– ಪ್ರಜ್ವಲ್ ರೇವಣ್ಣ ಈಗ ಕಾಂಗ್ರೆಸ್ ಸಂಸದ
ಬೆಂಗಳೂರು: ಸಿದ್ದರಾಮಯ್ಯ (Siddaramaiah) ಅಧಿಕಾರ ಬಿಟ್ಟು ಕೆಳಗೆ ಇಳಿಯಲಿ. 24 ಗಂಟೆಗಳಲ್ಲಿ ಪ್ರಜ್ವಲ್‌ನನ್ನು (Prajwal Revanna) ಕಸ್ಟಡಿಗೆ ತೆಗೆದುಕೊಳ್ಳುತ್ತೇನೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಸವಾಲು ಹಾಕಿದರು.
Advertisement
ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಕೆಶಿ ಹೇಳೋದನ್ನ ಯಾರೂ ಗಂಭೀರವಾಗಿ ತಗೋಬೇಡಿ. ರಾಮೇಶ್ವರಂ ಕೆಫೆ ಬಾಂಬ್ ಬ್ಯುಸಿನೆಸ್ ಹಿನ್ನೆಲೆ ಇದೆ ಅಂದರು. ಅದು ಸುಳ್ಳಲ್ವಾ? ಡಿಕೆಶಿ ಮಾತಿಗೆ ನಯಾ ಪೈಸೆ ಇಲ್ಲ. ಕುಕ್ಕರ್ ಬಾಂಬ್ ಹಾಕಿದವನನ್ನ ಬ್ರದರ್ ಅಂದ್ರು. ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು. ಅಮಿತ್ ಶಾ ಪ್ರಜ್ವಲ್‌ಗೆ ಟಿಕೆಟ್ ಕೊಡಬೇಡಿ ಅಂದಿದ್ದು ಹೇಗೆ ಗೊತ್ತಾಯ್ತು ಇವರಿಗೆ? ಫೋನ್ ಟ್ಯಾಪ್ ಮಾಡಿದ್ದಾರಾ ಡಿಕೆಶಿ? ಅಮಿತ್ ಶಾ ಫೋನ್ ಟ್ಯಾಪ್ ಮಾಡಿದ್ದಾರಾ ಡಿಕೆಶಿ? ಮೂರು ಸ್ಥಾನ ಜೆಡಿಎಸ್‌ಗೆ ಕೊಡಲಾಗಿತ್ತು. ಪ್ರಜ್ವಲ್‌ಗೆ ಟಿಕೆಟ್ ಕೊಟ್ಟಿದ್ದು ಜೆಡಿಎಸ್ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಪ್ರಜ್ವಲ್ ಪ್ರಕರಣ ಮಾನವ ಕುಲಕ್ಕೆ ಕಳಂಕ ಎಂದ ನಿರ್ದೇಶಕ ಎಸ್.ನಾರಾಯಣ್
Advertisement
Advertisement
ಕಾನೂನಾತ್ಮಕವಾಗಿ ಪ್ರಜ್ವಲ್ ಈಗ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಸಂಸದ. 2019 ರಲ್ಲಿ ಬೀದಿ ಬೀದಿಗೆ ಹೋಗಿ ಪ್ರಜ್ವಲ್ ಪರ ಕಾಂಗ್ರೆಸ್‌ನವ್ರೂ ಮತ ಕೇಳಿದ್ರು. ಅವರು ಈಗ ಗೆದ್ದು ಬಂದರೆ ಆಗ ಎನ್‌ಡಿಎ ಅಭ್ಯರ್ಥಿ. ಆಗ ಬಿಜೆಪಿಗೆ ಮುಜುಗರ ಆಯ್ತೋ ಇಲ್ವೋ ಅಂತ ಪ್ರಶ್ನೆ ಬರುತ್ತೆ ಎಂದು ಡಿಕೆ ಶಿವಕುಮಾರ್‌ಗೆ ತಿರುಗೇಟು ನೀಡಿದರು.
Advertisement
ಪ್ರಜ್ವಲ್ ಪರಾರಿಗೆ ಕೇಂದ್ರ ಕಾರಣ ಅನ್ನೋ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಅಶೋಕ್, ಅಣ್ಣೋ ಸಿದ್ದರಾಮಣ್ಣ, ಹಾಸನದಿಂದ ಏರ್‌ಪೋರ್ಟ್ಗೆ ಪ್ರಜ್ವಲ್ ಹೋಗಲು ಬಿಟ್ಟಿದ್ದು ಯಾರು? ಹಾಸನ ಪೊಲೀಸರು, ಡಿಸಿ ಏನ್ ಮಾಡ್ತಿದ್ರು? ಹಾಸನದ ಮನೆಯಿಂದ ಏರ್‌ಪೋರ್ಟ್ಗೆ ಹೋಗಲು ಅವಕಾಶ ಬಿಟ್ಟಿದ್ದು ಕಾಂಗ್ರೆಸ್. ಹಾಸನ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಇಷ್ಟು ಗಡಿ ದಾಟಿ ಏರ್‌ಪೋರ್ಟ್ಗೆ ಹೋಗಿ ಜರ್ಮನಿಗೆ ಹೋದ್ರು ಪ್ರಜ್ವಲ್. ಇಲ್ಲಿಯವರೆಗೆ ಬಿಟ್ಟಿದ್ದು ಕಾಂಗ್ರೆಸ್ ಅಲ್ವಾ? ಇದು ನಿಮ್ಮ ಅಡ್ಜಸ್ಟ್ಮೆಂಟ್ ಅಲ್ವಾ? ಪ್ರಜ್ವಲ್‌ನನ್ನ ಹೋಗಲು ಬಿಟ್ಟಿದ್ದು ಮನೆಹಾಳರು ಕಾಂಗ್ರೆಸ್‌ನವ್ರು. ಆದ್ರೆ ಪ್ರಶ್ನೆ ಮಾಡ್ತಿರೋದು ಮೋದಿಗೆ, ಇದು ಸರಿನಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಧರ್ಮ ಎಳೆತಂದ ನಟಿ ಸ್ವರಾ ಭಾಸ್ಕರ್
ಪ್ರಜ್ವಲ್ ಚಲನವಲನಗಳ ಮಾಹಿತಿ ರಾಜ್ಯ ಸರ್ಕಾರಕ್ಕೆ ಇತ್ತು. ಓಡಿ ಹೋಗಲು ಬಿಟ್ಟಿದ್ದು ಕಾಂಗ್ರೆಸ್. ಪ್ರಜ್ವಲ್ ಹೋಗುವಾಗ ನೀವು ಕಡ್ಲೆಕಾಯಿ ತಿಂತಿದ್ರಾ? ಹೋಗಲು ಬಿಟ್ಟಿದ್ದು ನೀವು, ಕೇಳೋದು ಮೋದಿಯವರನ್ನಾ? ಪ್ರಜ್ವಲ್ ಪರಾರಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ಇಂಟಲಿಜೆನ್ಸ್ ಫೇಲ್ ಆಗಿದೆ. ನಿಮ್ಮ ವೈಫಲ್ಯ ಮುಚ್ಚಿಡಲು ಕೇಂದ್ರ ಬಿಜೆಪಿ ವಿರುದ್ಧ ಆರೋಪ ಮಾಡ್ತಿದೆ ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದರು.
ಪ್ರಜ್ವಲ್ ರೇವಣ್ಣ ಕಾಂಗ್ರೆಸ್ ಎಂಪಿ. ಅವರು ಇನ್ನೂ ನಮ್ಮ ಎಂಪಿ ಆಗಿಲ್ಲ. 2019 ರಲ್ಲಿ ನಿಮ್ಮ ಸಹಕಾರದಿಂದ ಪ್ರಜ್ವಲ್ ಗೆದ್ದಿದ್ದು. ನಮ್ಮ ಎಂಪಿ ಆಗಲು ಇನ್ನೂ ಒಂದು ತಿಂಗಳು ಕಾಲ ಇದೆ. ಈಗ ತಾಂತ್ರಿಕವಾಗಿ ಪ್ರಜ್ವಲ್ ಕಾಂಗ್ರೆಸ್ ಎಂಪಿ, ಆಗ ಜೆಡಿಎಸ್ ಜೊತೆ ಮೈತ್ರಿ ಮಾಡ್ಕೊಂಡಿದ್ದವರು ಕಾಂಗ್ರೆಸ್‌ನವ್ರು. ಜೋಡೆತ್ತು ಅಂತ ಹೇಳಿಕೊಂಡು ಪ್ರಜ್ವಲ್ ಪರ ಪ್ರಚಾರ ಮಾಡಿದ್ರು. ಪ್ರಜ್ವಲ್ ಗೆಲ್ಲಿಸಿದ್ದು ಕಾಂಗ್ರೆಸ್, ಈಗ ಉತ್ತರ ಕೊಡಬೇಕಾಗಿರೋದು ಸಹ ಕಾಂಗ್ರೆಸ್ ಎಂದು ಠಕ್ಕರ್ ಕೊಟ್ಟರು. ಇದನ್ನೂ ಓದಿ: ಸಂಕಷ್ಟದಿಂದ ಪಾರಾಗಲು ದೇವರ ಮೊರೆ ಹೋದ ರೇವಣ್ಣ; ಮನೆಯಲ್ಲೇ ಅಗ್ನಿಕುಂಡ ನಿರ್ಮಿಸಿ ಹೋಮ!
ಪ್ರಜ್ವಲ್ ಪ್ರಕರಣದಲ್ಲಿ ಬಿಜೆಪಿ ಕಠಿಣ ಕ್ರಮ ತಗೊಳ್ಳುತ್ತೆ. ಈ ದೇಶದ ಕಾನೂನಿಗೆ, ಸಂವಿಧಾನಕ್ಕೆ ಬೆಲೆ ಕೊಡ್ತೇವೆ. ಈ ಥರದ ಘಟನೆಗಳಿಗೆ ನಮ್ಮ ಬೆಂಬಲ ಇಲ್ಲ. ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.