ಬೆಂಗಳೂರು: ರಾಜ್ಯದ ಜನತೆ ಮುಂದೆ ಯಾರು ಆ ಮಹಾನುಭಾವ ಸಿಡಿ ಫ್ಯಾಕ್ಟರಿ ಓನರ್ ಎಂದು ಬಹಿರಂಗ ಆಗಲಿ ಎಂದು ಜೆಡಿಎಸ್ (JDS) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದರು.ಇದನ್ನೂ ಓದಿ:ಆಪರೇಷನ್ ಮಕ್ನಾ ಸಕ್ಸಸ್ – ಮೂರು ಪುಂಡಾನೆಗಳ ಸೆರೆ, ನಿಟ್ಟುಸಿರು ಬಿಟ್ಟ ಬೇಲೂರು ಜನ
`ಪಬ್ಲಿಕ್ ಟಿವಿ’ ಜೊತೆ ರಾಜಣ್ಣ (KN Rajanna) ಹನಿಟ್ರ್ಯಾಪ್ (Honey Trap) ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಇದರ ಬಗ್ಗೆ ಸದನದೊಳಗೆ ಮಾತನಾಡಿದ್ದಾರೆ. ಎಸ್‌ಟಿ ಸಮುದಾಯಕ್ಕೆ ಸೇರಿರುವಂತಹ ಕಾಂಗ್ರೆಸ್‌ನ ಒಬ್ಬ ಮಂತ್ರಿ ರಾಜಣ್ಣ ಅವರು ಅಷ್ಟೇ ಅಲ್ಲ. ಜಾರಕಿಹೊಳಿ ಅವರು ಕೂಡ ಈ ವಿಚಾರದಲ್ಲಿ ಸಾಕಷ್ಟು ನೊಂದಿದ್ದಾರೆ. ರಾಜಕೀಯವಾಗಿ, ಸೈದ್ಧಾಂತಿಕವಾಗಿ ಚರ್ಚೆ, ಹೋರಾಟ, ವಿಚಾರ ಮಾಡುವಂತದ್ದು ಸರ್ವೇ ಸಾಮಾನ್ಯ. ಆದರೆ ಈ ರೀತಿ ಒಬ್ಬರನ್ನು ವ್ಯಕ್ತಿಗತವಾಗಿ ನಿಂದಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹನಿಟ್ರ್ಯಾಪ್ ಇದು ನಿಜಕ್ಕೂ ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ತಲೆ ತಗ್ಗಿಸುವಂತಹ ವಿಚಾರವಾಗಿದೆ. ಗೃಹ ಸಚಿವರ ಜೊತೆ ಮಾತನಾಡಿ ತನಿಖೆಗೆ ಒಪ್ಪಿಸಬೇಕಾಗುತ್ತದೆ. ಎಲ್ಲಾ ರೀತಿ ತನಿಖೆ ನಡೆಯಲಿ. 48 ಜನರಿದ್ದಾರೆ, 50 ಜನರಿದ್ದಾರೆ ಎಂದು ಹೇಳುತ್ತಿದ್ದಾರೆ. ಅದು ಕೂಡ ಬಹಿರಂಗ ಆಗಲಿ. ರಾಜ್ಯದ ಜನತೆ ಮುಂದೆ ಯಾರು ಆ ಮಹಾನುಭವ ಸಿಡಿ ಫ್ಯಾಕ್ಟರಿ ಓನರ್ ಎಂದು ಗೊತ್ತಾಗಲಿ ಎಂದು ಆಗ್ರಹಿಸಿದರು.ಇದನ್ನೂ ಓದಿ: ಒಳಉಡುಪು ಧರಿಸದೆ ಬ್ಲೇಜರ್‌ನಲ್ಲಿ ಬೋಲ್ಡ್ ಪೋಸ್ ಕೊಟ್ಟ ‘ಅಖಂಡ’ ಚಿತ್ರದ ನಟಿ