ಶ್ರೀನಗರ: ಲಷ್ಕರ್-ಎ-ತೊಯ್ಬಾ ಭಯೋತ್ಪಾದಕನನ್ನು ಸದೆಬಡಿಯುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದೆ.
ಜಮ್ಮು-ಕಾಶ್ಮೀರದ ಪಾಲ್ಪೋರಾದಲ್ಲಿ ಭಾನುವಾರ ಸಂಜೆ ಭದ್ರತಾ ಪಡೆ ಕಾರ್ಯಾಚರಣೆ ಮಾಡಲಾಯಿತು. ಈ ವೇಳೆ ಎನ್‍ಕೌಂಟರ್‌ನಲ್ಲಿ ಇಬ್ಬರು ಜಮ್ಮು-ಕಾಶ್ಮೀರ ಪೊಲೀಸ್ ಸಿಬ್ಬಂದಿಯ ಹತ್ಯೆಯಲ್ಲಿ ಭಾಗಿಯಾಗಿದ್ದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ.
Advertisement
Advertisement
ಆದಿಲ್ ಪರ್ರೆ ಎಂದು ಗುರುತಿಸಲಾದ ಭಯೋತ್ಪಾದಕನು ಸಂಗಮ್‍ನಲ್ಲಿ ಗುಲಾಮ್ ಹಸನ್ ದಾರ್ ಮತ್ತು ಸೌರಾದಲ್ಲಿ ಸೈಫುಲ್ಲಾ ಖಾದ್ರಿ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದ. ಇದನ್ನೂ ಓದಿ: 2 ವಾರದಿಂದ ಸಿಕ್ಕಿಲ್ಲ ಸೈನಿಕರು – ಮುಂದುವರಿದ ಶೋಧಕಾರ್ಯ
Advertisement
A chance #encounter started at Kreesbal Palpora Sangam area of #Srinagar with #terrorists and a small team of #SrinagarPolice.@JmuKmrPolice
— Kashmir Zone Police (@KashmirPolice) June 12, 2022
Advertisement
ಈ ಕುರಿತು ಟ್ವೀಟ್ ಮಾಡಿದ ಅಧಿಕಾರಿಗಳು, ಸಂಗಮ್‍ನಲ್ಲಿ 02 ಜೆಕೆಪಿ ಸಿಬ್ಬಂದಿ ಘ್ ಹಸನ್ ದಾರ್ ಮತ್ತು ಅಂಚಾರ್ ಸೌರಾದಲ್ಲಿ ಸೈಫುಲ್ಲಾ ಖಾದ್ರಿ ಮತ್ತು 9 ವರ್ಷದ ಬಾಲಕಿ ಮೇಲೆ ದಾಳಿ ನಡೆದಿತ್ತು. ಈ ದಾಳಿ ವೇಳೆ 02 ಜೆಕೆಪಿ ಸಿಬ್ಬಂದಿಯ ಹತ್ಯೆಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕ ಆದಿಲ್ ಪರ್ರೆನನ್ನು ಎನ್‍ಕೌಂಟರ್ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.