– ಒಂದು ಮನೆ ಇಟ್ಟುಕೊಂಡು ಹೊರಗೆ ಏನ್ ಮಾಡಿದ್ದೀರಾ ಬಾಯಿ ಬಿಡ್ಲಾ? – ಸಚಿವ ಪ್ರಶ್ನೆ
ಬೆಂಗಳೂರು: ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ಸಿಎಂ ಸಿದ್ದರಾಮಯ್ಯರನ್ನು (Siddaramaiah) ಅಲ್ಲ, ಮೊದಲು ನನ್ನನ್ನು ಫೇಸ್ ಮಾಡಲಿ ಎಂದು ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಸವಾಲ್ ಹಾಕಿದ್ದಾರೆ.
Advertisement
ಸರ್ಕಾರದ ಕುತಂತ್ರದಿಂದ ಎಸ್‌ಐಟಿ ಲೋಕಾಯುಕ್ತ ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್‌ಗೆ ಕೇಳಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿರೋದು ಸರ್ಕಾರ ಅಲ್ಲ. ಲೋಕಾಯುಕ್ತ ಎಸ್‌ಐಟಿ ಅವರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿರೋದು. ಬುಧವಾರ ಕುಮಾರಸ್ವಾಮಿ ನನ್ನನ್ನು ಯಾರು ಏನು ಮಾಡೋಕೆ ಆಗಲ್ಲ ಎಂದು ಹೇಳಿದ್ದಾರೆ. ಎಸ್‌ಐಟಿ ಅನುಮತಿ ಕೇಳಿರೋದಕ್ಕೆ ಸಿದ್ದರಾಮಯ್ಯ ಯಾಕೆ ಮಧ್ಯೆ ಬರುತ್ತಾರೆ? ಎಸ್‌ಐಟಿ ಅವರು ನವೆಂಬರ್‌ನಲ್ಲಿ ರಾಜ್ಯಪಾಲರಿಗೆ ಅನುಮತಿ ಕೇಳಿದ್ದಾರೆ. ಆದರೆ ರಾಜ್ಯಪಾಲರು ಅನುಮತಿ ಕೊಟ್ಟಿಲ್ಲ. ಇದನ್ನೇ ನಾವು ರಾಜ್ಯಪಾಲರಿಗೆ ಕೇಳುತ್ತಿರೋದು. ಸಿದ್ದರಾಮಯ್ಯ ಅವರ ಮೇಲೆ ಖಾಸಗಿ ಅವರು ದೂರು ಕೊಟ್ಟಿದ್ದಕ್ಕೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರು. ಕುಮಾರಸ್ವಾಮಿ ವಿರುದ್ಧ ಎಸ್‌ಐಟಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದೆ. ಯಾಕೆ ಕೊಡಲಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಜನಹಿತಕ್ಕಾಗಿ ಮುಖ್ಯಮಂತ್ರಿ ರಾಜೀನಾಮೆ ಕೊಟ್ಟು ತೊಲಗಲಿ: ಅಶ್ವತ್ಥನಾರಾಯಣ್
Advertisement
Advertisement
ಸ್ವಾಮಿ ಕುಮಾರಸ್ವಾಮಿ ಅವರೇ ನಿಮಗೆ ಸಿದ್ದರಾಮಯ್ಯ ಬಗ್ಗೆ ಮಾತಾಡೋಕೆ ಯಾವ ನೈತಿಕ ಹಕ್ಕು ಇದೆ? ಮುಡಾದಲ್ಲಿ ಸಿದ್ದರಾಮಯ್ಯ ಪಾತ್ರ ಏನಿದೆ? ಇದರಲ್ಲಿ ತಪ್ಪೇನು ಇದೆ. ಸಿದ್ದರಾಮಯ್ಯ ಸಿಎಂ ಇದ್ದಾಗ ಯಾವುದೇ ಜಾಗ ತೆಗೆದುಕೊಂಡಿಲ್ಲ. ಬದಲಿ ಜಾಗ ಕೊಡಿ ಎಂದು ಪತ್ರ ಅವರ ಶ್ರೀಮತಿ ಬರೆದಿದ್ದರು. ಪತ್ರದ ಪ್ರಕಾರ ಬಿಜೆಪಿ ಅವಧಿಯಲ್ಲಿ ಸೈಟ್ ಕೊಟ್ಟಿರೋದು. ಕೇವಲ ಸಿದ್ದರಾಮಯ್ಯ ಹೆಂಡತಿಗೆ ಸೈಟ್ ಕೊಟ್ಟಿಲ್ಲ. ಬಹಳ ಜನರಿಗೆ ಸೈಟ್ ಕೊಡಲಾಗಿದೆ. ಸಿದ್ದರಾಮಯ್ಯ ಪಾತ್ರ ಏನಿದೆ ಇದರಲ್ಲಿ? ಸಿದ್ದರಾಮಯ್ಯ ಅಲ್ಲ, ಮೊದಲು ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: J&K Assembly Polls | ಎನ್‌ಸಿ-ಕಾಂಗ್ರೆಸ್ ಮೈತ್ರಿ ಬಹುತೇಕ ಖಚಿತ; ಮುಂದುವರಿದ ಸೀಟು ಹಂಚಿಕೆ ಮಾತುಕತೆ
Advertisement
ಕುಮಾರಸ್ವಾಮಿ ಮಾತನಾಡಿದರೆ ಧಮ್ಕಿ ಹಾಕೋದು, ಬ್ಲ್ಯಾಕ್‌ಮೇಲ್ ಮಾಡೋದು. ಇದು ಎಷ್ಟು ದಿನ ನಡೆಯುತ್ತದೆ ಕುಮಾರಸ್ವಾಮಿ ಅವರೇ? ಸಿದ್ದರಾಮಯ್ಯ ಬೇಡ, ನೀವು ಮೊದಲು ಜಮೀರ್‌ನನ್ನು ಫೇಸ್ ಮಾಡಿ. ಬಾಯಿಗೆ ಬಂದಂತೆ ಮಾತನಾಡೋದ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಧರ್ಮಗುರುಗಳ ಮೂಲಕ ಮುಸ್ಲಿಮರ ವಿವಾಹ ನೋಂದಣಿಗೆ ತಡೆ – ಹೊಸ ಮಸೂದೆಗೆ ಅಸ್ಸಾಂ ಕ್ಯಾಬಿನೆಟ್ ಅನುಮೋದನೆ
ನಾನು ರಾಮನಗರದಲ್ಲಿ ನಿಮಗೆ ಏನು ಕೇಳಿದೆ? ಸಿಎಂ ಆಗಿದ್ದಾಗ ಕುಮಾರಸ್ವಾಮಿ ಎಷ್ಟು ಮನೆ ರಾಮನಗರ ಜನರಿಗೆ ಕೊಟ್ಟಿದ್ದೀರಾ ಎಂದು ಕೇಳಿದೆ. ಸಿಎಂ ಆದರೂ ನಿಮ್ಮ ಜಿಲ್ಲೆಗೆ ಮನೆ ಕೊಟ್ಟಿಲ್ಲ. ಇದನ್ನು ಕೇಳಿದ್ದು ನಾನು. ಇದಕ್ಕೆ ಅವನು ಯಾರು ಒಂದು ಬಸ್‌ಗೆ ಎರಡು ನಂಬರ್ ಹಾಕಿಕೊಂಡು ಓಡಿಸಿದ್ದವನು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಒಂದು ನಂಬರ್ ಎರಡು ಬಸ್‌ಗೆ ಹಾಕಿಸಿ ಓಡಿಸೋನು ಆಗಿದ್ದರೆ 2017ರವರೆಗೆ ನನ್ನನ್ನು ಯಾಕೆ ನಿಮ್ಮ ಜೊತೆ ಇಟ್ಟುಕೊಂಡ್ರಿ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಟ್ರೈನಿ ವೈದ್ಯೆ ಮೇಲೆ ನಡೆದಿರೋದು ಗ್ಯಾಂಗ್ ರೇಪ್ ಅಲ್ಲ – ಪ್ರಾಥಮಿಕ ತನಿಖೆ ಬಳಿಕ CBI ಮೂಲಗಳಿಂದ ಮಾಹಿತಿ
ಒಂದು ನಂಬರ್‌ಗೆ ಎರಡು ಬಸ್ ಓಡಿಸೋದು ಅದು ನಂದು ಅಲ್ಲ. ಅದು ನಮ್ಮ ಚಿಕ್ಕಪ್ಪನ ಬಸ್. ಈಗಾಗಲೇ ಕೋರ್ಟ್‌ನಲ್ಲಿ ನಾನು ಕ್ಲೀನ್ ಚಿಟ್ ಪಡೆದುಕೊಂಡಿದ್ದೇನೆ. ನಾನು ನಿಮ್ಮ ರೀತಿ ಅಕ್ರಮ ಕೆಲಸ ಮಾಡಿಲ್ಲ. ನಿಮ್ಮ ಬಗ್ಗೆ ನಾನು ಹೇಳಲಾ? ನೀವು ಏನು ಮಾಡಿದ್ದೀರಾ ಹೇಳಲಾ? ಒಂದು ಮನೆ ಇಟ್ಟುಕೊಂಡು ಹೊರಗೆ ಏನು ಮಾಡಿದ್ದೀರಾ ಬಾಯಿ ಬಿಡಲಾ? ಅವೆಲ್ಲಾ ಬೇಡ ಎಂದು ಹರಿಹಾಯ್ದರು. ಇದನ್ನೂ ಓದಿ: Valmiki Scam | ಜೈಲಿಗೆ ಹೋಗೋ ಭಯಕ್ಕೆ ಚಂದ್ರಶೇಖರ್ ಆತ್ಮಹತ್ಯೆ