ಕನ್ನಡ ನಾಡು ಕಂಡ ಶ್ರೇಷ್ಠ ನಟ ಡಾ.ರಾಜ್ ಕುಮಾರ್ (Raj Kumar) ಅವರ ಜನ್ಮ ದಿನವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೆಂಗಳೂರಿನಲ್ಲಿ ಹಮ್ಮಿಕೊಂಡಿತ್ತು. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಪಿ.ಶೇಷಾದ್ರಿ, ರಾಜ್ ಪುತ್ರ ರಾಘವೇಂದ್ರ ರಾಜ್ ಕುಮಾರ್, ಹಿರಿಯ ನಟ ಶ್ರೀನಿವಾಸ್ ಮೂರ್ತಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪಿ. ಶೇಷಾದ್ರಿ (P. Sheshadri), ‘ಕೇವಲ ನಾಲ್ಕೇ ವರ್ಷ ಕಳೆದರೆ ಡಾ.ರಾಜ್ ಕುಮಾರ್ ಅವರ ಜನ್ಮ ಶತಮಾನೋತ್ಸವ ಈ ಸಮಯದಲ್ಲಿ ಅವರ ಬಗ್ಗೆ (biopic) ಸಿನಿಮಾವೊಂದನ್ನು ಹೊರತರಬೇಕು. ಅದನ್ನು ರಾಜಕುಮಾರ್ ಕುಟುಂಬ ಅಥವಾ ಬೇರೆ ಯಾರಾದರೂ ಮಾಡಲಿ ಎಂದು ಆಶಯವನ್ನು ವ್ಯಕ್ತ ಪಡಿಸಿದರು. ಜೊತೆಗೆ ಕುವೆಂಪು ಅವರು ಈಗ ಏನಾದರೂ ಇದ್ದಿದ್ದರೆ ನಾಡಗೀತೆಯಲ್ಲಿ ಅಣ್ಣಾವ್ರ ಹೆಸರನ್ನೂ ಸೇರಿಸುತ್ತಿದ್ದರು ಎಂದರು.
ತಂದೆಯ ಜೊತೆಗಿನ ಒಡನಾಟವನ್ನು ರಾಘವೇಂದ್ರ ರಾಜ್ ಕುಮಾರ್ ನೆನಪಿಸಿಕೊಂಡರು. ಸೋಲು ಮತ್ತು ಗೆಲುವನ್ನು ಹೇಗೆ ಸ್ವೀಕರಿಸಬೇಕು ಎಂದು ಅಪ್ಪಾಜಿ ಹೇಳಿದ್ದರು ಎಂದರು. ಅವರ ಸರಳ ಜೀವನ ಎಲ್ಲರಿಗೂ ಮಾದರಿ ಎನ್ನುವುದನ್ನು ವಿವರಿಸಿದರು. ಹಿರಿಯ ನಟ ಶ್ರೀನಿವಾಸ್ ಮೂರ್ತಿ ಕೂಡ ಡಾ.ರಾಜ್ ಕುಮಾರ್ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡರು.