ಬೆಂಗಳೂರು: ಬಿಜೆಪಿಯವರು ವಿರೋಧ ಪಕ್ಷದಲ್ಲಿ ಇದ್ದು ಸರ್ಕಾರಕ್ಕೆ ಒಳ್ಳೆಯ ಸಲಹೆ ನೀಡಲಿ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹಾಗೂ ದೇಶದಲ್ಲಿ ಬಿಜೆಪಿ ಅವರು ಅಶಾಂತಿ ಮೂಡಿಸಬೇಕು. ಅಶಾಂತಿ ಮೂಡಿಸುವುದು ಬಿಟ್ಟರೆ ಅವರಿಗೆ ಏನೂ ಗೊತ್ತಿಲ್ಲ, ಜನರಿಗೆ ಸುಮ್ಮನೆ ಕನ್ಫ್ಯೂಸ್ ಮಾಡುತ್ತಿದ್ದಾರೆ. ಇದು ದೇಶದ ದೊಡ್ಡ ಸ್ವಾಭಿಮಾನದ ವಿಚಾರ. ಟಿಪ್ಪು ದೇಶಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ತ್ಯಾಗ ಮಾಡಿದವರು. ಈಗಾಗಲೇ ರಾಷ್ಟ್ರಪತಿ ಇದೇ ವಿಧಾನಸೌಧಕ್ಕೆ ಬಂದು ಟಿಪ್ಪು ಅವರನ್ನು ಶ್ಲಾಘನೆ ಮಾಡಿ ಯಾಕೆ ಇದನ್ನು ಮಾಡುತ್ತಿದ್ದೇವೆ ಅಂತ ಇಲ್ಲಿ ಪ್ರತಿಪಾದನೆ ಮಾಡಿದ್ದಾರೆ. ಇದು ದೇಶದ ಇತಿಹಾಸ ವಿಚಾರದಲ್ಲಿ ಇಂತಹ ರಾಜಕಾರಣ ಮಾಡುವುದು ಸರಿಯಲ್ಲ. ಶಾಂತಿ, ಪಾಲನೆ ಈ ದೇಶದ ಐಕ್ಯತೆ ಹಾಗೂ ಅಹಜತೆ. ಬಿಜೆಪಿ ಅವರು ಇದನ್ನು ಕಾಪಾಡಿಕೊಂಡು ಹೋಗಬೇಕು ಎಂದರು.
Advertisement
Advertisement
ಕುಮಾರಸ್ವಾಮಿ ಆರೋಗ್ಯದಲ್ಲಿ ಸರಿಯಿಲ್ಲ. ವೈದ್ಯರು ವಿಶ್ರಾಂತಿ ಪಡೆಯಲು ತಿಳಿಸಿದ್ದಾರೆ ಎಂದು ಅವರು ಮೊದಲೇ ಹೇಳಿದ್ದರು. ಡಿಸಿಎಂ ಪರಮೇಶ್ವರ್ ಅವರ ವಿಮಾನದಲ್ಲಿ ಹೆಚ್ಚು ಕಡಿಮೆಯಾಗಿದೆ. ಇಲ್ಲದಿದ್ದರೆ ಅವರು ಕಾರ್ಯಕ್ರಮಕ್ಕೆ ಬರುತ್ತಿದ್ದರು. ಸದ್ಯ ಸರ್ಕಾರದ ಒಬ್ಬ ವ್ಯಕ್ತಿಯಾಗಿ ನಾನು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಇಲ್ಲಿ ಕಾರ್ಯಕ್ರಮ ಮುಗಿದ ನಂತರ ರಾಮನಗರಕ್ಕೆ ಹೋಗಬೇಕಿದೆ. ಬಿಜೆಪಿ ಅವರು ಈ ರಾಜ್ಯದಲ್ಲಿ ಶಾಂತಿ ಭಂಗ ಉಂಟು ಮಾಡಬೇಡಿ ಎಂದು ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿಕೊಂಡರು.
Advertisement
ಚುನಾವಣೆಯಲ್ಲಿ ಒಬ್ಬರು ಗೆದ್ದರೆ, ಮತ್ತೊಬ್ಬರು ಸೋಲಲೇಬೇಕು. ನಾನು ಗೆದಿದ್ದೇನೆ ಎಂದು ಹಿಗ್ಗುವುದಕ್ಕೆ ತಯಾರಿಲ್ಲ. ನಾನು ಚುನಾವಣೆಯಲ್ಲಿ ಸೋತಿದ್ದೇನೆ. ನಾವು ಸ್ಪೋಟಿವ್ ಆಗಿ ಇರಬೇಕು. ವಿರೋಧ ಪಾರ್ಟಿಯವರು ಸರ್ಕಾರಕ್ಕೆ ಸಲಹೆ ನೀಡಬೇಕು. ಬಡವರಿಗೆ, ಜನರಿಗೆ ಇರುವ ಎಲ್ಲ ಸಮಸ್ಯೆಯನ್ನು ಬಗೆಹರಿಸಲು ಸಹಾಯ ಮಾಡಬೇಕು. ಜನರು ಆಶೀರ್ವಾದ ಮಾಡಿದಾಗ ಅವರು ಅಧಿಕಾರಕ್ಕೆ ಬರಲಿ. ನಾವು ಅವರಿಗೆ ಸಹಕಾರ ನೀಡುತ್ತೇವೆ. ಬೆಳಗ್ಗೆ, ಸಂಜೆ ರಾಜಕಾರಣ ಮಾಡುತ್ತಾ ಕುಳಿತರೆ ಇದರಿಂದ ಉಪಯೋಗ ಏನಿದೆ. ನಾವು ಏನಾದರೂ ತಪ್ಪು ಮಾಡಿದ್ದರೆ ಅವರು ಹೇಳಲಿ, ಬೇಕಾದರೆ ಗಲ್ಲು ಶಿಕ್ಷೆ ನೀಡಲಿ. ಎರಡೂ ಪಕ್ಷದ ಎಲ್ಲ ಶಾಸಕರಿಗೆ, ಸಂಸದರಿಗೆ ಜವಾಬ್ದಾರಿ ಇದೆ. ಜನರ ಹಿತವನ್ನು ಕಾಪಾಡಬೇಕು ಎಂದು ಸಚಿವರು ಹೇಳಿದ್ರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews