– ನಾಳೆ ಬಿಜೆಪಿ ನಿಯೋಗ ಸ್ಥಳಕ್ಕೆ ಭೇಟಿ
ಬೆಂಗಳೂರು: ಮದ್ದೂರಿನಲ್ಲಿ (Maddur) ಕಲ್ಲು ಎಸೆದವರು, ದೊಣ್ಣೆಯಿಂದ ಹೊಡೆದಿರುವವರು, ಮೆರವಣಿಗೆಗೆ ಅವಕಾಶ ನೀಡುವುದಿಲ್ಲ ಎನ್ನುವವರು ಎಲ್ಲರನ್ನೂ ಸರ್ಕಾರ ಬಂಧಿಸಬೇಕು ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಎನ್.ರವಿಕುಮಾರ್ (N Ravikumar) ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮದ್ದೂರಿನಲ್ಲಿ ಗಣಪತಿ ಮೆರವಣಿಗೆ (Ganesha Procession) ಮಾಡುವ ಸಂದರ್ಭದಲ್ಲಿ ಡಿಜೆ ಹಾಕಿಕೊಂಡು ಹೋಗುತ್ತಿದ್ದರು, ಅದನ್ನು ನಿಲ್ಲಿಸಿದ್ದಾರೆ ಎಂದು ಆಕ್ಷೇಪಿಸಿದರು. ಗಣಪತಿ ಮೆರವಣಿಗೆಯನ್ನು ಮಾಡಬಾರದು ಎಂದು ಅಲ್ಲಿನ ಕೆಲವು ಅಲ್ಪಸಂಖ್ಯಾತ ಗೂಂಡಾಗಳು ಮೆರವಣಿಗೆಯ ಮೇಲೆ ಸುಮಾರು 5 ಕೆಜಿ ಗಾತ್ರದ ಕಲ್ಲುಗಳನ್ನು ಎಸೆದಿರುವುದು ಮಾಧ್ಯಮಗಳಲ್ಲಿ ಬರುತ್ತಿದೆ. ಮೊದಲೇ ಅವರು ಪೂರ್ವಯೋಜನೆ ಮಾಡಿಕೊಂಡು ಕಲ್ಲುಗಳನ್ನು ಮತ್ತು ದೊಣ್ಣೆಗಳನ್ನು ಮಹಡಿಯ ಮೇಲೆ ಇಟ್ಟುಕೊಂಡು ಮೆರವಣಿಗೆಯ ಮೇಲೆ ಆಕ್ರಮಣ ಮಾಡುವುದು ಎಲ್ಲವೂ ಮಾಧ್ಯಮಗಳ ಮೂಲಕ ಗೊತ್ತಾಗುತ್ತಿದೆ ಎಂದು ವಿವರಿಸಿದರು. ಇದನ್ನೂ ಓದಿ: ಹಿಂದೂಗಳ ಮೇಲೆ ಲಾಠಿಚಾರ್ಜ್ ಯಾಕೆ? ಕಲ್ಲೆಸೆದವರ ಮೇಲೆ ಪೊಲೀಸರು ಪೌರುಷ ತೋರಿಸಲಿ – ಅಶ್ವಥ್ ನಾರಾಯಣ
ನಮ್ಮ ರಾಜ್ಯದಲ್ಲಿ ಗಣಪತಿ ಮೆರವಣಿಗೆ ಮಾಡಲು ವಿರೋಧವಿದೆ. ಕೆಲವು ಮುಸಲ್ಮಾನ ಗೂಂಡಾಗಳು ಗಣಪತಿಯ ಮೆರವಣಿಗೆ ಮೇಲೆ ಕಲ್ಲನ್ನು ಎಸೆದಿದ್ದಾರೆ. ಆ ಗೂಂಡಾಗಳು ಯಾರು? ಮದ್ದೂರಿನ ಕೆಮ್ಮಣ್ಣ ಕಾಲುವೆ ಸರ್ಕಲ್‌ನಲ್ಲಿ ಪೊಲೀಸ್ ಲಾಠಿಚಾರ್ಜ್ ಮಾಡಿದ್ದಾರೆ. ಕಲ್ಲು ಎಸೆದ 21 ಜನರನ್ನು ಬಂಧಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಇನ್ನೂ ಅನೇಕ ವ್ಯಕ್ತಿಗಳು ಈ ಕೃತ್ಯದಲ್ಲಿ ಇದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಮದ್ದೂರು ಗಲಾಟೆ | ನನ್ನ ಪ್ರಕಾರ ತಪ್ಪು ಮಾಡಿಲ್ಲ, ಬಿಜೆಪಿ-ಜೆಡಿಎಸ್ ಪ್ರಚೋದನೆ: ಸಿದ್ದರಾಮಯ್ಯ
ಈ ರೀತಿ ದೊಂಬಿ, ಗಲಾಟೆ ಮಾಡುವ ಮತ್ತು ಕಲ್ಲು ಎಸೆಯುವ ಪುಂಡರು, ಪೋಕರಿಗಳು ಯಾರು ಇದ್ದಾರೆ ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ಕಾಂಗ್ರೆಸ್ ಸರ್ಕಾರ ನಮ್ಮ ಸರ್ಕಾರ ಎಂದು ಹೇಳುತ್ತಾರೆ. ಇಂದು ಅವರನ್ನು ಬಂಧಿಸಿದರೆ ನಾಳೆ ಅವರನ್ನು ಬಿಡುಗಡೆ ಮಾಡಿಕೊಂಡು ಹೋಗುತ್ತಾರೆ. ಹೆಚ್ಚು ಎಂದರೆ ಕೇಸ್ ದಾಖಲಿಸಬಹುದು. ಈ ಕೇಸುಗಳನ್ನು ಕಾಂಗ್ರೆಸ್ ಸರ್ಕಾರ ತೆಗೆದು ಹಾಕುತ್ತದೆ ಎಂದು ದೂರಿದರು. ಕಾಂಗ್ರೆಸ್ ತುಷ್ಟೀಕರಣ ನೀತಿಯನ್ನು ಅನುಸರಿಸಿ ಟಿಪ್ಪು ಸುಲ್ತಾನನ ಆಡಳಿತವನ್ನು ನಡೆಸುತ್ತಿದೆ. ಟಿಪ್ಪುಸುಲ್ತಾನನ ಆಡಳಿತವು ಈ ರೀತಿ ಇರಲಿಲ್ಲ. ಆ ರೀತಿಯ ಒಂದು ಅಟ್ಟಹಾಸದ ದರ್ಬಾರ್ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಸರ್ಕಾರದ ಓಲೈಕೆ ರಾಜಕಾರಣವೇ ಮದ್ದೂರು ಗಲಭೆಗೆ ಕಾರಣ: ಬಸವರಾಜ ಬೊಮ್ಮಾಯಿ ಕಿಡಿ
ಹಮಾರಾ ಗವರ್ನ್ಮೆಂಟ್ ಹೇ, ಮಾರೋ ಎಂದು ಹೇಳಿ ಎಲ್ಲ ಮನೆಗಳಲ್ಲಿ ಮಾತನಾಡಿಕೊಂಡು ಪೂರ್ವಯೋಜಿತವಾಗಿ ದಾಳಿ ಮಾಡಿದ ಗೂಂಡಾಗಳ ಗುಂಪಿನ ಗಲಾಟೆಯನ್ನು ಸಣ್ಣ ಗಲಾಟೆ ಎಂದು ಕಾಂಗ್ರೆಸ್ ಸರ್ಕಾರ ಹೇಳುತ್ತಿದೆ. ಸರ್ಕಾರದ ಪ್ರಕಾರ ದೊಡ್ಡ ಗಲಾಟೆಯಾಗಬೇಕೆ? ಬಹಳ ದೊಡ್ಡ ಗಲಾಟೆ ಆದರೆ ಮಾತ್ರ ಈ ಸರ್ಕಾರ ಕ್ರಮಕೈಗೊಳ್ಳುತ್ತದೆಯೇ? ನಾಚಿಕೆಯಾಗಬೇಕು ಈ ಸರ್ಕಾರಕ್ಕೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಕೋರರ ಮೇಲಿನ ಕೇಸ್ ಹಿಂಪಡೆದಿದ್ದಕ್ಕೆ ಬಾಲ ಬಿಚ್ಚಿದ್ದಾರೆ: ಪ್ರತಾಪ್ ಸಿಂಹ
ಚಿತ್ರದುರ್ಗ ಜಿಲ್ಲೆಯಲ್ಲಿ ಡಿಜೆ ಹಾಕುವುದಕ್ಕೆ ಅನುಮತಿ ನೀಡುವುದಿಲ್ಲವೆಂದು ಹೇಳಿದ್ದಾರೆ. ಡಿಜೆ ಹಾಕುವುದಕ್ಕೆ ಏಕೆ ಸರ್ಕಾರ ಅನುಮತಿ ನೀಡುವುದಿಲ್ಲ? ಸರ್ಕಾರ ಮುಸಲ್ಮಾನರ ಹಬ್ಬಗಳಿಗೆ ನೀಡುವ ಅನುಮತಿ ಹಿಂದೂಗಳ ಹಬ್ಬಕ್ಕೆ ಏಕೆ ನೀಡುವುದಿಲ್ಲ? ಎಬಿವಿಪಿ ವಿದ್ಯಾರ್ಥಿನಿ ಮೇಲೆ, ಯುವಕರ ಮೇಲೆ ಲಾಠಿ ಪ್ರಹಾರ ಮಾಡಿದ್ದಾರೆ. ಸಿದ್ದರಾಮಯ್ಯನವರ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮದ್ದೂರು ಘಟನೆ ನೋಡಿದ್ರೆ ರಾಜ್ಯದಲ್ಲಿ `ಮೊಘಲ್ ಪ್ರೇರಣೆಯ’ ಆಡಳಿತದಂತೆ ಭಾಸವಾಗುತ್ತಿದೆ – ಬಿವೈವಿ ಕಿಡಿ
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿದವರ ಮೇಲೆ ಕ್ರಮ ತೆಗೆದುಕೊಳ್ಳುವುದಿಲ್ಲ. ಹುಬ್ಬಳ್ಳಿಯಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿರುವಂತಹ ಮುಸಲ್ಮಾನ ಗೂಂಡಾಗಳ ಮೇಲಿರುವ ಕೇಸುಗಳನ್ನು ತೆಗೆದುಹಾಕಿದೆ ಈ ಕಾಂಗ್ರೆಸ್ ಸರ್ಕಾರ. ರಾಜ್ಯದಲ್ಲಿರುವ ಕೆಲವು ಮುಸಲ್ಮಾನ ಗೂಂಡಾಗಳು ರಾಜ್ಯದಲ್ಲಿ ಮತ್ತು ದೇಶದಲ್ಲಿ ಏನು ಮಾಡಿದರೂ ನಡೆಯುತ್ತದೆ ಅನ್ನುವಂತಹ ಧೋರಣೆ ಹೊಂದಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ನಾಳೆ ಮದ್ದೂರು ಸ್ವಯಂ ಪ್ರೇರಿತ ಬಂದ್‌ಗೆ ಕರೆ – ಹಿಂದೂ ಮುಖಂಡರ ತೀರ್ಮಾನ