ತಾಕತ್ತಿದ್ರೆ ಮುಸ್ಲಿಮರ ಸುನ್ನತ್ ನಿಲ್ಲಿಸಿ – ಸಿಎಂಗೆ ಈಶ್ವರಪ್ಪ ಸವಾಲು

Public TV
1 Min Read
Eshwarappa cm

ಮಂಗಳೂರು: ಹಿಂದೂಗಳ ಮುದ್ರಾಧಾರಣೆ ಮತ್ತು ತ್ರಿಶೂಲಧಾರಣೆಯನ್ನು ಹಿಂಸೆ ಎನ್ನುತ್ತಾರೆ. ತಾಕತ್ತಿದ್ದರೆ ಮುಸ್ಲಿಮರು ಮಾಡುವ ಸುನ್ನತ್ ನಿಲ್ಲಿಸಿ ಎಂದು ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸಿಎಂ ಸಿದ್ದರಾಮಯ್ಯರಿಗೆ ಸವಾಲು ಹಾಕಿದ್ದಾರೆ.

ಇಂದು ಬಂಟ್ವಾಳದಲ್ಲಿ ನಡೆದ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಮಾತನಾಡಿದ ಈಶ್ವರಪ್ಪ, ಸಿದ್ದರಾಮಯ್ಯರ ಮೈಯಲ್ಲಿ ಕನಕದಾಸರ ರಕ್ತ ಹರಿಯುತ್ತಿಲ್ಲ. ಅವರ ಮೈಯಲ್ಲಿ ಹರಿಯುತ್ತಿರುವುದು ಟಿಪ್ಪುವಿನ ರಕ್ತ. ಹಾಗಾಗಿ ಮೈಯನ್ನು ಕುಲುಕಿಸಿ ರಾಜ್ಯದಲ್ಲಿ ಟಿಪ್ಪು ಹೆಸರಲ್ಲಿ ಬೆಂಕಿ ಹಚ್ಚುತ್ತಿದ್ದಾರೆ. ಬೇಕಾದರೆ ಸಿದ್ದರಾಮಯ್ಯ ತಮ್ಮ ಹೆಸರನ್ನು ಟಿಪ್ಪು ಎಂದು ಇಟ್ಟುಕೊಳ್ಳಲಿ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.

Eshwarappa

ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಬಿಜೆಪಿಗೆ ಆಹ್ವಾನಿಸಲಾಗಿದೆ ಎಂಬುದು ಕೇವಲ ವದಂತಿ. ಡಿಕೆಶಿ ಅವರಂತಹ ಭ್ರಷ್ಟರನ್ನು ಬಿಜೆಪಿಗೆ ಸೇರಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಇವರೆಲ್ಲಾ ಪ್ರಭಾಕರ್ ಭಟ್ ರನ್ನು ಬಂಧಿಸುವ ಪ್ಲಾನ್ ಮಾಡಿದ್ದರು. ಒಂದು ವೇಳೆ ಪ್ರಭಾಕರ್ ಭಟ್ ರ ರೋಮವನ್ನು ಮುಟ್ಟಿದರೆ ರಾಜ್ಯದ ಜನತೆ ಸುಮ್ಮನೆ ಇರೋದಿಲ್ಲ ಅಂದ್ರು.

ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಗೋಹತ್ಯೆ ನಿಷೇಧವನ್ನು ಜಾರಿಗೆ ತರಲಾಗುವುದು ಎಂದು ಈಶ್ವರಪ್ಪ ಹೇಳಿದರು.

DOV8LiFU8AARhsh

DOV8LeCVAAAIMcQ

cm siddu

DOQhDiMUEAAY8Ay

DOQhDiCU8AEkES7

DOQhDiGUIAEmNMF

Share This Article
Leave a Comment

Leave a Reply

Your email address will not be published. Required fields are marked *