ಬೆಂಗಳೂರು: ಆಳಂದ ಕ್ಷೇತ್ರದಲ್ಲಿ ವೋಟ್ ಚೋರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೇ ತಪ್ಪು ಮಾಡಿದ್ದರೂ ಸರ್ಕಾರ ಅವರ ಮೇಲೆ ಕ್ರಮ ತೆಗೆದುಕೊಳ್ಳಲಿ ಎಂದು ಬಿಜೆಪಿ (BJP) ಎಂಎಲ್‌ಸಿ ರವಿಕುಮಾರ್ (MLC Ravikumar) ತಿಳಿಸಿದ್ದಾರೆ.
ಆಳಂದದಲ್ಲಿ ವೋಟ್ ಚೋರಿ ಪ್ರಕರಣ ಹಾಗೂ 80 ರೂ.ಗೆ ವೋಟ್ ಡಿಲೀಟ್ ಮಾಡೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರವೇ ಇದೆ. ಅವರದ್ದೇ ಗೃಹ ಇಲಾಖೆ ಇದೆ. ಎಸ್‌ಐಟಿ ತನಿಖೆ ನಡೆಸಲಿ. ತಪ್ಪು ಯಾರದ್ದೇ ಇದ್ದರೂ ಕ್ರಮ ಆಗಲಿ ಎಂದಿದ್ದಾರೆ.ಇದನ್ನೂ ಓದಿ: ಪಿಡಿಪಿಎಸ್ ಅಡಿ ಈರುಳ್ಳಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್
ಈಗ ಯಾರು ಚುನಾಯಿತರಾಗಿದ್ದಾರೆ ಅವರ ತನಿಖೆಯೂ ಆಗಲಿ. ಈಗ ಅದೇನೋ ನಕಲಿ ಆಧಾರ್ ಕಾರ್ಡ್ ಸಿಕ್ಕಿದೆ ಅಂತಿದ್ದಾರೆ. ಅದರ ಬಗ್ಗೆಯೂ ತನಿಖೆ ಆಗಲಿ. ತನಿಖೆ ಮಾಡಿ ಯಾರೇ ತಪ್ಪು ಮಾಡಿದರೂ ಕ್ರಮ ತೆಗೆದುಕೊಳ್ಳಿ ಯಾರು ಬೇಡ ಅಂದಿದ್ದಾರೆ. ನಮಗೆ ಮೊದಲು ರಾಜ್ಯದ ಅಭಿವೃದ್ಧಿ ಮಾಡಲಿ. ಈ ಉತ್ತರಾಧಿಕಾರಿ ಚರ್ಚೆ ಬಿಟ್ಟು ಅಭಿವೃದ್ಧಿ ಕೆಲಸ ಮಾಡಲಿ ಎಂದು ಸರ್ಕಾರಕ್ಕೆ ತಿವಿದಿದ್ದಾರೆ.

