– ಮತ ಧರ್ಮಗಳ ತಾರತಮ್ಯವಿಲ್ಲದ ಸರ್ವ ಜನಾಂಗದ ಹಬ್ಬ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದ್ದು, ನಾಡೋಜ, ಸಾಹಿತಿ ಹಂಪ ನಾಗರಾಜಯ್ಯ (Hamapa Nagarajaiah) ಉದ್ಘಾಟಿಸಿದರು.
Advertisement
ನಾಡದೇವತೆ ಚಾಮುಂಡೇಶ್ವರಿ (Chamundeshwari) ಸನ್ನಿಧಾನದಲ್ಲಿ ಬೆಳಗ್ಗೆ 9.29ಕ್ಕೆ ಶುಭ ಲಗ್ನದಲ್ಲಿ ನಾಡೋಜ, ಸಾಹಿತಿ ಹಂಪ ನಾಗರಾಜಯ್ಯ ಉದ್ಘಾಟಿಸಿದ್ದು, ತಾಯಿ ಚಾಮುಂಡೇಶ್ವರಿಗೆ ಪುಷ್ಪರ್ಚಾನೆ ಮಾಡುವ ಮೂಲಕ ಚಾಲನೆ ನೀಡಿದರು.ಇದನ್ನೂ ಓದಿ: ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾದ ಶೂಟಿಂಗ್‌ಗೆ ತಾತ್ಕಾಲಿಕ ಬ್ರೇಕ್
Advertisement
Advertisement
ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದಸರಾ ಮತ ಧರ್ಮಗಳ ತಾರತಮ್ಯ ಇಲ್ಲದ ಸರ್ವ ಜನಾಂಗದ ಹಬ್ಬ. ಆಸ್ತಿಕತೆ ನಾಸ್ತಿಕತೆ ಎಂಬುದು ದಸರಾದಲ್ಲಿ ಅಪ್ರಸ್ತುತವಾಗಿದೆ. ಇದು ಅರಮನೆ ಹಬ್ಬವಲ್ಲ. ಜನರ ಆರಿಸಿದ ಸರ್ಕಾರ ನಡೆಸುವ ಜನರ ಹಬ್ಬವೆಂದರೆ ಅದು ದಸರಾ ಎಂದರು.
Advertisement
ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಶಿವಕುಮಾರ್ (DCM Shivakumar) ಎಷ್ಟೆ ಅಡ್ಡಿ ಆತಂಕ ಎದುರಾಗುತ್ತಿದ್ದರೂ ಎದೆಗುಂದದೆ ಸಡ್ಡು ಹೊಡೆದು ಗಟ್ಟಿಯಾಗಿ ನಿಂತಿದ್ದಾರೆ. ಜೀವನವೇ ದೊಡ್ಡ ಅಖಾಡ. ಅದರಲ್ಲಿ ಧೃತಿಗೆಡದೆ ತೊಡೆತಟ್ಟಿ ನಿಲ್ಲಲೇಬೇಕು. ಸಜ್ಜನಿಕೆ ಸೌಮ್ಯತೆ ದೌರ್ಬಲ್ಯವಲ್ಲ. ಪ್ರತಿಕೂಲ ಪ್ರವಾಹವನ್ನು ಎದುರಿಸುವ ಧೀಶಕ್ತಿ ಪ್ರತಿಯೊಬ್ಬರಲ್ಲೂ ಇರಬೇಕು ಎಂದು ಚಾಮುಂಡಿ ತಾಯಿಗೆ ಪಾರ್ಥನೆ ಸಲ್ಲಿಸಿದರು.
ಇಸ್ರೇಲ್ – ಪ್ಯಾಲೆಸ್ಟೈನ್, ರಷಿಯಾ – ಉಕ್ರೈನ್ ಯುದ್ದ ನಿಲ್ಲಲಿ. ಹೆಣ್ಣು ಭ್ರೂಣ ಹತ್ಯೆ ನಿಲ್ಲಲಿ. ಶಾಸನಸಭೆಯಲ್ಲಿ ಸ್ತೀಯರಿಗೆ ಸೂಕ್ತ ಪ್ರಾತಿನಿಧ್ಯ ಸಿಗಲಿ. ಸರ್ಕಾರ ಉರುಳಿಸುವ ದುರಾಲೋಚನೆ ಬರದಂತೆ ತಡೆದು ಚುನಾಯಿತ ಸರ್ಕಾರಗಳು ಉಳಿಯುವ ಚಿಂತನೆ ಮೂಡಲಿ ಎಂದು ಸಿಎಂಗೆ ಧೈರ್ಯ ತುಂಬಿದರು.ಇದನ್ನೂ ಓದಿ: ಇಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಪೀಣ್ಯ – ನಾಗಸಂದ್ರ ನಡುವೆ ಮೆಟ್ರೋ ಸಂಚಾರ ಸ್ಥಗಿತ
ಕೆಡವುದು ಸುಲಭ, ಕಟ್ಟುವುದು ಕಷ್ಟ. ಮತ್ತೆ ಮತ್ತೆ ಚುನಾವಣೆ ಬರುವುದು ಬೇಡ. ಯಾವ ಪಕ್ಷವೂ ಶಾಶ್ವತವಾಗಿ ಅಧಿಕಾರದಲ್ಲಿ ಇರುವುದು ಅಸಾಧ್ಯ. ಸೋತ ಪಕ್ಷವೂ ಮತ್ತೆ ಅಧಿಕಾರಕ್ಕೆ ಬರಲು ಐದು ವರ್ಷಗಳಲ್ಲಿ ಸಜ್ಜಾಗಬಹುದು. ದೋಷಾರೋಪಣೆ, ಅವಾಚ್ಯ ಶಬ್ಧ ಬಳಕೆಯೇ ಯುವಕರಿಗೆ ಮಾದರಿ ಆದರೆ ಏನೂ ಗತಿ ಎಂದು ಪ್ರಶ್ನಿಸಿದರು.
ಉದ್ಘಾಟಕರಾದ ಸಾಹಿತಿ ಡಾ.ಹಂಪ ನಾಗರಾಜಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಎಲ್ಲ ಗಣ್ಯರು ಒಂದೇ ಬಸ್‌ನಲ್ಲಿ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದರು. ಉದ್ಘಾಟನೆಯಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಡಿಸಿಎಂ ಹಾಗೂ ಹಲವರು ಶಾಸಕರು ಭಾಗಿಯಾಗಿದ್ದರು. ದಸರಾ ಚಾಲನೆ ನೀಡುವ ಜೊತೆಗೆ ಫಲಪುಷ್ಪ ಪ್ರದರ್ಶನ, ಚಲನಚಿತ್ರೋತ್ಸವ, ರೈತ ದಸರಾ, ಕುಸ್ತಿ ದಸರಾ, ಯೋಗ ದಸರಾ, ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮೈಸೂರು ಅರಮನೆ, ಪ್ರಮುಖ ವೃತ್ತಗಳ ವಿದ್ಯುತ್ ದೀಪಾಲಂಕಾರಕ್ಕೂ ಚಾಲನೆ ನೀಡಿದರು.
ನಂದಿಧ್ವಜಕ್ಕೆ ಸಿಎಂ ಸಿದ್ದರಾಮಯ್ಯ ಪೂಜೆ ಮಾಡಿ, ಸೇರಿದ ಗಣ್ಯರ ಜೊತೆ ಪುಷ್ಪಾರ್ಚನೆ ಮಾಡಿದರು. ಬಳಿಕ ಚಾಮುಂಡೇಶ್ವರಿ ದೇವಾಲಯದ ಬಳಿ ಆಗಮಿಸಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಗಂಗಾರತಿ ಮಾದರಿಯಲ್ಲಿ ಇಂದು ಸಂಜೆ ಶ್ರೀರಂಗಪಟ್ಟಣದಲ್ಲಿ 5 ದಿನಗಳ ಕಾಲ ಕಾವೇರಿ ಆರತಿ ನಡೆಯಲಿದೆ.ಇದನ್ನೂ ಓದಿ: Delhi | ಚಿಕಿತ್ಸೆಗೆ ಬಂದು ವೈದ್ಯನ ಗುಂಡಿಕ್ಕಿ ಹತ್ಯೆಗೈದ ಅಪ್ರಾಪ್ತರು