ಇಸ್ಲಾಮಾಬಾದ್: ಇತ್ತೀಚೆಗಷ್ಟೇ ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಜವಾಬ್ದಾರಿಯನ್ನು ವಹಿಸಿಕೊಂಡ ಮಾಜಿ ಆಟಗಾರ ಮಿಸ್ಬಾ ಉಲ್ ಹಕ್, ಕಾಶ್ಮೀರದ ಕುರಿತ ಪತ್ರಕರ್ತನ ಪ್ರಶ್ನೆಗೆ ಗರಂ ಆಗಿದ್ದಾರೆ.
ಶ್ರೀಲಂಕಾ ವಿರುದ್ಧದ ಕ್ರಿಕೆಟ್ ಸರಣಿ ಆರಂಭಕ್ಕೂ ಮುನ್ನ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಿಸ್ಬಾ ಉಲ್ ಹಕ್ ಅವರಿಗೆ ಪತ್ರಕರ್ತನೊಬ್ಬ ಕಾಶ್ಮೀರದ ಕುರಿತು ಪ್ರಶ್ನೆ ಮಾಡಿದ್ದ.
Advertisement
Misbah-ul-Haq "the whole of Pakistan has sympathies with Kashmir – but let's talk cricket" #PAKvSL #Cricket pic.twitter.com/lAMW0c9Itd
— Saj Sadiq (@SajSadiqCricket) September 26, 2019
Advertisement
ಪುಲ್ವಾಮಾ ದಾಳಿಯ ಸಂದರ್ಭದಲ್ಲಿ ಟೀಂ ಇಂಡಿಯಾ ಆಟಗಾರರು ಸೇನೆಗೆ ಬೆಂಬಲ ನೀಡಲು ಆರ್ಮಿ ಕ್ಯಾಪ್ ಧರಿಸಿ ಪಂದ್ಯವಾಡಿದ್ದರು. ಸದ್ಯ ಪಾಕ್ ಕ್ರಿಕೆಟ್ ತಂಡದ ಕಾಶ್ಮೀರದ ಸಮಸ್ಯೆಯೊಂದಿಗೆ ನಿಲ್ಲಲು ಏನಾದರೂ ಪ್ಲಾನ್ ಮಾಡಲಾಗಿದೆಯಾ ಎಂದು ಪ್ರಶ್ನಿಸಿದ್ದ.
Advertisement
ಈ ಪ್ರಶ್ನೆಗೆ ಉತ್ತರಿಸಲು ಇಷ್ಟಪಡದ ಮಿಸ್ಬಾ, ನಮಗೇಕೆ ಕಾಶ್ಮೀರದ ವಿಚಾರದ ಕುರಿತು ಪ್ರಶ್ನೆ ಕೇಳುತ್ತಿದ್ದೀರಿ. ಇಲ್ಲಿ ಕೇವಲ ಕ್ರಿಕೆಟ್ ಸಂಬಂಧಿಸಿದ ಪ್ರಶ್ನೆಗಳನ್ನು ಮಾತ್ರ ಕೇಳಿ. ಕ್ರಿಕೆಟ್ ಬಗ್ಗೆ ಮಾತ್ರ ಮಾತನಾಡಲು ನಾವು ಇಲ್ಲಿ ಬಂದಿದ್ದೇವೆ ಎಂದಿದ್ದಾರೆ. ಬರೋಬ್ಬರಿ 10 ವರ್ಷಗಳ ಬಳಿಕ ಕರಾಚಿಯಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯವಾಡಲು ಸಿದ್ಧವಾಗಿತ್ತು. ಆದರೆ ಮಳೆಯ ಕಾರಣ ಟೂರ್ನಿ ಮೊದಲ ಪಂದ್ಯ ರದ್ದಾಗಿದೆ.
Advertisement
370ನೇ ವಿಧಿಯನ್ನು ರದ್ದು ಮಾಡಿದ ಬಳಿಕ ಪಾಕಿಸ್ತಾನ ಹಲವು ಕ್ರಿಕೆಟರ್ ಗಳು ಭಾರತದ ನಡೆಯ ವಿರುದ್ಧ ಟೀಕೆ ಮಾಡಿದ್ದರು. ಅಲ್ಲದೇ ಈ ಅಂಶವನ್ನು ಮುಂದಿಟ್ಟುಕೊಂಡು ವಿಶ್ವ ರಾಷ್ಟ್ರಗಳ ಗಮನವನ್ನು ಸೆಳೆಯಲು ಯತ್ನಿಸಿದ್ದ ಪಾಕ್‍ನ ಕುತಂತ್ರ ಕೂಡ ವಿಫಲವಾಗಿತ್ತು.