ಮೂರಲ್ಲ, 6 ಡಿಸಿಎಂ ಹುದ್ದೆಗಳು ಮಾಡಲಿ, ಡಿಕೆಶಿ ಸಿನಿಯರ್ DCM ಆಗಲಿ – ಬಸವರಾಜ್ ರಾಯರೆಡ್ಡಿ

Public TV
2 Min Read
Basvaraj Rayareddi

ನವದೆಹಲಿ: ಕಾಂಗ್ರೆಸ್‌ (Congress) ಪಕ್ಷಕ್ಕೆ ಎಲ್ಲ ಜಾತಿ ಧರ್ಮಗಳು ಬೆಂಬಲ ನೀಡಿದ್ದು, ಪ್ರಾತಿನಿಧ್ಯ ನೀಡುವ ದೃಷ್ಟಿಯಿಂದ ಮೂರಲ್ಲ‌ ಬದಲಿಗೆ 6 ಉಪ ಮುಖ್ಯಮಂತ್ರಿಗಳ ಸ್ಥಾನಗಳನ್ನ ಸೃಷ್ಠಿಸಬೇಕು ಎಂದು ಕಾಂಗ್ರೆಸ್‌ ಹಿರಿಯ ನಾಯಕ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ (Basvaraj Rayareddi) ಹೇಳಿದ್ದಾರೆ.

ನವದೆಹಲಿಯಲ್ಲಿ (NewDelhi) ಮಾತನಾಡಿದ ಅವರು, ಮೂರು ಡಿಸಿಎಂ ಸ್ಥಾನಗಳ ಬಗ್ಗೆ ರಾಜಣ್ಣ, ಜಿ.ಪರಮೇಶ್ವರ್ (G Parameshwar) ಮಾತನಾಡಿದ್ದಾರೆ, ಅವರ ಅಭಿಪ್ರಾಯಕ್ಕೆ ನನ್ನ ಬೆಂಬಲ ಇದೆ. ಆದರೆ ಎಲ್ಲ ಜಾತಿ ಧರ್ಮಗಳು ಕಾಂಗ್ರೆಸ್‌ಗೆ ಬೆಂಬಲ ನೀಡಿವೆ ಹೀಗಾಗೀ ಮುಸ್ಲಿಂ, ಎಸ್ಸಿ-ಎಸ್ಟಿ, ಲಿಂಗಾಯತ ಸೇರಿದಂತೆ ಮಹಿಳೆಗೂ ಒಂದು ಡಿಸಿಎಂ ಹುದ್ದೆ ನೀಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಹೊಕ್ಕಿದ ಕಡೆಯಲ್ಲಿ ಸಂಪೂರ್ಣ ಹೋಯ್ತು ಅಂತ ಅರ್ಥ: ವೀರಪ್ಪ ಮೊಯ್ಲಿ

ಡಿಸಿಎಂ ಹುದ್ದೆಗಳ ಸೃಷ್ಠಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಬೇಕು. ಜಾತಿವಾರು ಪ್ರಾದೇಶಿಕವಾರು ಪ್ರಾತಿನಿಧ್ಯ ನೀಡಬೇಕು. ಇದರಿಂದ ಲೋಕಸಭೆ ಚುನಾವಣೆಗೆ ಹೆಚ್ಚು ಅನುಕೂಲವಾಗಲಿದೆ. ಡಿ.ಕೆ ಶಿವಕುಮಾರ್ ಪಕ್ಷ ಕಟ್ಟಿದ್ದಾರೆ, ಅವರನ್ನು ಪ್ರಿನ್ಸಿಪಲ್ ಡಿಸಿಎಂ ಅಥವಾ ಸಿನಿಯರ್ ಡಿಸಿಎಂ ಮಾಡಬಹುದು. ನಾವು ಸಲಹೆ ನೀಡುತ್ತಿದ್ದೇವೆ, ಸಲಹೆ ನೀಡುವುದು ತಪ್ಪಲ್ಲ. ಪಕ್ಷದ ತಿರ್ಮಾನಕ್ಕೆ ನಾವು ಬದ್ಧ, ಪಕ್ಷ ಈ ಬಗ್ಗೆ ಬೇಗ ತೀರ್ಮಾನ ತೆಗೆದುಕೊಳ್ಳಲಿ ಎಂದರು.

ಬಿಜೆಪಿ‌-ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡಿ, ಹೆಚ್‌.ಡಿ ಕುಮಾರಸ್ವಾಮಿ ಯಾರ ಜೊತೆಗೆ ಬೇಕಾದರೂ ಮೈತ್ರಿ ಮಾಡಿಕೊಳ್ಳಲಿ, ಎನ್‌ಡಿಎ ಒಕ್ಕೂಟ ಸೇರಲಿ ಅಥವಾ ಇಂಡಿಯಾ ಒಕ್ಕೂಟಕ್ಕೆ ಬರಲಿ, ಆ ನಿರ್ಧಾರ ಅವರಿಗೆ ಬಿಟ್ಟಿದ್ದು, ಆದರೆ ಅವರು ನೈತಿಕ ಸಿದ್ಧಾಂತದ ಮೇಲೆ ಒಪ್ಪಂದ ಮಾಡಿಕೊಳ್ಳಬೇಕು. ಚುನಾವಣೆ ಗೆಲ್ಲಲು ರಾಜಕೀಯ ‌ನೈತಿಕತೆ ಮೇಲೆ‌ ಒಪ್ಪಂದ ಮಾಡಿಕೊಳ್ಳಬಾರದು. ಬಿಜೆಪಿ ಜೆಡಿಎಸ್ ಎರಡು ಪಕ್ಷಗಳು ಪರಸ್ಪರ ರಾಜಕೀಯ ಸಿದ್ಧಾಂತ ಒಪ್ಪಿಕೊಳ್ತಾರಾ? ಎಂಬುದನ್ನ ಸ್ಪಷ್ಟಪಡಿಸಬೇಕು ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಕಾವೇರಿ, ದಾವಣಗೆರೆಯಲ್ಲಿ ಭದ್ರಾ ನೀರಿಗಾಗಿ ಬೀದಿಗಿಳಿದ ರೈತರು

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article