ಚಾಮರಾಜನಗರ: ನಾವು ಬೇರೆ ಬೇರೆ ಉತ್ಸವಗಳನ್ನು ಕೇಳಿದ್ದೇವೆ. ಇನ್ನು ಮೇಲೆ ಒಂಟಿಕೊಪ್ಪಲ್ ಪಂಚಾಂಗದಲ್ಲಿ ಸಿದ್ದರಾಮೋತ್ಸವವನ್ನು ಸೇರಿಸಬೇಕು ಎಂದು ಚಾಮರಾಜನಗರದ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಜಾತಿಯವರು ಶಕ್ತಿ ಪ್ರದರ್ಶನ ಮಾಡಬೇಕು ಎಂದು ಹೊರಟಿದ್ದರು. ಆದರೆ ಅದಕ್ಕೆ ಅವರ ಪಕ್ಷದಲ್ಲಿ ವಿರೋಧ ಬಂತು. ಹೀಗಾಗಿ ಪಕ್ಷದ ವತಿಯಿಂದ ಕಾರ್ಯಕ್ರಮ ಮಾಡಬೇಕು ಎಂದು ದೊಡ್ಡ ಸಮಿತಿ ರಚಿಸಿಕೊಂಡಿದ್ದಾರೆ. ಇವೆಲ್ಲವನ್ನೂ ಪ್ರಚಾರಕ್ಕೋಸ್ಕರ ಮಾಡುತ್ತಿದ್ದಾರೆ. ಇನ್ನು ಏನೇನು ಆಟ ಆಡಬೇಕು ಆಡಲಿ ಎಂದು ಕುಹಕವಾಡಿದರು. ಇದನ್ನೂ ಓದಿ: ವಿಶ್ವ ಅಥ್ಲೆಟಿಕ್ಸ್ – ಚಿನ್ನ ಗೆದ್ದು ಭಾರತಕ್ಕೆ ಹೆಮ್ಮೆ ತಂದ 94ರ ಅಜ್ಜಿ
Advertisement
Advertisement
ಮೋದಿ ಸರ್ಕಾರ ತೊಲಗಿದರೆ ದೇಶಕ್ಕೆ ಒಳ್ಳೆಯದು ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಶ್ರೀನಿವಾಸ ಪ್ರಸಾದ್, ಮೋದಿ ಜನಾದೇಶದ ಮೇಲೆ ಅಧಿಕಾರಕ್ಕೆ ಬಂದಿದ್ದಾರೆ. ಸಿದ್ದರಾಮಯ್ಯನನ್ನು ಕೇಳಿಕೊಂಡು ಬಂದಿಲ್ಲ. ಸಿದ್ದರಾಮಯ್ಯ ಪ್ರಚಾರಕ್ಕೋಸ್ಕರ ಕಿರುಚಾಡಿ ಮೈ ಪರಚಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: 5 ಎಕ್ರೆ ಜಾಗಕ್ಕೆ ಕಿರಿಕ್ – ಚಂದ್ರಶೇಖರ್ ಗುರೂಜಿ ಹತ್ಯೆ ಕೇಸ್‌ಗೆ ಮತ್ತೊಂದು ಟ್ವಿಸ್ಟ್
Advertisement
Advertisement
ನಿಮ್ಮ ಸ್ಥಿತಿ ಏನು ಎಂದು ಅರ್ಥ ಮಾಡಿಕೊಂಡು ಮಾತನಾಡಿ. ನೀವು 36 ಸಾವಿರ ಮತಗಳಿಂದ ಸೋತಾಯ್ತು. 17 ಜನರನ್ನು ಕಳುಹಿಸಿ ಸರ್ಕಾರವನ್ನು ಕೆಡವಿದ್ದಾಯ್ತು. 28 ಕ್ಷೇತ್ರಗಳಲ್ಲಿ ಒಂದೇ ಒಂದು ಕ್ಷೇತ್ರ ಗೆದ್ದಿರುವುದು. ಇನ್ನಾದರೂ ಹೀಗೆ ಮಾತನಾಡುವುದನ್ನು ಬಿಡಪ್ಪಾ ಎಂದು ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.