ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು (H D Kumaraswamy) ನಾನು ಸರ್ಕಾರದ ಹಣ ತಿಂದಿಲ್ಲ ಎಂದು ಹೇಳಿ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ (MLA H C Balakrishna) ಸವಾಲೆಸೆದಿದ್ದಾರೆ.
ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಡಿಕೆಶಿ ಖಜಾನೆ ವೃದ್ಧಿಗೆ ಇದನ್ನ ಮಾಡ್ತಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಗಳಿಗೆ ನಾವು ಉತ್ತರ ಕೊಡೋದು ಸೂಕ್ತವಲ್ಲ. ಕುಮಾರಸ್ವಾಮಿ ಇತ್ತೀಚಿನ ದಿನಗಳಲ್ಲಿ ಬಾಲಿಶವಾದ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಕುಮಾರಸ್ವಾಮಿ ಹೇಳಿಕೆಯಲ್ಲಿ ಹತಾಶೆ ಮನೋಭಾವ ಕಾಣುತ್ತಿದೆ. ಅವರಿಗೆ ಡಿಕೆ ಶಿವಕುಮಾರ್ ಡಿಸಿಎಂ ಆಗಿರೋದು, ನಾವು ಒಕ್ಕಲಿಗರು ಶಾಸಕರಾಗಿರೋದನ್ನು ಅರಗಿಸಿಕೊಳ್ಳಲು ಆಗ್ತಿಲ್ಲ. ಹೀಗಾಗಿ ಬೇರೆ ಬೇರೆ ರೀತಿ ವಾಖ್ಯಾನ ಮಾಡ್ತಾರೆ ಎಂದರು.
Advertisement
Advertisement
ಕುಮಾರಸ್ವಾಮಿ ಏನೇನೋ ಅರ್ಥವಿಲ್ಲದಂತೆ ಮಾತಾಡ್ತಾರೆ. ಯಾರ ಜಮೀನು ಮೌಲ್ಯ ವೃದ್ಧಿ ಮಾಡಿಕೊಳ್ತಾರೆ.? ಕುಮಾರಸ್ವಾಮಿ ಜಮೀನು ಇಲ್ಲವಾ..? ಕುಮಾರಸ್ವಾಮಿ ಕುಟುಂಬ ಏನು ಸತ್ಯ ಹರಿಶ್ಚಂದ್ರ ಕುಟುಂಬನಾ?. ಸರ್ಕಾರದ ಒಂದು ರೂಪಾಯಿ ದುಡ್ಡನ್ನ ನಾನು ಮತ್ತು ನನ್ನ ಕುಟುಂಬ ಬಳಸಿಕೊಂಡಿಲ್ಲ ಅಂತ ಕುಮಾರಸ್ವಾಮಿ ಧರ್ಮಸ್ಥಳದ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಹೇಳಿದರು. ಇದನ್ನೂ ಓದಿ: ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮಾಡ್ತೇವೆ: ಬಾಲಕೃಷ್ಣ
Advertisement
Advertisement
ಪೊಲೀಸರ ವರ್ಗಾವಣೆಯನ್ನು ಬಿಟ್ಟಿಲ್ಲ. ಪೊಲೀಸರ ವರ್ಗಾವಣೆಯಲ್ಲೂ ಅವರ ಕುಟುಂಬ ದುಡ್ಡು ತೆಗೆದುಕೊಂಡಿದೆ. ಎಲ್ಲರೂ ಗಾಜಿನ ಮನೆಯಲ್ಲಿ ಇರೋದು. ಯಾರು ಕೂಡ ಸತ್ಯ ಹರಿಶ್ಚಂದ್ರರು ಇಲ್ಲ. ಅವಕಾಶ ಸಿಗದೇ ಇರೋನು ಸತ್ಯ ಹರಿಶ್ಚಂದ್ರ ಅಷ್ಟೆ. ಅವಕಾಶ ಸಿಕ್ಕಾಗ ಎಲ್ಲರೂ ಮಾಡಿದ್ದಾರೆ. ಕುಮಾರಸ್ವಾಮಿ ಯಾಕೆ ತಾಜ್ ನಲ್ಲಿ ಇದ್ದರು. ಕುಮಾರಸ್ವಾಮಿ ತಾಜ್ ವೆಸ್ಟ್ ಅಂಡ್ ನಲ್ಲಿ ಇದ್ದಿದ್ದು ಡೀಲ್ ಮಾಡಿಕೊಳ್ಳೋಕೆ. ಸಿದ್ದರಾಮಯ್ಯ ಇದ್ದರು ಅದಕ್ಕೆ ನಾನು ತಾಜ್‍ನಲ್ಲಿ ಇದ್ದೆ ಅಂತಾರೆ. ಕಾವೇರಿಗೆ ಯಾಕೆ ಕಾಯಬೇಕು. ಬೇರೆ ಬಂಗಲೆ ಇರಲಿಲ್ಲವಾ ಎಂದು ಪ್ರಶ್ನಿಸುವ ಮೂಲಕ ಹೆಚ್‍ಡಿಕೆ ವಿರುದ್ಧ ಕಿಡಿಕಾರಿದರು.
ಡಿಕೆ ಶಿವಕುಮಾರ್ (DK Shivakumar) ಅವರಿಗೆ ಅವರದ್ದೇ ಆದ ಬ್ಯುಸಿನೆಸ್ ಇದೆ. ವ್ಯವಹಾರ, ವಹಿವಾಟು ಇದೆ. ಡಿಕೆ ಶಿವಕುಮಾರ್ ಇಲಾಖೆಗಳನ್ನು ಮ್ಯಾನೇಜ್ ಮಾಡಿದ್ದಾರೆ. ಡಿಕೆ ಶಿವಕುಮಾರ್ ಇದ್ದ ಯಾವ ಇಲಾಖೆಯಲ್ಲಿ ಕೆಟ್ಟ ಹೆಸರು ಬಂದಿದೆ. ಇಂಧನ ಇಲಾಖೆಯನ್ನ ಯಶಸ್ವಿಯಾಗಿ ನಿಭಾಯಿಸಿದ್ದಕ್ಕೆ ಮೋದಿ ಕರೆದು ಅವರಿಗೆ ಸನ್ಮಾನ ಮಾಡಿದ್ದಾರೆ. ಕುಮಾರಸ್ವಾಮಿ ಇಂತಹ ಚಿಲ್ಲರೆ ಹೇಳಿಕೆಗಳನ್ನ ಬಿಡಬೇಕು. ಇದನ್ನ ಮುಂದುವರಿಸುತ್ತೇನೆ ಅಂದರೆ ಕುಮಾರಸ್ವಾಮಿ ಮುಂದುವರಿಸಲಿ ಅವರ ಹಣೆಬರಹ ಎಂದರು.
Web Stories