ಬೆಂಗಳೂರು: ಟಿಪ್ಪು ವಿಚಾರದಲ್ಲಿ ದೇಶದ ಇತಿಹಾಸವನ್ನು ಯಾರು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಂದು ತಿಳಿಸಿದರು.
Advertisement
ಪಠ್ಯಪುಸ್ತಕದಲ್ಲಿ ಟಿಪ್ಪು ವಿಚಾರ ಕೈ ಬಿಡುವ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಪ್ರತಿಕ್ರಿಯೆ ಕೊಟ್ಟ ಡಿಕೆಶಿ, ಇತಿಹಾಸವನ್ನು ಯಾರು ಬದಲಿಸಲು ಸಾಧ್ಯವಿಲ್ಲ. ಈ ದೇಶದ ರಾಷ್ಟ್ರಪತಿಗಳೇ ಟಿಪ್ಪು ಬಗ್ಗೆ ಕಳೆದ ಬಾರಿ ಸದನದಲ್ಲಿ ಹಾಡಿ ಹೊಗಳಿದ್ದಾರೆ. ಸಮಿತಿಯಲ್ಲಿ ಇರುವವರು ಪ್ರಜ್ಞೆ ಇರುವವರು. ಯಾರೂ ಕೂಡ ತಿರುಚೋಕ್ಕೆ ಆಗಲ್ಲ ಎಂದು ಉತ್ತರಿಸಿದರು. ಇದನ್ನೂ ಓದಿ: ಆನ್‍ಲೈನ್ ಗೇಮ್ ನಿಷೇಧ ರದ್ದು: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ
Advertisement
Advertisement
ಟಿಪ್ಪುಗೆ ‘ಮೈಸೂರು ಹುಲಿ’ ಎಂಬ ಬಿರುದು ಗೊಂದಲ ಯಾಕೆ? ಬಿಜೆಪಿ ಅವರು ಲಂಡನ್ ಮ್ಯೂಸಿಯಂಗೆ ಹೋಗಿ ನೋಡ್ಲಿ. ಮೈಸೂರು ಹುಲಿ ಬಿರುದು ನಾವು ಕೊಟ್ಟಿದ್ದಲ್ಲ. ಬ್ರಿಟೀಷರು ಬಿರುದು ಕೊಟ್ಟಿದ್ದು, ಕಾಂಗ್ರೆಸ್ ಕೊಟ್ಟಿದ್ದಲ್ಲ. ಸ್ವತಂತ್ರ ಪೂರ್ವದಲ್ಲೆ ಬ್ರಿಟೀಷರು ಕೊಟ್ಟ ಬಿರುದು ಎಂದರು.
Advertisement
ಹೋಗಿ ಯಾಕೆ ಕೊಟ್ರಿ ಅಂತ ಬ್ರಿಟೀಷರನ್ನ ಕೇಳ್ತೇವಿ ಇರಿ. ರಾಷ್ಟ್ರಪತಿಗಳು ಟಿಪ್ಪು ಬಗ್ಗೆ ಓದಿ ಹೋಗಿದ್ದರು. ಟಿಪ್ಪು ಯಾರು ಅನ್ನೋದು ಎಲ್ಲರಿಗೂ ಗೊತ್ತಿದೆ. ಟಿಪ್ಪು ಬಗ್ಗೆ ಶೃಂಗೇರಿ ಮಠಕ್ಕೆ ಹೋಗಿ ಕೇಳಲಿ ಕೊಲ್ಲೂರಿನಲ್ಲಿ ತಿಳಿದುಕೊಳ್ಳಲಿ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಹೌದು, ನಾನು ತಪ್ಪು ಮಾಡಿದೆ ಕ್ಷಮಿಸಿ : ವಿಲ್ ಸ್ಮಿತ್