ಬೆಂಗಳೂರು: ಸ್ಪೀಕರ್ ಯುಟಿ ಖಾದರ್ (UT Khader) ಮೇಲಿನ ಭ್ರಷ್ಟಾಚಾರ ಆರೋಪದ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆ ಆಗಲಿ ಎಂದು ಮಾಜಿ ಸ್ಪೀಕರ್, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಪುನರುಚ್ಚಾರ ಮಾಡಿದ್ದಾರೆ.
ಸ್ಪೀಕರ್ ಖಾದರ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಯುಟಿ ಖಾದರ್ ಅವರು ಆಡಳಿತ ಸುಧಾರಣೆ ಭಾಗವಾಗಿ ಭ್ರಷ್ಟಾಚಾರದ ಪ್ರಕರಣ ಆಗಿದೆ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗ್ತಿದೆ. ಹೀಗಾಗಿ ನ್ಯಾಯಾಂಗ ತನಿಖೆಗೆ ವಹಿಸುವಂತೆ ನಾನು ಒತ್ತಾಯ ಮಾಡಿದ್ದೇನೆ. ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಲಿ ಎಂದಿದ್ದಾರೆ.ಇದನ್ನೂ ಓದಿ: ದಾಖಲಾತಿ ಇಟ್ಟುಕೊಂಡು ಬಿಜೆಪಿಯವ್ರು ಆರೋಪ ಮಾಡಲಿ – ಖಾದರ್ ಪರ ರಾಮಲಿಂಗಾರೆಡ್ಡಿ ಬ್ಯಾಟಿಂಗ್
ಸ್ಪೀಕರ್ ಸ್ಥಾನ ಸಂವಿಧಾನ ಬದ್ಧವಾಗಿ ಗೌರವದ ಪೀಠದ ಘನತೆ-ಗೌರವಕ್ಕೆ ಚ್ಯುತಿ ಆಗ್ತಿದೆ. ಈಗಲೂ ನಾನು ಹೇಳ್ತೀನಿ ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಲಿ. ತನಿಖೆ ಆಧಾರದಲ್ಲಿ ಯುಟಿ ಖಾದರ್ ಅವರು ಎಲ್ಲಾ ಆರೋಪದಿಂದ ಮುಕ್ತರಾಗಲಿ ಎಂದು ಆಶಿಸುತ್ತೇನೆ. ನ್ಯಾಯಾಧೀಶರ ತನಿಖೆ ಆದಾಗ ನ್ಯಾಯಾಧೀಶರು ಅಪೇಕ್ಷೆಪಟ್ಟರೆ ದಾಖಲಾತಿ ಕೊಡುವ ಬಗ್ಗೆ ನಾವು ನೋಡ್ತೀವಿ ಎಂದು ಹೇಳಿದ್ದಾರೆ.
ಕಾಗೇರಿ ಅವರು ಮಾಡಿರುವ ಆರೋಪ ಮಾಜಿ ಸ್ಪೀಕರ್‌ಗಳಿಗೆ ಮಾಡ್ತಿರೋ ಅಪಮಾನ ಎಂಬ ಖಾದರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಭಿಪ್ರಾಯಗಳು ಹೇಳೋಕೆ ನಮಗೆ ಸ್ವಾತಂತ್ರ‍್ಯ ಇದೆ.ನಾನು ಹೇಳೋದು ಹಾಲಿ ನ್ಯಾಯಾಧೀಶರಿಂದ ತನಿಖೆ ಆಗಲಿ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ನಾನು ಯಾವ್ದೇ ಭ್ರಷ್ಟಾಚಾರ ಮಾಡಿಲ್ಲ, ಬಿಜೆಪಿಯವರು ದಾಖಲೆ ಕೊಟ್ಟರೆ ಪರಿಶೀಲಿಸ್ತಿನಿ – ಯು.ಟಿ. ಖಾದರ್

