ದಾವಣಗೆರೆ: 40 ಪರ್ಸೆಂಟ್ ಕಮಿಷನ್ (40 Percent Commission) ಬಗ್ಗೆ ಲೋಕಾಯುಕ್ತದಲ್ಲಿ (Karnataka Lokayukta) ತನಿಖೆಯಾಗಬೇಕು ಎಂದರೆ ತನಿಖೆಯಾಗಲಿ ಎಂದು ಸಚಿವ ಬಿ.ಶ್ರೀರಾಮುಲು (SriRamulu) ಹೇಳಿದ್ದಾರೆ.
ದಾವಣಗೆರೆ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದಲ್ಲಿ ಸರ್ಕಾರಿ ಬಸ್ ನಿಲ್ದಾಣ ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಇದನ್ನೂ ಓದಿ: ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಕ್ಕಿಲ್ಲ ಅನ್ನೋ ನೋವಿದೆ, ಆದ್ರೆ ನಾನು ಹಿಂದೆ ಸರಿಯೋಲ್ಲ: ಶ್ರೀ ರಾಮುಲು
Advertisement
Advertisement
40 ಪರ್ಸೆಂಟ್ ಕಮಿಷನ್ ತನಿಖೆ ನಡೆಸುವಂತೆ ಸಿದ್ದರಾಮಯ್ಯ (Siddaramaiah) ಒತ್ತಾಯ ಹೇರಿದ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಕನ್ನಡಕ ಸರಿಯಾಗಿ ಹಾಕಿಕೊಂಡು ನೋಡಲಿ. ಯಾರನ್ನು ಪಕ್ಕದಲ್ಲಿ ಇಟ್ಟುಕೊಂಡು ಪೇ ಸಿಎಂ (PayCm) ಎಂದು ಹೋರಾಟ ಮಾಡ್ತಾ ಇದ್ದಾರೆ ನೋಡಿಕೊಳ್ಳಲಿ. ಅವರ ಪಕ್ಷದ ಡಿಕೆ ಶಿವಕುಮಾರ್ (Dk Shivakumar) ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗಿ ಬೇಲ್ ಮೇಲೆ ಇರುವ ವ್ಯಕ್ತಿ. ರಾಹುಲ್ ಗಾಂಧಿ (Rahul Gandhi) ಕೂಡ ಬೇಲ್ ಮೇಲೆ ಇರುವವರು ಎಂದು ಟಕ್ಕರ್ ನೀಡಿದ್ದಾರೆ.
Advertisement
Advertisement
ಅಂಥವರನ್ನ ಪಕ್ಕದಲ್ಲಿ ಇಟ್ಟುಕೊಂಡು ಪೇ ಸಿಎಂ (PayCm) ಅಭಿಮಾನ ಮಾಡ್ತಾ ಇದ್ದಾರೆ. ಅವರಂತೆ ನಾನು ಕರುಣಾಕರ್ ರೆಡ್ಡಿ, ಬೊಮ್ಮಯಿಯವರು ಜೈಲಿಗೆ ಹೋಗಿ ಬಂದಿಲ್ಲ. ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರವಾಗದೇ ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದೇವೆ. ಲೋಕಾಯುಕ್ತದಲ್ಲಿ ತನಿಖೆಯಾಗಬೇಕು ಎಂದರೆ ತನಿಖೆಯಾಗಲಿ. ಯಾರು ಬೇಡ ಅನ್ನುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ಏರುಪೇರು: ಪ್ರತಿಷ್ಠಿತ ಆಸ್ಪತ್ರೆಗೆ ದಾಖಲು
ಭಾರತ್ ಜೋಡೋ ಯಾತ್ರೆ (Bharat Jodo Yatra) ಬಗ್ಗೆ ವ್ಯಂಗ್ಯ ಮಾಡಿದ ಶ್ರೀರಾಮುಲು, ಭಾರತ್ ಜೋಡೋ ಮೂಲಕ ಬೃಹತ್ ಸಮಾವೇಶ ಮಾಡಿ ಇತಿಹಾಸ ಸೃಷ್ಠಿ ಮಾಡಲು ರಾಹುಲ್ ಗಾಂಧಿ ಹೊರಟಿದ್ದಾರೆ. ಅವರು ಹೆಜ್ಜೆ ಇಟ್ಟಲ್ಲೆಲ್ಲಾ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಕಾಲಿಟ್ಟ ಕಡೆಯೆಲ್ಲಾ ಕಾಂಗ್ರೆಸ್ ಪಕ್ಷ ಮಾಯವಾಗುತ್ತಿದೆ. ಇದು ಅವರು ಸೃಷ್ಠಿ ಮಾಡ್ತಾ ಇರೋ ಇತಿಹಾಸ ಎಂದು ವ್ಯಂಗ್ಯವಾಡಿದ್ದಾರೆ.
ಈಗ ಪಾದಯಾತ್ರೆ ಮಾಡುತ್ತಿರುವ ತಮಿಳುನಾಡು, ಕೇರಳ ಕಡೆಗಳಲ್ಲಿ ಕಾಂಗ್ರೆಸ್ (Congress) ಮಟ್ಯಾಶ್ ಆಗ್ತಿದೆ. ಬಹುಶಃ ಬಳ್ಳಾರಿ ಜಿಲ್ಲೆಗಳಲ್ಲೂ ಕಾಂಗ್ರೆಸ್ ಅದೇ ಪರಿಸ್ಥಿತಿಗೆ ಬರುತ್ತೆ. ಈಗ ಭಾರತ್ ಜೋಡೋ ಯಾತ್ರೆ ಮಾಡ್ತಾ ಇದ್ದಾರೆ. ಭಾರತದ ಯಾವ ಭಾಗ ತೆಗೆದು ಯಾವ ಭಾಗಕ್ಕೆ ಜೋಡಿಸುತ್ತಾರೋ ಗೊತ್ತಾಗುತ್ತಿಲ್ಲ. ಆದರೆ ಮೋದಿ ನೇತೃತ್ವದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರೋದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.