್ದಾರೆ ಎಂದು ಬಿಟೌನ್ ಮಾತನಾಡಿಕೊಳ್ಳುತ್ತಿದೆ. ಇದನ್ನೂ ಓದಿ:ಮೆಗಾ ಪ್ರಿನ್ಸ್ ವರುಣ್ ತೇಜ್- ಲಾವಣ್ಯ ತ್ರಿಪಾಠಿ ಗ್ರ್ಯಾಂಡ್‌ ಎಂಗೇಜ್‌ಮೆಂಟ್

alia bhatt and ranbir kapoor marriage 3

ಇದರ ಜೊತೆಗೆ ಕನ್ನಡದ ನಟಿ ರಾಕಿಂಗ್ ಸ್ಟಾರ್ ಯಶ್ (Yash) ಅವರು ರಾವಣ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸ್ಟಾರ್ ಗಳ ಬಗ್ಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಟೀಕೆ ಮಾಡಿದ್ದಾರೆ. ಅದರಲ್ಲೂ ಪರೋಕ್ಷವಾಗಿ ರಣಬೀರ್ ಕಪೂರ್ ಟೀಕಿಸಿದ್ದಾರೆ. ಮಾದಕ ವ್ಯಸನಿ, ಬಿಳಿ ಇಲಿ ಅಂತೆಲ್ಲ ಕರೆದಿದ್ದಾರೆ.

Yash 2

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಕಂಗನಾ ರಣಾವತ್ (Kangana Ranaut), ‘ನಾನು ಇತ್ತೀಚಿನ ದಿನಗಳಲ್ಲಿ ರಾಮಾಯಣ ಸಿನಿಮಾ ಬಗ್ಗೆ ಕೇಳುತ್ತಿರುವೆ. ಅದರಲ್ಲಿ ಮಾದಕ ವ್ಯಸನಿಯೊಬ್ಬ ರಾಮನ ಪಾತ್ರ ಮಾಡಲಿದ್ದಾನಂತೆ. ತೆಳ್ಳಗಿನ ಬಿಳಿ ಇಲಿಯು ಕೆಟ್ಟ ರೀತಿಯಲ್ಲಿ ಬೇರೆಯವರ ಬಗ್ಗೆ ಪಿ.ಆರ್ ಮಾಡಿಕೊಂಡು ಓಡಾಡುವಲ್ಲಿ ಕುಖ್ಯಾತಿ ಪಡೆದವನು. ಇವನು ಕೇವಲ ನಟನಲ್ಲ, ಹೆಣ್ಣು ಬಾಕ ಕೂಡ. ಇಂಥವನು ರಾಮನಾಗಲು ಬೆಳೆದು ನಿಂತಿದ್ದಾನೆ’ ಎಂದು ಜರಿದಿದ್ದಾರೆ.

kangana ranaut dhaakad 1

ಯಶ್ ಅವರಿಗೆ ರಾವಣನ ಪಾತ್ರ ನೀಡಲಾಗಿದೆ ಎಂದು ಕೇಳಿದ್ದೇನೆ. ರಾವಣ ಪಾತ್ರಕ್ಕಿಂತ ಅವರಿಗೆ ರಾಮನ ಪಾತ್ರ ಹೊಂದುತ್ತದೆ ಎಂದು ಪರೋಕ್ಷವಾಗಿ ರಾಕಿಂಗ್ ಸ್ಟಾರ್ ಬೆಂಬಲಕ್ಕೆ ನಿಂತಿದ್ದಾರೆ. ಈ ಎಲ್ಲ ಹೇಳಿಕೆಗಳ ನಡುವೆಯೂ ಅವರು ರಣಬೀರ್ ಕಪೂರ್ ಎಚ್ಚರಿಕೆಯನ್ನೂ ನೀಡಿದ್ದು, ‘ನೀನು ಒಮ್ಮೆ ಹೊಡೆದರೆ ನಾನು ಸಾಯೋತನಕ ಹೊಡೆಯುತ್ತೇನೆ. ಗಲಾಟೆ ಮಾಡದೇ ದೂರ ಇರು’ ಎಂದು ಬರೆದುಕೊಂಡಿದ್ದಾರೆ.

ನಿತೀಶ್ ತಿವಾರಿ (Nitish Tiwari) ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಸಿನಿಮಾವನ್ನು ಮಧು ಮಂಟೆನಾ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದ ತಾರಾಗಣದ ಬಗ್ಗೆ ಈ ಟೀಮ್ ತಲೆಕೆಡಿಸಿಕೊಂಡು ಕೂತಿದ್ದರೆ, ಇತ್ತ ಕಡೆ ಯಾರು, ಯಾವ ಪಾತ್ರ ಮಾಡಲಿದ್ದಾರೆ ಎನ್ನುವ ಲಿಸ್ಟ್ ಹೊರ ಬಿದ್ದಿದೆ. ಆದರೆ, ನಟರು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Share This Article