ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ಮಾಡುವವರನ್ನ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹೈಕಮಾಂಡ್ ನಾಯಕರಿಗೆ ಮನವಿ ಮಾಡಿದ್ದಾರೆ.
ಯತ್ನಾಳ್ ಟೀಂ ವಿರುದ್ಧ ಸಭೆ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಪಕ್ಷದ ವಿರೋಧ ಚಟುವಟಿಕೆ ಮಾಡುವವರನ್ನ ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಎಷ್ಟು ಪಾರ್ಟಿ ಬದಲಾವಣೆ ಮಾಡಿಕೊಂಡು ಬಂದರು ಇವತ್ತು ಮಾತಾಡುತ್ತಾರೆ. ಬಿಜೆಪಿ ಬಗ್ಗೆ ನಿಯತ್ತು ಇಲ್ಲದೇ ಜೆಡಿಎಸ್‌ಗೆ ಹೋಗಿದ್ದರು. ಯಡಿಯೂರಪ್ಪ ಅವರನ್ನ ಇಳಿಸಿ ಯಡಿಯೂರಪ್ಪ ಬೇರೆ ಪಕ್ಷ ಮಾಡಿದಾಗ ಬಿಜೆಪಿ ಪಕ್ಷ ನಡೆಸಲು ಆಗಲಿಲ್ಲ. ಪಕ್ಷ ಶಕ್ತಿ ಕಳೆದುಕೊಂಡಿತ್ತು. ಮತ್ತೆ ಯಡಿಯೂರಪ್ಪ ಬಂದರು ಅಧಿಕಾರಕ್ಕೆ ಮತ್ತೆ ಪಕ್ಷ ಬಂತು. ಇದು ಯಡಿಯೂರಪ್ಪನವರ ಶಕ್ತಿ. ಯಡಿಯೂರಪ್ಪ ಇನ್ನು ಶಕ್ತಿ ಉಳಿಸಿಕೊಂಡಿದ್ದಾರೆ. ವಿಜಯೇಂದ್ರ ಪಕ್ಷ ಸಂಘಟನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
Advertisement
ಎಲ್ಲರನ್ನು ಪದಾಧಿಕಾರಿಗಳನ್ನಾಗಿ ಮಾಡಲು ಸಾಧ್ಯವಿಲ್ಲ. ಪಾರ್ಟಿ ನಿಯಮಾನುಸಾರ ಯಾರನ್ನು ಮಾಡಲು ಸಾಧ್ಯವೋ ಅವರನ್ನು ಮಾಡುತ್ತಾರೆ. ಕಾಂಗ್ರೆಸ್ ರೀತಿ ದೊಡ್ಡದಾಗಿ ಪದಾಧಿಕಾರಿಗಳು ಮಾಡಲು ಆಗುವುದಿಲ್ಲ. ಕೇಂದ್ರದ ಸೂಚನೆ ಪ್ರಕಾರ ಮಾಡಿದ್ದೇವೆ. ಶಕ್ತಿ ಇರೋರು ಎಲ್ಲಿ ಇದ್ದರೆ ಏನು. ಅವರನ್ನ ಮಾಡಿದ್ರು, ಇವರನ್ನು ಮಾಡಿದ್ರು ಅಂದರೆ ಹೇಗೆ. ಸಮಯ ಅನುಕೂಲ, ಸಂದರ್ಭದಲ್ಲಿ ಪದಾಧಿಕಾರಿಗಳನ್ನ ಮಾಡುತ್ತಾರೆ. ನಾವು ಪಕ್ಷದ ಪರವಾಗಿ ನಿಲ್ಲುತ್ತೇವೆ. ವಿಜಯೇಂದ್ರ ಅಧ್ಯಕ್ಷರಾಗಿರೋವರೆಗೂ ನಾವು ಪಕ್ಷದ ಪರ ಇರುತ್ತೇವೆ. ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರಕ್ಕೆ ನಾನು ಆಕಾಂಕ್ಷಿ ಆಗಿದ್ದೆ. ಟಿಕೆಟ್ ಸಿಕ್ಕಿಲ್ಲ. ಆದರೆ ಪಕ್ಷ ಹೇಳಿತು ನಾವು ಪಕ್ಷದ ಕೆಲಸ ಮಾಡಿದೆವು. ಇದು ಪಕ್ಷ ನಿಷ್ಠೆ. ಪಕ್ಷ ವಿರೋಧಿ ಚಟುವಟಿಕೆ ಯಾರೇ ಮಾಡಿದರು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
Advertisement
ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಬೇಕು ಎಂದು ಹೇಳುವುದಕ್ಕೆ ಅವರೇನು ಹೈಕಮಾಂಡಾ? ಹೈಕಮಾಂಡ್ ಹೇಳಿದರೆ ವಿಜಯೇಂದ್ರ ಅಧ್ಯಕ್ಷರಾಗಿ ಇರೊದಿಲ್ಲ. ಈಗ ಯಾರು ಮಾತಾಡುತ್ತಿದ್ದಾರೆ ಅವರು ಮಾತಾಡೋದು ಜಾಸ್ತಿ ಕೆಲಸ ಕಡಿಮೆ. ವಿಜಯೇಂದ್ರ ಇಳಿಯಲ್ಲ. ಪಕ್ಷ ಕಟ್ಟುತ್ತಾರೆ. ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ. ಈಗಾಗಲೇ ಹೈಕಮಾಂಡ್ ಯಾರಿಗೆ ಸೂಚನೆ ಕೊಡಬೇಕೋ ಕೊಟ್ಟಿದೆ. ಯಾವುದೋ ಆರ್‌ಸಿಬಿ, ಎಲ್‌ಬಿಸಿ ಅಂತೆಲ್ಲ ಹೊರಟಿದ್ದಾರೆ. ಅದು ಹೇಗೆ ಮಾಡುತ್ತಾರೋ ಮಾಡಲಿ. ಹಿಂದೆ ಹೀಗೆ ಮಾಡಿದವರು ಕೈ ಸುಟ್ಟಿಕೊಂಡು ಮನೆಗೆ ಹೋದರು ಮತ್ತೆ ಅದೇ ಆಗುತ್ತೆ ಎಂದು ಯತ್ನಾಳ್ ಟೀಂ ವಿರುದ್ಧ ಕಟ್ಟಾ ವಾಗ್ದಾಳಿ ನಡೆಸಿದರು.
Advertisement